ಯಾರು ಚಿನ್ನವನ್ನು ಹೊಂದಿದ್ದಾರೋ , ಅವರು ಈ ಕ್ಷಣಕ್ಕೆ ಶ್ರೀಮಂತರು. ( Business Guide ) ಯಾರು ಜ್ಞಾನ ಮತ್ತು ಕೌಶಲವನ್ನು ಹೊಂದಿದ್ದಾರೋ, ಅವರು ಜೀವಮಾನವಿಡೀ ಶ್ರೀಮಂತರಾಗುತ್ತಾರೆ. ನಿಜವಾದ ಸಂಪತ್ತು ಯಾವುದು ಎಂದರೆ ನಿಮಗೆ ಏನು ಗೊತ್ತಿದೆ ಮತ್ತು ನೀವೇನು ಮಾಡಬಲ್ಲಿರಿ ಎಂಬುದಾಗಿದೆ.
ನೀವು ನಿಮ್ಮ ಬಿಸಿನೆಸ್ ಲೈಫ್‌ನಲ್ಲಿ ಇರಬಹುದು ಅಥವಾ ಒಟ್ಟಾರೆ ಬದುಕಿನಲ್ಲಿರಬಹುದು, ಯಶಸ್ಸು ಗಳಿಸಲು ಐದು ವಿಷಯಗಳಲ್ಲಿ ನೀವು ಪರಿಣತಿಯನ್ನು ಹೊಂದಿರಬೇಕು. ಅದು ಯಾವುದು ಎಂದರೆ ನೀವೇನು ತಿಳಿದುಕೊಂಡಿದ್ದೀರಿ ಎನ್ನುವುದು. ಅಂದರೆ ನಿಮ್ಮ ಜ್ಞಾನ. ಎರಡನೆಯದಾಗಿ, ನೀವೇನು ಮಾಡಬಲ್ಲಿರಿ ಎಂಬುದು. ಅಂದರೆ ನಿಮ್ಮ ಕೌಶಲಗಳು. ಮೂರನೆಯದ್ದು ಯಾರು ನಿಮ್ಮನ್ನು ಬಲ್ಲರು ಎಂಬುದು. ಅಂದರೆ ನಿಮ್ಮ ನೆಟ್ ವರ್ಕ್. ನಾಲ್ಕನೆಯದಾಗಿ ನಿಮ್ಮ ಬಳಿ ಏನಿದೆ ಎಂಬುದು. ಅಂದರೆ ನಿಮ್ಮ ಸಂಪನ್ಮೂಲಗಳು. ಐದನೆಯದಾಗಿ ಜಗತ್ತು ನಿಮ್ಮ ಬಗ್ಗೆ ಹೇಗೆ ಆಲೋಚಿಸುತ್ತದೆ ಎಂಬುದು. ಅಂದರೆ ನಿಮ್ಮ ಘನತೆ. ಒಟ್ಟಿನಲ್ಲಿ ನಿಮ್ಮ ಜ್ಞಾನ, ಕೌಶಲ, ನೆಟ್ ವರ್ಕ್, ಸಂಪನ್ಮೂಲ, ಮತ್ತು ಘನತೆ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ.
ಬಿಸಿನೆಸ್ ಸಕ್ಸಸ್‌ಗೆ 5 ಸೂತ್ರಗಳಿವು |
ನಿಮ್ಮಲ್ಲಿರುವ ಜ್ಞಾನ |
ನಿಮ್ಮಲ್ಲಿರುವ ಕೌಶಲ |
ನಿಮ್ಮ ನೆಟ್ ವರ್ಕ್ |
ನಿಮ್ಮ ಸಂಪನ್ಮೂಲ |
ನಿಮ್ಮ ವ್ಯಕ್ತಿತ್ವದ ವರ್ಚಸ್ಸು, ಘನತೆ |
ನಾವು ಸಾಮಾನ್ಯವಾಗಿ ನಮ್ಮ ಪ್ರೊಫೆಶನಲ್ ಲೈಫ್ ಅನ್ನು ಜ್ಞಾನ ಗಳಿಸುವ ಮೂಲಕ ಆರಂಭಿಸುತ್ತೇವೆ. ಶಾಲೆ-ಕಾಲೇಜು-ಯುನಿವರ್ಸಿಟಿಗಳಲ್ಲಿ ಓದುವ ಮೂಲಕ ಜ್ಞಾನವನ್ನು ಸಂಪಾದಿಸುತ್ತೇವೆ. ಹೀಗೆ ಗಳಿಸಿದ ಜ್ಞಾನವನ್ನು ಅಪ್ಲೈ ಮಾಡುವುದನ್ನು ಅಥವಾ ಕಾರ್ಯಗತಗೊಳಿಸುವುದನ್ನು ಕೌಶಲ ಎನ್ನುತ್ತೇವೆ. ನಿಮ್ಮಲ್ಲಿ ಜ್ಞಾನ ಮತ್ತು ಕೌಶಲ ಎರಡೂ ಇದ್ದಾಗ ವೃತ್ತಿಪರವಾಗಿ ಇತರರಿಗೆ ಮಹತ್ವದ ಮೌಲ್ಯ ಇರುವವರಾಗುತ್ತೀರಿ. ಮತ್ತು ನಿಮ್ಮ ನೆಟ್ ವರ್ಕ್ ಬೆಳೆಯುತ್ತದೆ. ನಿಮ್ಮ ಜ್ಞಾನ, ಕೌಶಲ, ನೆಟ್ ವರ್ಕ್ ಬೆಳೆದಾಗ ಸಂಪನ್ಮೂಲವೂ ಹೆಚ್ಚುತ್ತದೆ. ( ಬಿಸಿನೆಸ್ ಗೈಡ್ ) ಹೀಗೆ ನಿಮ್ಮ ಜ್ಞಾನ, ಕೌಶಲ, ನೆಟ್ ವರ್ಕ್ ಮತ್ತು ಸಂಪನ್ಮೂಲ ವೃದ್ಧಿಸಿದಾಗ ನಿಮ್ಮ ಘನತೆಯೂ ನಿಸ್ಸಂದೇಹವಾಗಿ ಹೆಚ್ಚುತ್ತದೆ.
ಇದನ್ನೂ ಓದಿ: Money Guide: 25 ಸಾವಿರ ರೂ. ಸಂಬಳದಲ್ಲಿ ಪ್ರತಿ ತಿಂಗಳು 9,500 ರೂ. ಉಳಿಸಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಜ್ಞಾನ, ಕೌಶಲ, ನೆಟ್ ವರ್ಕ್, ಸಂಪನ್ಮೂಲ ಮತ್ತು ಘನತೆಯಲ್ಲಿ ಮೊದಲನೆಯದ್ದಾಗಿರುವ ಜ್ಞಾನವನ್ನು ಗಳಿಸುವುದು ಎಲ್ಲಕ್ಕಿಂತ ಮುಖ್ಯ. ಅದನ್ನು ಗಳಿಸಲು ಇನ್ವೆಸ್ಟ್ ಮಾಡಿಕೊಳ್ಳಬೇಕು. ಹರ ಸಾಹಸ ಪಡಬೇಕು. ಚಿಂತನ-ಮಂಥನ ನಡೆಸಬೇಕು. ಏಕೆಂದರೆ ಅದು ಹೆಚ್ಚು ಫಲವನ್ನು ಕೊಡುತ್ತದೆ. ಮಾತ್ರವಲ್ಲದೆ ಗಳಿಸಿದ ಜ್ಞಾನವನ್ನು ನೀವು ಕಾರ್ಯಗತಗೊಳಿಸಿದಾಗ ಅದುವೇ ಕೌಶಲ ಎನ್ನಿಸುತ್ತದೆ. ಮತ್ತು ಉಳಿದ ಮೂರನ್ನು ಗಳಿಸುವುದು ಆಗ ಸುಲಭವಾಗುತ್ತದೆ. ಈ ಐದೂ ವಿಷಯಗಳು ಒಂದಕ್ಕೊಂದು ಸಂಬಂಧ ಹೊಂದಿರುವುದನ್ನೂ ಇಲ್ಲಿ ಗಮನಿಸಬಹುದು. ಇದನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಹೆಚ್ಚು ಸಂಬಳ ನೀಡುವ ಕೆಲಸಗಳು ಹಾಗೂ ಕಡಿಮೆ ಸಂಬಳ ಮತ್ತು ಕೌಶಲದ ಕೆಲಸಗಳನ್ನು ಹೋಲಿಸಬಹುದು. ನಮ್ಮ ಒಳಗೆಯೇ ಇರುವ ಇಗೊ ಅಥವಾ ಅಹಂನಿಂದಾಗಿ ಜ್ಞಾನ ಮತ್ತು ಕೌಶಲವನ್ನು ಗಳಿಸಲು ಸಾಧ್ಯವಾಗದೆಯೇ ಹೋಗಬಹುದು. ಹೀಗಾಗಿ ಅಹಂ ಅನ್ನು ಬಿಟ್ಟು ಜ್ಞಾನ ಮತ್ತು ಕೌಶಲವನ್ನು ಸಂಪಾದಿಸಬೇಕು. ಅಹಂ ಇದ್ದಾಗ ಜ್ಞಾನ ಮತ್ತು ಕೌಶಲ ಇಲ್ಲದಿದ್ದರೂ ಸಂಪನ್ಮೂಲ ಅಥವಾ ಹಣ ಇಲ್ಲವೇ ಉದ್ಯೋಗ ಗಳಿಸಲು ಯತ್ನಿಸುತ್ತೇವೆ. ಇಗೊದ ಪ್ರಲೋಭನೆಗೆ ಒಳಗಾದಾಗ ದುರ್ಬಲವಾದ ಫೌಂಡೇಷನ್ ಮೇಲೆ ನಮ್ಮ ಕರಿಯರ್ ಅನ್ನು ಕಟ್ಟಲು ಹೊರಡುತ್ತೇವೆ. ಆದ್ದರಿಂದ ತಾಳ್ಮೆಯಿಂದ ಮೊದಲು ಜ್ಞಾನ ಮತ್ತು ಕೌಶಲವನ್ನು ಗಳಿಸಿಕೊಳ್ಳಿ.