ಸೇಲ್ಸ್‌ನಲ್ಲಿ ಯಶಸ್ಸು ಗಳಿಸಲು ಗ್ರಾಹಕರನ್ನು ದೊರೆಗಳನ್ನು ಕಾಣುವಂತೆ ಗೌರವಿಸಬೇಕು. ಯಾವೊಬ್ಬ ಗ್ರಾಹಕರನ್ನೂ ಕಡೆಗಣಿಸಬಾರದು. ಬಿಸಿನೆಸ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದೂ ಸೂಕ್ತ. ಉತ್ತಮ ಗುಣಮಟ್ಟದ ಉತ್ಪನ್ನ ಅಥವಾ ಸೇವೆಯನ್ನು ನೀಡಬೇಕು. (Business Guide ) ಗುರಿಗಳನ್ನು ಸೆಟ್ ಮಾಡಬೇಕು. ಟಾರ್ಗೆಟ್‌ಗಳನ್ನು ಸೆಟ್ ಮಾಡದೆ ಸೇಲ್ಸ್ ಆಗುವುದಿಲ್ಲ. ಒಂದು ಸಲ ಗುರಿಗಳನ್ನು ನಿಗದಿಪಡಿಸಿದ ಬಳಿಕ ನಿರ್ದಾಕ್ಷಿಣ್ಯವಾಗಿ ಸಾಧಿಸಬೇಕು. ಟಾರ್ಗೆಟ್ ಇಲ್ಲದೆ ದೊಡ್ಡ ಸೇಲ್ಸ್ ಪರ್ಸನ್ ಆಗುವುದನ್ನು ಮರೆತುಬಿಡಿ.
ನಿಮಗೆ ನೀವೇ ಒಂದು ಗುರಿಯನ್ನು ಫಿಕ್ಸ್ ಮಾಡಿ. ಗುರಿಗಳು ದೊಡ್ಡದಾಗಿರಲಿ. ದಾಖಲೆಗಳನ್ನು ಮುರಿಯಿರಿ. ಒಂದು ಸಲ ಗುರಿ ನಿಗದಿಪಡಿಸಿದ ನಂತರ ನೀವೇ ಅದನ್ನು ಮುರಿಯದಿರಿ. ವಾರ್ಷಿಕ ಗುರಿ, ಅರ್ಧ ವಾರ್ಷಿಕ ಗುರಿ, ತ್ರೈಮಾಸಿಕ ಗುರಿ, ಮಾಸಿಕ ಗುರಿ, 15 ದಿನಗಳ ಗುರಿ, ವಾರದ ಗುರಿ, ದಿನದ ಗುರಿ, ಗಂಟೆಗಳ ಗುರಿಯನ್ನು ನಿರ್ಧರಿಸಿ. ಇದು ನಿಮ್ಮನ್ನು ಸದಾ ಕ್ರಿಯಾಶೀಲರನ್ನಾಗಿಸುತ್ತದೆ. ಅದರಲ್ಲಿ ನಿಮ್ಮ ಜೀವನವೇ ಇದೆ ಎಂಬಷ್ಟರಮಟ್ಟಿಗೆ ಛಲದಿಂದ ಮುಂದುವರಿಯಿರಿ. ನಿಮ್ಮ ನೆಟ್ ವರ್ಕ್ ಅನ್ನು ಗಟ್ಟಿಯಾಗಿಸಿ. ಪ್ರತಿ ದಿನ ನಿಮ್ಮನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಶಿಸ್ತುಬದ್ಧತೆ ಮುಖ್ಯ.
ಸೇಲ್ಸ್ ಪ್ರೊಫೆಶನಲ್ ಆಗಿ ನೀವು ಪ್ರತಿ ನಿತ್ಯ ಹಲವು ಕರೆಗಳನ್ನು ಮಾಡಬೇಕಾಗುತ್ತದೆ. ಗ್ರಾಹಕರನ್ನು ಪ್ರತಿ ನಿತ್ಯ ಭೇಟಿ ಮಾಡಬೇಕು. ಪ್ರತಿ ದಿನ ಹೊಸ ಗ್ರಾಹಕರನ್ನು ಭೇಟಿಯಾಗಬೇಕು. ನಿಮ್ಮ ಸೇಲ್ಸ್ ರೆಕಾರ್ಡ್ ಅನ್ನು ಪ್ರತಿ ದಿನ ಟ್ರ್ಯಾಕ್ ಮಾಡಬೇಕು. ತಿರಸ್ಕೃತವಾಗುವುದದನ್ನು ಪ್ರತಿ ದಿನವೂ ಎದುರಿಸಬೇಕು. ಗುರಿಗಳನ್ನು ನಿರ್ಣಯಿಸುವುದು ಎಷ್ಟು ಮುಖ್ಯವೋ, ಅದನ್ನು ಸಾಧಿಸುವುದು ಹಾಗೂ ದಾಖಲಿಸುವುದು ಅಷ್ಟೇ ಮುಖ್ಯ.
ಸೇಲ್ಸ್ ಎಂದರೆ ವೈಜ್ಞಾನಿಕವೂ ಹೌದು. ಸ್ವಾಟ್ ಅನಾಲಿಸಿಸ್ (SWOT analysis) ಅನ್ನು ನೀವು ಮಾಡಬೇಕು. ನಿಮ್ಮ ಬಲ, ದೌರ್ಬಲ್ಯ, ಅವಕಾಶ ಮತ್ತು ಬೆದರಿಕೆ ( strengths, weaknesses, opportunities, threats) ಬಗ್ಗೆ ಅವಲೋಕನ ಮಾಡಬೇಕು. ಸೇಲ್ಸ್‌ನಲ್ಲಿ ಫಲಿತಾಂಶವನ್ನು ಹಣಕ್ಕೆ ಸಮಾನ ಎನ್ನುತ್ತಾರೆ. ಸೇಲ್ಸ್‌ನಲ್ಲಿ ನಾಲ್ಕು ಹಂತಗಳು ಇವೆ. ಮೊದಲ ಹಂತದಲ್ಲಿ ಆರಂಭ ಅಥವಾ ಓಪನಿಂಗ್ ಮುಖ್ಯ. ಉದಾಹರಣೆಗೆ ನೀವು ಯೂಟ್ಯೂಬ್ ವಿಡಿಯೊ ಮಾಡುವುದಿದ್ದರೆ ಮೊದಲ ಮೂರು ಸೆಕೆಂಡ್ ಮುಖ್ಯ. ಅದು ಚೆನ್ನಾಗಿರದಿದ್ದರೆ ವೀಕ್ಷಕರು ಮುಂದೆ ನೋಡದೆಯೂ ಇರಬಹುದು. ನಿಮ್ಮ ಓಪನಿಂಗ್ ರಿಮಾರ್ಕ್ ಪ್ರಬಲವಾಗಿ ಇರಬೇಕು. ಆನ್‌ಲೈನ್ ಅಥವಾ ಆಫ್ ಲೈನ್ ಮೀಟಿಂಗ್‌ಗೆ ಇದು ಅನ್ವಯ.
ಇದನ್ನೂ ಓದಿ: Money Guide : ಮಾರ್ಕೆಟ್ ಬಿದ್ದಾಗ ಮ್ಯೂಚುವಲ್ ಫಂಡ್ ಹೂಡಿಕೆ ಹೇಗೆ?
ಎರಡನೇ ಹಂತದಲ್ಲಿ ಪ್ರೋಬಿಂಗ್ (Probing) ಮಾಡಬೇಕು. ಗ್ರಾಹಕರು ಎದುರಿಸುತ್ತಿರುವ ಸವಾಲುಗಳನ್ನು ಕೇಳಬೇಕು. ನಿಮ್ಮ ಉತ್ಪನ್ನ ಅಥವಾ ಸೇವೆ ಹೇಗೆ ಅವರಿಗೆ ಸಹಕರಿಸಲಿದೆ ಎಂಬುದನ್ನು ತಿಳಿಸಬೇಕು. ಮೂರನೇ ಹಂತದಲ್ಲಿ ಡೀಲ್ ಕ್ಲೋಸ್ ಮಾಡಬೇಕು. ನಾಲ್ಕನೇ ಹಂತದಲ್ಲಿ ಸಪೋರ್ಟಿಂಗ್ ಮಾಡಬೇಕು. ವ್ಯಾಪಾರ ನಡೆಸಿದ ಬಳಿಕ ನೀಡುವ ಸೇವೆಯನ್ನು ಕೊಡಬೇಕು.