Site icon Vistara News

Business Guide : ನಿಮ್ಮ ಬಿಸಿನೆಸ್‌ ಹೆಚ್ಚಿಸಲು ಖಾಸಗಿ ಬ್ಯಾಂಕ್‌ಗಳಲ್ಲಿ ಲೋನ್‌ ಸಿಗುತ್ತಾ?

ಪ್ರತಿಯೊಬ್ಬರಿಗೂ ತಮ್ಮ ಬಿಸಿನೆಸ್‌ ಅನ್ನು ಹೆಚ್ಚಿಸಲು ಸಾಲದ ಅವಶ್ಯಕತೆ ಇರುತ್ತದೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿಯೂ ಬಿಸಿನೆಸ್‌ ಲೋನ್‌ ಸಿಗುತ್ತದೆ. ಅದು ಹೇಗೆ ಎನ್ನುತ್ತೀರಾ? ಉದಾಹರಣೆಗೆ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಷ್ಟು ಸಾಲ ಸಿಗುತ್ತದೆ? ಹೇಗೆ ಅರ್ಜಿ ಸಲ್ಲಿಸಬೇಕು (Business Guide) ಎಂಬುದನ್ನು ನೋಡೋಣ.

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಬಿಸಿನೆಸ್‌ ಅಗತ್ಯಗಳಿಗೆ 50 ಲಕ್ಷ ರೂ. ತನಕ ಸಾಲ ಸಿಗುತ್ತದೆ. ( ಆಯ್ದ ಸ್ಥಳಗಳಲ್ಲಿ 75 ಲಕ್ಷ ರೂ. ತನಕ ) ಈ ಸಾಲ ಪಡೆಯಲು ಯಾವುದೇ ಮೇಲಾಧಾರ (ಅಡಮಾನ) ಅಗತ್ಯ ಇರುವುದಿಲ್ಲ. ಬಿಸಿನೆಸ್‌ ವಿಸ್ತರಿಸಲು ಮತ್ತು ವರ್ಕಿಂಗ್‌ ಕ್ಯಾಪಿಟಲ್‌ ಮತ್ತು ಇತರ ಪರ್ಸನಲ್‌ ವರ್ಕ್‌ಗಳಿಗೆ ಸಾಲ ಸಿಗಲಿದೆ.

ನೀವು ಈಗಾಗಲೇ ಬಿಸಿನೆಸ್‌ ಲೋನ್‌ ಹೊಂದಿದ್ದರೆ ಅದನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ವರ್ಗಾಯಿಸಬಹುದು. ಈಗಿರುವ ಸಾಲದ ಟ್ರಾನ್ಸ್‌ಫರ್‌ಗೆ ಆಕರ್ಷಕ ಬಡ್ಡಿ ದರ ಲಭ್ಯವಿದೆ ಎಂದು ಬ್ಯಾಂಕ್‌ ತಿಳಿಸಿದೆ. ಈ ಯೋಜನೆಯಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲದೆ ಓವರ್‌ ಡ್ರಾಫ್ಟ್‌ ಫೆಸಿಲಿಟಿ ಸಿಗುತ್ತದೆ. ಓವರ್‌ ಡ್ರಾಫ್ಟ್‌ ಫೆಸಿಲಿಟಿ 1-25 ಲಕ್ಷ ರೂ. ತನಕ ಸಿಗುತ್ತದೆ. ಈ ಸಾಲದ ಮರು ಪಾವತಿಯ ಅವಧಿ 12-48 ತಿಂಗಳಾಗುತ್ತದೆ.

ಅರ್ಹತೆ ಏನು? ಸ್ವಂತ ಉದ್ಯೋಗ ನಡೆಸುತ್ತಿರುವವರು, ಪ್ರೊಪ್ರೈಟರ್ಸ್‌, ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳನ್ನು ನಡೆಸುತ್ತಿರುವವರು, ಪಾರ್ಟ್ನರ್‌ ಶಿಪ್‌ ಕಂಪನಿಗಳು, ಟ್ರೇಡಿಂಗ್‌ ಅಥವಾ ಸೇವಾ ವಲಯದಲ್ಲಿ ವಹಿವಾಟು ನಡೆಸುತ್ತಿರುವವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಬಿಸಿನೆಸ್‌ ವಹಿವಾಟು ಕನಿಷ್ಠ 40 ಲಕ್ಷ ರೂ. ಆಗಿರಬೇಕು. ಈಗಿನ ಬಿಸಿನೆಸ್‌ ಕನಿಷ್ಠ ಮೂರು ವರ್ಷದಿಂದ ಇರಬೇಕು. ಒಟ್ಟು ಐದು ವರ್ಷದ ಅನುಭವ ಇರಬೇಕು. ಕಳೆದ ಎರಡು ವರ್ಷಗಳಿಂದ ಲಾಭದಲ್ಲಿರಬೇಕು. ಅರ್ಜಿದಾರರು ಕನಿಷ್ಠ 21 ವರ್ಷದವರಾಗಿರಬೇಕು. ವಯಸ್ಸು 65 ವರ್ಷ ಮೀರಿರಬಾರದು. ಸಾಲದ ಬಡ್ಡಿ ದರ ಕನಿಷ್ಠ 10.75% ಹಾಗೂ ಗರಿಷ್ಠ 22.5% ಆಗಿರುತ್ತದೆ.

ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕಿನಲ್ಲೂ ಬಿಸಿನೆಸ್‌ ಸಾಲ ಸಿಗುತ್ತದೆ. ನೀವು ಸ್ವಂತ ಬಿಸಿನೆಸ್‌ ನಡೆಸುತ್ತಿದ್ದರೆ, ರಿಟೇಲರ್‌, ಟ್ರೇಡರ್‌, ಪ್ರೊಫೆಶನಲ್‌ ಆಗಿದ್ದರೆ, ದಿನ ನಿತ್ಯದ ಬಿಸಿನೆಸ್‌ ಖರ್ಚು ವೆಚ್ಚಗಳಿಗೆ ಸಾಲದ ಅಗತ್ಯ ಇದ್ದರೆ ಎಕ್ಸಿಸ್‌ ಬ್ಯಾಂಕ್‌ ಅನ್ನು ಸಂಪರ್ಕಿಸಬಹುದು. ಸ್ವಂತ ಉದ್ಯೋಗಿಗಳಿಗೆ ತಕ್ಷಣ ಸಿಗುವ ಫಂಡ್‌ ಅನಿವಾರ್ಯ. ನಿರ್ಣಾಯಕವೂ ಆಗುತ್ತದೆ. ಎಕ್ಸಿಸ್‌ ಬ್ಯಾಂಕ್‌ ಇಎಂಐ ಆಧರಿತ ಬಿಸಿನೆಸ್‌ ಲೋನ್‌ ಅನ್ನು ನೀಡುತ್ತದೆ. ಕನಿಷ್ಠ ದಾಖಲಾತಿಗಳಿದ್ದರೆ ಸಾಕು ಎಂದಿದೆ. ಸಾಲದ ಅರ್ಜಿಯ ಸಂಸ್ಕರಣೆ ಆನ್‌ಲೈನ್‌ ಮೂಲಕ ನಡೆಯುತ್ತದೆ.

ಇದನ್ನೂ ಓದಿ: RBI Monetary Policy: ಸಾಲಗಾರರಿಗೆ ಆರ್‌ಬಿಐ ಗುಡ್‌ ನ್ಯೂಸ್;‌ ರೆಪೋ ದರ ಯಥಾಸ್ಥಿತಿ

ಎಕ್ಸಿಸ್‌ ಬ್ಯಾಂಕಿನ ಬಿಸಿನೆಸ್‌ ಲೋನ್‌ ವಿಭಾಗದಲ್ಲಿ ಕನಿಷ್ಠ ಸಾಲ 50,000 ರೂ. ಸಿಗುತ್ತದೆ. ಗರಿಷ್ಠ 75 ಲಕ್ಷ ರೂ. ಸಾಲ ಸಿಗುತ್ತದೆ. ಇದಕ್ಕಾಗಿ ಯಾವುದೇ ಅಡಮಾನ ನೀಡಬೇಕಾಗಿಲ್ಲ. ಈ ಸಾಲ ಪಡೆಯಲು ಕೆವೈಸಿ ದಾಖಲೆ ಅವಶ್ಯಕ. ಕಳೆದ 6 ತಿಂಗಳಿನ ಬ್ಯಾಂಕ್‌ ಸ್ಟೇಟ್‌ ಮೆಂಟ್‌ ಅವಶ್ಯಕ. ಪ್ಯಾನ್‌ ಕಾರ್ಡ್/ ಫಾರ್ಮ್‌ 60 ಅಗತ್ಯ. ಬಿಸಿನೆಸ್‌ ಪ್ರೂಫ್‌ ತೋರಿಸಬೇಕು.

Exit mobile version