ಮುಂಬಯಿ: ಮುಂಬಯಿ ಷೇರು ವಿನಿಮಯ ಕೇಂದ್ರ ಬಿಎಸ್‌ಇಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹುದ್ದೆಗೆ ಆಶಿಷ್ ಕುಮಾರ್ ಚೌಹಾಣ್ ರಾಜೀನಾಮೆ ಸಲ್ಲಿಸಿದ್ದಾರೆ.
ಚೌಹಾಣ್ ಅವರು ಬಿಎಸ್‌ಇಯ ಪ್ರತಿಸ್ಪರ್ಧಿಯಾಗಿರುವ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ( ಎನ್‌ಎಸ್‌ಇ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಸೇರ್ಪಡೆಯಾಗಿದ್ದಾರೆ. ಚೌಹಾಣ್ ಅವರು ಎನ್‌ಎಸ್‌ಇಯ ಸಂಸ್ಥಾಪನಾ ತಂಡದಲ್ಲೂ ಇದ್ದರು. ಆದರೆ ೨೦೦೦ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸೇರಿದ್ದರು. ಬಳಿಕ ಸ್ಟಾಕ್ ಎಕ್ಸ್‌ಚೇಂಜ್ ವಲಯದಲ್ಲಿ ಕರಿಯರ್ ಕಂಡುಕೊಂಡಿದ್ದರು. ೨೦೦೯ರಲ್ಲಿ ಬಿಎಸ್‌ಇಯ ಡೆಪ್ಯುಟಿ ಸಿಇಒ ಆದರು. ೨೦೧೨ರಲ್ಲಿ ಸಿಇಒ ಆದರು. ಬಿಎಸ್‌ಇ ಈಗಾಗೇ ಹೊಸ ಮುಖ್ಯಸ್ಥರ ಹುಡುಕಾಟದಲ್ಲಿದೆ.
ಬಿಎಸ್‌ಇಯ ಜವಾಬ್ದಾರಿಗಳಿಂದ ೨೦೨೨ರ ಜುಲೈ ೨೫ರಿಂದ ಚೌಹಾಣ್ ಮುಕ್ತರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಚೌಹಾಣ್ ಅವರು ಮೊಬೈಲ್ ಸ್ಟಾಕ್ ಟ್ರೇಡಿಂಗ್ ಅನ್ನು ಪರಿಚಯಿಸಿದ್ದರು. ಮಧ್ಯಂತರ ಅವಧಿಗೆ ಬಿಎಸ್‌ಇಯ ವ್ಯವಹಾರಗಳನ್ನು ನಿರ್ವಹಿಸಲು ಸಮಿತಿಯನ್ನು ರಚಿಸಲಾಗಿದೆ. ಎನ್‌ಎಸ್‌ಇನಲ್ಲಿ ಸಿಇಒ ವಿಕ್ರಮ್ ಲಿಮಯೆ ಅವರ ೫ ವರ್ಷಗಳ ಅವಧಿ ಜುಲೈ ೧೫ಕ್ಕೆ ಮುಕ್ತಾಯವಾಗಿತ್ತು.