Site icon Vistara News

Business Guide : ನಿರಂತರ ಪರಿಶ್ರಮ, ಕಲಿಕೆ, ಹೊಸ ಆಲೋಚನೆಯೇ ಸೇಲ್ಸ್‌ ಸಕ್ಸಸ್‌ ಮಂತ್ರ

business plan

ರಿಯಾಲ್ಟಿ ಬ್ರೋಕರ್ ಶೈಲೇಂದ್ರ ಅವರ ಬಿಸಿನೆಸ್‌ ಸಕ್ಸಸ್‌ ಸ್ಟೋರಿ ರೋಚಕ. ಕೇವಲ ಮೂರೇ ದಿನಗಳಲ್ಲಿ ಅವರು 30 ಕೋಟಿ ರೂ. ಬೆಲೆ ಬಾಳುವ ಪ್ರಾಪರ್ಟಿಯನ್ನು ಮಾರಿದ್ದರು. ಈ ಡೀಲ್‌ನಲ್ಲಿ ಲಕ್ಷಾಂತರ ರೂ. ಕಮೀಶನ್‌ ಪಡೆದಿದ್ದರು. ಆದರೆ ಈ ಮೂರು ದಿನಗಳ ಹಿಂದೆ ದಶಕಗಳ ‌ಅನುಭವದ ಜರ್ನಿ ಇತ್ತು. ಕಳೆದ ಕೆಲವು ವರ್ಷಗಳಿಂದ ಬಿಸಿನೆಸ್‌ ಟ್ರೈನಿಂಗ್‌ ಕೋರ್ಸ್‌ಗಳನ್ನು ಅವರು ಪಡೆದುಕೊಂಡಿದ್ದರು. ( Business Guide ) ಒಂದು ಸಾಮಾನ್ಯ ಬಡ ಕುಟುಂಬದ ಹಿನ್ನೆಲೆ ಅವರಿಗಿತ್ತು. ಕುಟುಂಬದ ಸದಸ್ಯರು ಒಂದೇ ಸೈಕಲನ್ನು ಬಳಸಬೇಕಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಅವರು ಒಟ್ಟು ಆರು ವಿಧದ ಕಾರುಗಳ ಒಡೆಯ. ನಿರಂತರವಾದ ಪರಿಶ್ರಮ, ಸತತ ಕಲಿಕೆ ಮತ್ತು ಬದ್ಧತೆಯಿಂದ ಈ ಎತ್ತರಕ್ಕೆ ಅವರು ಏರಿದ್ದಾರೆ.

ಬಿಸಿನೆಸ್‌ ತರಬೇತುದಾರ ಭೂಪೇಂದ್ರ ಸಿಂಗ್‌ ರಾಥೋರ್‌ ಅವರ ಡಿಸ್ಕವರ್‌ ಯುವರ್‌ ವಿಶನ್‌ ಎಂಬ ಕೋರ್ಸ್‌ ಅನ್ನು ಶೈಲೇಂದ್ರ ಆಗಿಂದಾಗ್ಗೆ ಪಡೆಯುತ್ತಿದ್ದರು. ಬಿಸಿನೆಸ್‌ ಟೈಕೂನ್‌ ಮಾನ್ಯುಫಾಕ್ಚರಿಂಗ್‌ ಪ್ರೊಸೆಸ್‌ ಎಂಬ ಮತ್ತೊಂದು ಕೋರ್ಸಿಗೂ ಸೇರಿದ್ದರು. ಇದು ಅವರ ಆಲೋಚನೆಯ ಪ್ರಕ್ರಿಯೆಯನ್ನೇ ಬದಲಿಸಿತು. ಯೋಚಿಸುವ ಧಾಟಿ ಮತ್ತು ಜೀವನ ಶೈಲಿಯನ್ನೇ ಬದಲಿಸಿದರು. ಜವಾಬ್ದಾರಿಯನ್ನು ಹೊತ್ತುಕೊಂಡರು. ತಮ್ಮ ಪ್ರಮಾದಗಳಿಗೆ ಜಗತ್ತನ್ನು ದೂರುವುದನ್ನು ನಿಲ್ಲಿಸಿದರು. ಪ್ರೇರಣಾದಾಯಿ ಜನರ ಜತೆಗೆ ಬೆರೆತರು. ದಿನ ನಿತ್ಯದ ಬದುಕಿನಲ್ಲಿ ಸೇಲ್ಸ್‌ ಒಂದಾಯಿತು.

ಶೈಲೇಂದ್ರ ಅವರು ಶೌರ್ಯ ಇನ್ಫೋಟೆಕ್‌ ಎಂಬ ಕಂಪನಿಯ ಮಾಲೀಕರೂ ಹೌದು. ಥಿಂಕಿಂಗ್‌ ಬಿಗ್‌ (ದೊಡ್ಡದಾಗಿ ಆಲೋಚಿಸು) ಎಂಬುದೇ ಅವರ ಮೊದಲ ದೊಡ್ಡ ಹವ್ಯಾಸವಾಗಿತ್ತು. ನಿರೀಕ್ಷೆಗೂ ಮೀರಿ ಬದಲಾದರು. ತರಬೇತಿಯ ಕ್ಲಾಸ್‌ಗಳು ಬೆಳಗ್ಗೆ 5ರಿಂದ ಶುರುವಾಗುತ್ತಿದ್ದರೆ, ಶೈಲೇಂದ್ರ ಅವರು ನಾಲ್ಕಕ್ಕೇ ತಯಾರಾಗುತ್ತಿದ್ದರು. ಬೆಳಗ್ಗೆ 4ರಿಂದ 5ರ ತನಕ ಫೇಸ್‌ ಬುಕ್‌ ಲೈವ್‌ ನಲ್ಲೂ ಭಾಗವಹಿಸುತ್ತಿದ್ದರು. ಕ್ರಮೇಣ ಜನರು ಅವರತ್ತ ಆಕರ್ಷಿತರಾದರು. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅನೇಕ ವಿಡಿಯೊಗಳನ್ನು ರೆಕಾರ್ಡ್‌ ಮಾಡಿ ಅಪ್‌ಲೋಡ್‌ ಮಾಡಿದರು. ಜನರಿಗೆ ಒಳ್ಳೆಯ ಮನೆಗಳನ್ನು ಖರೀದಿಸಲು ಸಹಕರಿಸಿದರು. ಇದು ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಜನರಿಗೆ ಲಾಭವಾಗತೊಡಗಿದಂತೆ ಅವರನ್ನು ಇತರರಿಗೆ ಶಿಫಾರಸು ಮಾಡಲು ಶುರು ಮಾಡಿದರು. ತಮ್ಮ ಐಡಿಯಾಗಳನ್ನು ಮತ್ತು ಕೌಶಲಗಳನ್ನು ಹರಿತಗೊಳಿಸಿದರು.

ಇದನ್ನೂ ಓದಿ: Divya Ayodhya: ರಾಮಮಂದಿರ ಯಾತ್ರಿಕರಿಗಾಗಿ ಬಂತು ಆ್ಯಪ್; ಆಲ್‌ ಇನ್‌ ಒನ್‌ ಗೈಡ್‌ನಲ್ಲೇನಿದೆ?

ದೊಡ್ಡದಾಗಿ ಆಲೋಚಿಸಿ, ಸಣ್ಣದಾಗಿ ಚಿಂತಿಸದಿರಿ. ಯಾವಾಗಲೂ ಉತ್ತಮ ಜನರೊಂದಿಗೆ, ಸಾಧಕರೊಂದಿಗೆ ತುಲನೆ ಮಾಡಿರಿ ಎಂಬ ಮಾತನ್ನು ಶೈಲೇಂದ್ರ ಶಿರಸಾ ವಹಿಸಿದರು. ಪ್ರಮುಖ ನಗರಗಳಲ್ಲಿ ನಡೆಯುವ ಪ್ರಾಪರ್ಟಿ ಸೆಮಿನಾರ್‌ ಗಳಲ್ಲಿ ಭಾಗವಹಿಸಿದರು. ಇದು ಅವರ ಚಿಂತನೆಯ ಪ್ರಕ್ರಿಯೆಯನ್ನೇ ಬದಲಿಸಿತು. ಈ ಸಕ್ಸಸ್‌ ಸ್ಟೋರಿಯ ತಾತ್ಪರ್ಯ ಏನೆಂದರೆ, ಪವರ್‌ ಫುಲ್‌ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಪ್ರತಿ ದಿನ ಬೆಳಗ್ಗೆ ಬೇಗ ಏಳುವುದರಿಂದ ಶುರುವಾಗಿ, ಪ್ರತಿ ದಿನ ಏನನ್ನಾದರೂ ಕಲಿಯುವ ತನಕ ಶಕ್ತಿಯುವ ಹವ್ಯಾಸಗಳನ್ನು ನಿಮ್ಮದಾಗಿಸಿ. ಪ್ರತಿ ದಿನವೂ ಸಕಾರಾತ್ಮಕ ಬದಲಾವಣೆಯನ್ನು ಹೊಂದಿರಿ ಎನ್ನುತ್ತಾರೆ ಭೂಪೇಂದ್ರ ಸಿಂಗ್.‌ ಪಬ್ಲಿಕ್‌ ಸ್ಪೀಕಿಂಗ್‌, ಸೇಲ್ಸ್‌, ರಿಲೇಶನ್‌ ಶಿಪ್‌ ಬಿಲ್ಡಿಂಗ್‌ ಮತ್ತು ಇತರ ಕೌಶಲಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

Exit mobile version