Site icon Vistara News

Business Guide : ಶ್ರೀಮಂತರಾಗಲು ಹೇಗೆ ಸೇಲ್ಸ್‌ ಮಾಡಬೇಕು? ಇಲ್ಲಿದೆ ಸೀಕ್ರೆಟ್ಸ್

iPhone

ನೀವು ಮಿಲಿಯನೇರ್‌ ಆಗಲು ಸೇಲ್ಸ್‌ ಅನ್ನು ಇಷ್ಟಪಟ್ಟು ಮಾಡಲೇಬೇಕಾಗುತ್ತದೆ. ಸೇಲ್ಸ್‌ ಅಂದರೆ ರಿಜೆಕ್ಷನ್‌ ಇದ್ದೇ ಇರುತ್ತದೆ. ರಿಜೆಕ್ಷನ್‌ ಅನ್ನು ನಿರ್ವಹಿಸುತ್ತಲೇ ಮುನ್ನಡೆಯುವುದು ಸೇಲ್ಸ್‌ಗೆ ಅಗತ್ಯ. ನೀವು ಸೇಲ್ಸ್‌ ಅನ್ನು ಪ್ರೀತಿಸದಿದ್ದರೆ ಶ್ರೀಮಂತರಾಗಲು ಸಾಧ್ಯವಿಲ್ಲ. ಯಾವುದೇ ಸಂಸ್ಥೆ ಸೇಲ್ಸ್‌ ಹೊರತುಪಡಿಸಿ ಇರುವುದಿಲ್ಲ. ಸೇಲ್ಸ್‌ ಇಲ್ಲದೆ ಯಾವುದೇ ಸಂಸ್ಥೆ ಬೆಳೆಯುವುದಿಲ್ಲ. ಕಾರ್ಪೊರೇಟ್‌ ಕಂಪನಿಯಾಗಿರಬಹುದು, ಬಿಸಿನೆಸ್‌ ಆಗಿರಬಹುದು, ರಿಲೀಜಿಯಸ್‌ ಸಂಸ್ಥೆಯಾಗಿರಬಹುದು, ಸೇಲ್ಸ್‌ ಬೇಕಾಗುತ್ತದೆ.

ಪತಂಜಲಿ, ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಷನ್‌, ಇಶಾ ಯೋಗ ಇರಬಹುದು. ಅವರ ಕಾರ್ಯಕ್ರಮಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ನಿಮ್ಮ ಬದುಕನ್ನು ಪರಿವರ್ತಿಸುವುದು, ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು, ಆಯುರಾರೋಗ್ಯ ಸುಧಾರಿಸುವುದು, ಧ್ಯಾನದ ತರಬೇತಿ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅವರು ಸೇಲ್ಸ್‌ ಮಾಡಬಹುದು. ಅಂಥ ಸಂಸ್ಥೆಗಳು ನಿಮಗೆ ಯಾವುದನ್ನಾದರೂ ಮಾರಾಟ ಮಾಡದಿದ್ದರೆ, ಅವುಗಳನ್ನು ನೀವು ಖರೀದಿಸದಿದ್ದರೆ ನಿಮಗೂ ಅಂಥ ಪ್ರಯೋಜನ ಸಿಗದು.

ನೀವು ಸೇಲ್ಸ್‌ ಆರಂಭಿಸಿದಾಗ ತಿರಸ್ಕಾರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಕೆಲವೊಮ್ಮೆ ಹೆಚ್ಚು ತಿರಸ್ಕಾರಗಳು ಸಿಗಬಹುದು. ನೀವು ತಿರಸ್ಕಾರಗಳನ್ನು ಎದುರಿಸಲು ರೆಡಿಯಾಗಿರಬೇಕು. ಇದು ಸುಲಭವಲ್ಲ. ವ್ಯಾಪಾರದ ಜಗತ್ತಿನಲ್ಲಿ ಕಂಫರ್ಟ್‌ ಝೋನ್‌ನಲ್ಲಿ ಇರುವ ಸೇಲ್ಸ್‌ ಪರ್ಸನ್ಸ್‌ ಕಡಿಮೆ. ನೀವು ಸೇಲ್ಸ್‌ನಲ್ಲಿರುವ ಲಾಭಗಳನ್ನು ಅರಿತಾಗ ಅದನ್ನು ಇಷ್ಟಪಡಲು ಶುರು ಮಾಡುತ್ತೀರಿ. ನಿಮ್ಮ ಎಲ್ಲ ಕನಸುಗಳೂ ಸೇಲ್ಸ್‌ನಲ್ಲಿ ಚತುರನಾದರೆ ಮಾತ್ರ ಸಾಧ್ಯ ಎಂದು ಮನವರಿಕೆ ಮಾಡಿಕೊಳ್ಳಬೇಕು. ನಿಮ್ಮ ಈ ಗುರಿಯನ್ನು ಒಂದು ಪುಸ್ತಕದಲ್ಲಿ ಬರೆಯಿರಿ. ಪ್ರತಿ ದಿನ ಅದನ್ನು ಮನನ ಮಾಡಿರಿ.

ನೀವು ಮಾರಾಟ ಮಾಡುವ ಉತ್ಪನ್ನ ಅಥವಾ ಸೇವೆಯ ಬಗ್ಗೆ ಆಳವಾಗಿ ತಿಳಿದುಕೊಳ್ಳಿ. ದಿನದ ಇಪ್ಪತ್ತನಾಲ್ಕು ಗಂಟೆ ಅದನ್ನೇ ಧ್ಯಾನಿಸಿ. ಪ್ರಾಡಕ್ಟ್‌ ತಜ್ಞರ ಜತೆಗೆ ಮಾತನಾಡಿ. ಅದು ಯಶಸ್ಸಿಗೆ ಮೊದಲ ಹೆಜ್ಜೆಯಾಗುತ್ತದೆ. ಎರಡನೆಯದಾಗಿ ಪವರ್‌ ಫುಲ್‌ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿ ತಜ್ಞರು ಬರೆದ ಪುಸ್ತಕಗಳನ್ನು ಓದಿರಿ. ಸೇಲ್ಸ್‌, ಪೀಕ್‌ ಪರ್ಫಾಮೆನ್ಸ್‌, ಇಮೋಶನಲ್‌ ಇಂಟಲೆಜೆನ್ಸ್‌, ಆರ್ಟ್‌ ಆಫ್‌ ನೆಗೋಶಿಯೇಶನ್‌ ಬಗ್ಗೆ ಪುಸ್ತಕಗಳನ್ನು ಓದಿರಿ. ಯಶಸ್ಸಿನ ಸೂತ್ರಗಳನ್ನು ಕೆಲವು ಗಂಟೆಗಳಲ್ಲಿ ಅರಿತುಕೊಳ್ಳಬಹುದು. ಸೇಲ್ಸ್‌ನಲ್ಲಿ ಇರುವವರು ದಿನವೂ ಧ್ಯಾನ ಮಾಡಬೇಕು. ಅದು ಮೂರು ನಿಮಿಷ ಇರಬಹುದು, ಐದು ನಿಮಿಷ ಇರಬಹುದು, ಹದಿನೈದು ನಿಮಿಷ ಇರಬಹುದು, ಧ್ಯಾನ ಮಾಡಬೇಕು. ನಿಮ್ಮ ಗುರಿಗಳ ಬಗ್ಗೆ ಫೋಕಸ್ಡ್‌ ಆಗಿರಿ. ಪ್ರತಿಯೊಬ್ಬ ಗ್ರಾಹಕರ ಮೇಲೂ ಗಮನ ಹರಿಸಿ. ವಿಧೇಯರಾಗಿರಿ.

ಟಾರ್ಗೆಟ್‌ಗಳನ್ನು ಸೆಟ್‌ ಮಾಡದಿದ್ದರೆ ಸೇಲ್ಸ್‌ ಮಾಡಲು ಸಾಧ್ಯವಾಗುವುದಿಲ್ಲ. ಕಾರ್ಪೊರೇಟ್‌ ಕಂಪನಿಗಳಲ್ಲಿ ವಾರ್ಷಿಕ ಸಭೆ ಇರುತ್ತದೆ. ಅದರಲ್ಲಿ ಕಂಪನಿಯ ಗುರಿಗಳನ್ನು ಹೇಳುತ್ತಾರೆ. ಒಂದು ಸಲ ಗುರಿ ನಿಗದಿಪಡಿಸಿದ ಬಳಿಕ ಗುರಿ ಸಾಧನೆಯ ಬಗ್ಗೆ ನಿರ್ದಯವಾಗಿರಿ. ಟಾರ್ಗೆಟ್‌ ಇಲ್ಲದಿದ್ದರೆ ಬೆಸ್ಟ್‌ ಸೇಲ್ಸ್‌ ಪರ್ಸನ್‌ ಆಗುವ ಕನಸನ್ನು ಕೈ ಬಿಡಿ. ನೀವು ವರ್ಷಕ್ಕೆ ಎಷ್ಟು ಪುಸ್ತಕ ಬರೆಯಬೇಕು, ಎಷ್ಟು ಕೃತಿಗಳನ್ನು ಪ್ರಕಾಶನ ಮಾಡಬೇಕು, ಎಷ್ಟು ಹೋಟೆಲ್‌ಗಳನ್ನು ಆರಂಭಿಸಬೇಕು. ಎಷ್ಟು ಜನರಲ್‌ ಸ್ಟೋರ್‌ಗಳನ್ನು ತೆರೆಯಬೇಕು, ಎಷ್ಟು ಶಾಪ್‌ಗಳನ್ನು ಶುರು ಮಾಡನೇಕು ಎಂದು ಗುರಿ ನಿಗದಿಪಡಿಸಬಹುದು. ನಿಮ್ಮ ಫೀಲ್ಡಿಗೆ ತಕ್ಕಂತೆ ಟಾರ್ಗೆಟ್‌ ಸೆಟ್‌ ಮಾಡಬಹುದು.

Exit mobile version