ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ೧,೦೪೧ ಅಂಕ ಜಿಗಿಯಿತು. ಸೂಚ್ಯಂಕ ೫೬,೮೫೭ ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ ೨೮೭ ಅಂಕ ಏರಿಕೆ ದಾಖಲಿಸಿ ೧೬,೯೨೯ಕ್ಕೆ ಸ್ಥಿರವಾಯಿತು. ಬ್ಯಾಂಕ್, ತಂತ್ರಜ್ಞಾನ, ಇಂಧನ ವಲಯದ ಷೇರುಗಳು ಗಣನೀಯ ಚೇತರಿಸಿತು.
ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವೇನು?:
ಅಮೆರಿಕದ ಸಕಾರಾತ್ಮಕ ಪ್ರಭಾವ: ಅಮೆರಿಕ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳ ಜಿಗಿತ ಸಕಾರಾತ್ಮಕ ಪ್ರಭಾವ ಬೀರಿತು. ಅಮೆರಿಕದಲ್ಲಿ ಡವ್ ಜಾನ್ಸ್ ಇಂಡಸ್ಟ್ರಿಯಲ್ ಎವರೇಜ್ ಸೂಚ್ಯಂಕ ಮತ್ತು ನಾಸ್‌ಡಾಕ್‌ನ ಸೂಚ್ಯಂಕ ಜಿಗಿಯಿತು. ಅಮೆರಿಕದ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವ ಇತರ ಮಾರುಕಟ್ಟೆಗಳ ಮೇಲಾಯಿತು.
ವಿದೇಶಿ ಹೂಡಿಕೆ ಮರಳುವ ಸಾಧ್ಯತೆ: ಭಾರತದ ಮಾರುಕಟ್ಟೆಗಳಿಂದ ಈ ವರ್ಷ ೨೮.೭೦ ಶತಕೋಟಿ ಡಾಲರ್ ಮೌಲ್ಯದ (ಅಂದಾಜು ೨.೨೬ ಲಕ್ಷ ಕೋಟಿ ರೂ.) ಹೂಡಿಕೆಯನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಿಂತೆಗೆದುಕೊಂಡಿದ್ದಾರೆ. ಆದರೆ ಜುಲೈನಲ್ಲಿ ಹೂಡಿಕೆಯ ಹಿಂತೆಗೆತ ಕಡಿಮೆಯಾಗಿದೆ.
ಡಾಲರ್ ಎದುರು ರೂಪಾಯಿಯ ಚೇತರಿಕೆ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ಮೌಲ್ಯದಲ್ಲಿ ಗುರುವಾರ ೧೪ ಪೈಸೆ ಏರಿಕೆಯಾಗಿದೆ. ಜುಲೈ ೨೮ರಂದು ೭೯.೧೧ಕ್ಕೆ ಚೇತರಿಸಿದೆ.
ಇದನ್ನೂ ಓದಿ:GOLD PRICE| ಬಂಗಾರದ ದರದಲ್ಲಿ ದಿಢೀರ್ 710 ರೂ. ಜಿಗಿತ, ಬೆಳ್ಳಿ 1,200 ರೂ. ತುಟ್ಟಿ