ನವ ದೆಹಲಿ: ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited-BSNL) ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು 15%ರಿಂದ 20%ಕ್ಕೆ ಏರಿಸಲು ನಿರ್ಧರಿಸಿದೆ. ಹಾಗೂ ನೆಟ್ ವರ್ಕ್ ಅನ್ನು ಮೇಲ್ದರ್ಜೆಗೆ ಏರಿಸಲು 30,000 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ (CMD) ಪ್ರವೀಣ್ ಕುಮಾರ್ ಪುರ್ವಾರ್ ಹೇಳಿದ್ದಾರೆ.
ಷೇರು ಮಾರುಕಟ್ಟೆಗೆ ಪ್ರವೇಶಿಸುವ ಪ್ಲಾನ್ ಬಿಎಸ್ಸೆನ್ನೆಲ್‌ಗೆ ಇಲ್ಲ. ನಾವು ಸಾಕಷ್ಟು ಬಂಡವಾಳವನ್ನು ಹೊಂದಿದ್ದೇವೆ. ಹೀಗಾಗಿ ಷೇರು ಮಾರುಕಟ್ಟೆಯಿಂದ ನಿಧಿ ಸಂಗ್ರಹಿಸಬೇಕಾದ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ಬಿಎಸ್ಸೆನ್ನೆಲ್ ಸಾರ್ವಜನಿಕ ವಲಯದ ಜವಾಬ್ದಾರಿಯುತ ಕಂಪನಿಯಾಗಿದೆ. ಭಾರತಕ್ಕೆ 4ಜಿ ತಂತ್ರಜ್ಞಾನವನ್ನು ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಭಾರತ ಈಗ 5ಜಿ ತಂತ್ರಜ್ಞಾನ ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿದೆ ಎಂದರು.
ಇದನ್ನೂ ಓದಿ: BSNL 5G service | ಬಿಎಸ್ಸೆನ್ನೆಲ್‌ನಿಂದ 2024ಕ್ಕೆ 5ಜಿ ಸೇವೆ ಆರಂಭ: ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್
ಟೆಲಿಕಾಂ ವಲಯದಕ್ಕೆ ಅಗತ್ಯವಿರುವ ಸಲಕರಣೆಗಳು, ಉತ್ಪನ್ನಗಳನ್ನು ಯಾರಿಸಲು ಬಿಎಸ್ಸೆನ್ನೆಲ್ ದೊಡ್ಡ ಮಟ್ಟಿನ ಹೂಡಿಕೆ ಮಾಡುತ್ತಿದೆ. ನಾವು 4 ಜಿಯಿಂದ 5ಜಿಗೆ ಮೇಲ್ದರ್ಜೆ ಹೊಂದುವ ಆಯ್ಕೆಯನ್ನೂ ಹೊಂದಿದ್ದೇವೆ ಎಂದರು.