Site icon Vistara News

Business Guide :‌ ಹೊಸ ಬಿಸಿನೆಸ್‌ ಆರಂಭಿಸುವುದು ಹೇಗೆ? ಇಲ್ಲಿದೆ ಚೆಕ್‌ಲಿಸ್ಟ್

Businessman

ಯಾವುದಾದರೂ ಹೊಸ ಬಿಸಿನೆಸ್‌ ಆರಂಭಿಸುವುದಕ್ಕೆ ಮುನ್ನ ಅದರ ನೋಂದಣಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯ. ನಿಮ್ಮ ಬಿಸಿನೆಸ್‌ಗೆ (Business Guide ) ಒಂದು ಹೆಸರು ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ಚಾರ್ಟರ್ಡ್‌ ಅಕೌಂಟೆಂಟ್‌ (ಸಿಎ) ನೆರವು ಪಡೆದುಕೊಳ್ಳಬಹುದು. ಷೇರುದಾರರ ಜತೆಗಿನ ಅಗ್ರಿಮೆಂಟ್‌ ಮಾಡಿಕೊಳ್ಳಬೇಕು.

ಕಂಪನಿಯ ಅಥವಾ ಬಿಸಿನೆಸ್‌ನ ನೋಂದಣಿಗೆ ನಿಮ್ಮ ಚಾರ್ಟರ್ಡ್‌ ಅಕೌಂಟೆಂಟ್‌ ಡಿಜಿಟಲ್‌ ಸೆಕ್ಯುರಿಟಿ ಸರ್ಟಿಫಿಕೇಟ್‌ ( Digital security certificate) ಪಡೆದುಕೊಳ್ಳಬೇಕು. ಡೈರೆಕ್ಟರ್‌ ಐಡೆಂಟಿಫಿಕೇಶನ್‌ ನಂಬರ್‌ (ಡಿಐಎನ್)‌ ಪಡೆಯಬೇಕು. ಕಾರ್ಪೊರೇಟ್‌ ವ್ಯವಹಾರಗಳ ಇಲಾಖೆಯ (ಎಂಸಿಎ) ವೆಬ್‌ ಪೋರ್ಟಲ್‌ನಲ್ಲಿ ಅಕೌಂಟ್‌ ತೆರೆಯಬೇಕು. ( Ministry of corporate affairs ) ಇವಿಷ್ಟನ್ನೂ ನೀವಾಗಿಯೂ ಮಾಡಬಹುದು.

ಇದನ್ನೂ ಓದಿ: Business Guide : 2024ರಲ್ಲಿ ಹೊಸ ಬಿಸಿನೆಸ್‌ ಆರಂಭಿಸಲು 10 ಬೆಸ್ಟ್‌ ಐಡಿಯಾ

ನಿಮ್ಮ ಕಂಪನಿಯ ಪ್ರಾಡಕ್ಟ್‌ ಮತ್ತು ಲೋಗೊದ ವಿನ್ಯಾಸವನ್ನು ಸಿದ್ಧಪಡಿಸಬೇಕು. ಡೈರೆಕ್ಟರ್‌ ಐಡೆಂಟಿಫಿಕೇಶನ್‌ ನಂಬರ್‌ (Director identification number) ಪಡೆಯಬೇಕು. ಎಂಸಿಎ ಪೋರ್ಟಲ್‌ನಲ್ಲಿ ಅಕೌಂಟ್‌ ತೆರೆಯಬೇಕು. ಈ ವೆಬ್‌ ಪೋರ್ಟಲ್‌ ಕಂಪನಿಗಳು ಮತ್ತು ಎಲ್‌ಎಲ್‌ಪಿಗಳಿಗೆ ( limited liability partnerships) ಹಲವು ರೀತಿಯಲ್ಲಿ ಸಹಕರಿಸುತ್ತದೆ. ಕಂಪನಿಯನ್ನು ತೆರೆಯುವುದರಿಂದ ಶುರುವಾಗಿ ಮುಚ್ಚುವ ತನಕ ಸೇವೆಗಳನ್ನು ಒದಗಿಸುತ್ತದೆ. ಬಿಸಿನೆಸ್‌ ಶುರು ಮಾಡುವ ಮುನ್ನ ಪರಿಶೀಲಿಸಬೇಕಾದ ಮುಖ್ಯಾಂಶಗಳು ಇಂತಿವೆ-

1. ಬಿಸಿನೆಸ್‌ ಪ್ಲಾನ್‌ ರಚಿಸಿ. 2. ಉತ್ಪನ್ನವನ್ನು ತಯಾರಿಸುವುದು ಮತ್ತು ಮಾರುಕಟ್ಟೆ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಸಂಶೋಧಿಸಿ. 3. ಬಿಸಿನೆಸ್‌ಗೆ ಒಂದು ಹೆಸರು ಕೊಡಿ ಹಾಗೂ ಎಂಸಿಎ ಅಡಿಯಲ್ಲಿ ನೋಂದಾಯಿಸಿ. 4. ನಿಮ್ಮ ಬಿಸಿನೆಸ್‌ ಅನ್ನು LTD ಅಥವಾ LLP ಎಂದು ನೋಂದಾಯಿಸಿ. ಚಾರ್ಟರ್ಡ್‌ ಅಕೌಂಟೆಂಟ್‌ ಅಥವಾ ವಕೀಲರು ನಿಮಗೆ ಸಹಕರಿಸಬಹುದು. 5. ಎರಡು ಅಥವಾ ಮೂರು ಕೆಟಗರಿಗಳಲ್ಲಿ ಟ್ರೇಡ್‌ ಮಾರ್ಕ್‌ ಪಡೆಯಲು ಅರ್ಜಿ ಸಲ್ಲಿಸಿ. 6. ಡೊಮೈನ್‌ ಹೆಸರು ಪಡೆಯಿರಿ. 7. ಹಣಕಾಸು ಹೊಂದಿಸುವುದರ ಬಗ್ಗೆ ಯೋಚಿಸಿ. ನಿಮ್ಮ ಉಳಿತಾಯ, ಸ್ನೇಹಿತರ ನೆರವು, ಇಲ್ಲವೇ ಹೂಡಿಕೆದಾರರ ನೆರವು ಪಡೆಯಿರಿ. 8. ಷೇರುದಾರರ ಜತೆಗಿನ ಒಪ್ಪಂದ ರಚಿಸಿ.

ನೀವು ಒಂದು ಬೇಕರಿ ತೆರೆಯಲು ಬಯಸುತ್ತಿದ್ದರೆ ಯಾವೆಲ್ಲ ಲೈಸೆನ್ಸ್‌ ಬೇಕು? ಎಫ್‌ಎಸ್‌ಎಸ್‌ಎಐ ಲೈಸೆನ್ಸ್‌, ಜಿಎಸ್‌ಟಿ ರಿಜಿಸ್ಟ್ರೇಶನ್‌, ಸ್ಥಳೀಯ ಮುನ್ಸಿಪಲ್‌ ಕಾರ್ಪೊರೇಷನ್‌ನಿಂದ ಹೆಲ್ತ್‌ ಲೈಸೆನ್ಸ್‌, ಫೈರ್‌ ಲೈಸೆನ್ಸ್‌.

ನೀವು ಕಾನೂನುಬದ್ಧವಾಗಿ ಒಂದು ಕಿರಾಣಾ ಅಂಗಡಿ ತೆರೆಯಲು ಬಯಸುತ್ತಿದ್ದರೆ, ಶಾಪ್‌ & ಎಸ್ಟಾಬ್ಲಿಷ್‌ಮೆಂಟ್‌ ರಿಜಿಸ್ಟ್ರೇಶನ್‌, ಫುಡ್‌ ಲೈಸೆನ್ಸ್‌, ಎಂಟ್ರಿ ರಿಜಿಸ್ಟ್ರೇಶನ್‌ ಮತ್ತು ನಿಮ್ಮ ವಹಿವಾಟು ವಾರ್ಷಿಕ 20 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ ಜಿಎಸ್‌ಟಿ ಅಗತ್ಯವಾಗುತ್ತದೆ. ಆದ್ದರಿಂದ ಜಿಎಸ್‌ಟಿ ಐಡೆಂಟಿಫಿಕೇಶನ್‌ ನಂಬರ್‌ ಪಡೆಯಿರಿ.

ಭಾರತದಲ್ಲಿ ಅಸಂಘಟಿತ ವಲಯದ ಅನೇಕ ಮಂದಿ ನೋಂದಣಿ ಮಾಡಿಸಿಕೊಳ್ಳದೆಯೂ ಸಣ್ಣ ಪುಟ್ಟ ಬಿಸಿನೆಸ್‌ ಮಾಡುತ್ತಿರುತ್ತಾರೆ. ಇದರಿಂದ ತೊಂದರೆ ಆಗದಿದ್ದರೂ, ಕೆಲವು ಸೌಲಭ್ಯಗಳಿಂದ ಅವರು ವಂಚಿತರಾಗುತ್ತಾರೆ. ವ್ಯಾಪಾರ ಕಾನುನುಬದ್ಧವಾಗಿದ್ದಾಗ ಅದರದ್ದೇ ಲಾಭ ಸಿಗುತ್ತದೆ.

Exit mobile version