ಈಗ ಒಂದೆರಡು ಉದಾಹರಣೆಗಳನ್ನು ನೋಡೋಣ. ( Business Guide) ಮೊದಲ ಉದಾಹರಣೆಯಲ್ಲಿ ಒಬ್ಬ ರಿಯಲ್ ಎಸ್ಟೇಟ್ ವಲಯದ ಸೇಲ್ಸ್ ಪರ್ಸನ್ ಲಕ್ಷಾಂತರ ರೂ. ಗಳಿಸಲು ಬಯಸುತ್ತಾನೆ. ಹೇಗೆ ಎನ್ನುತ್ತೀರಾ. ಆತ 2 ಕೋಟಿ ರೂ. ಬೆಲೆ ಬಾಳುವ ಮೂರು ಪ್ರಾಪರ್ಟಿಗಳನ್ನು ಮಾರುತ್ತಾನೆ. ಒಂದು ದಿನದಲ್ಲಿ 6 ಲಕ್ಷ ರೂ. ಗಳಿಸುತ್ತಾನೆ. ಹೇಗೆ? ಅದಕ್ಕೆ ಆತ ಹಾಕುವ ಪ್ರಯತ್ನ ಎಷ್ಟು?
ಆತ ತನ್ನ ಸರ್ಕಲ್‌ನಲ್ಲಿ ಜಾಹೀರಾತು ಕೊಡುತ್ತಾನೆ. ಕನಿಷ್ಠ ಐವರಿಗೆ ಪ್ರಾಪರ್ಟಿಯನ್ನು ತೋರಿಸುತ್ತಾನೆ. ಪ್ರತಿಯೊಬ್ಬರಿಗೂ ಮೂರು ಸಲವಾದರೂ ತೋರಿಸುತ್ತಾನೆ. ಹದಿನೈದು ಭೇಟಿ ಎಂದರೆ ಹದಿನೈದು ಗಂಟೆಗಳು. ರಿಜಿಸ್ಟ್ರೇಶನ್ ಸಮಯ ಸಹಕರಿಸಬೇಕಾಗಬಹುದು. ಒಟ್ಟಾರೆ 15-100 ಗಂಟೆಗಳ ಕಾಲ ದುಡಿಯುತ್ತಾನೆ. ಹಾಗೂ 6,00,000 ರೂ. ಗಳಿಸುತ್ತಾನೆ. ಆದರೆ ಇಷ್ಟನ್ನು ಒಬ್ಬ ವೇತನ ಪಡೆಯುವ ವ್ಯಕ್ತಿ ಗಳಿಸಲು ಒಂದು ವರ್ಷದಲ್ಲಿ 2400 ಗಂಟೆ ದುಡಿಯಬೇಕಾಗುತ್ತದೆ.
ಸುರೇಂದರ್ ವಾಟ್ಸ್ ಎಂಬ ಉದ್ಯಮಿಯ ಯಶೋಗಾಥೆ ಕೇಳಿ. ಅವರು ನುರಿತ ನೆಟ್ ವರ್ಕ್ ಮೃಕೆಟರ್. ಅವರು ಆರ್ ಸಿಎಂ ಬಿಸಿನೆಸ್ ಅನ್ನು ಕಳೆದ 23 ವರ್ಷಗಳಿಂದ ಮಾಡುತ್ತಿದ್ದಾರೆ. ಇಂದು ಜನಪ್ರಿಯ ಯೂಟ್ಯೂಬ್ ಚಾನೆಲ್ ಚಾಟ್ ವಿತ್ ಸುರೇಂದರ್ ವಾಟ್ಸ್ ಅನ್ನು ನಡೆಸುತ್ತಿದ್ದಾರೆ. ತಮ್ಮ ಕಂಪನಿಗೆ ಪ್ರತಿ ತಿಂಗಳು ನೂರು ಕೋಟಿಗೂ ಹೆಚ್ಚು ಬಿಸಿನೆಸ್ ಕೊಡುತ್ತಿದ್ದಾರೆ. ಅವರ ಪರಿಶ್ರಮ, ಮಾರಾಟ ಮಾಡುವ ಕೌಶಲ, ಟೀಮ್ ನಿಂದ ಅವರಿಗೆ ಇದೆಲ್ಲ ಸಾಧ್ಯವಾಗಿದೆ.
ಒಬ್ಬ ತರಬೇತುದಾರನ ಗಳಿಕೆ ಬಗ್ಗೆ ಕೇಳಿ. ಐದು ವರ್ಷಗಳ ಅನುಭವ ಇದ್ದರೆ ಪ್ರತಿ ಸೆಷನ್‌ಗೆ 50,000 ರೂ. ವಿಧಿಸಿದರೂ ವಾರಕ್ಕೆ ಎರಡು ಸೆಶನ್ ಗಳನ್ನು ಮಾಡುವ ಮೂಲಕ ತಿಂಗಳಿಗೆ 4 ಲಕ್ಷ ರೂ. ಗಳಿಸಬಹುದು. ಜಾಬ್ ನಲ್ಲಾದರೆ ಇಪ್ಪತ್ತೈದು ವರ್ಷ ಬೇಕಾಗಬಹುದು. ಐದು ವರ್ಷ ಅನುಭವದ ಟ್ರೈನರ್, ಇಪ್ಪತ್ತು ವರ್ಷ ಅನುಭವ ಇರುವ ಉದ್ಯೋಗಿಗಿಂತ ಹೆಚ್ಚು ಸಂಪಾದಿಸಬಲ್ಲ.
ಒಬ್ಬ ನುರಿತ ಟ್ರೈನರ್ 10-15 ವರ್ಷ ಅನುಭವಿಯಾಗಿದ್ದರೆ, ಪ್ರತಿ ವರ್ಕ್ ಶಾಪ್‌ಗೆ 3-5 ಲಕ್ಷ ರೂ. ಗಳಿಸಬಹುದು. ತಿಂಗಳಿಗೆ ಎಂಟು ಪ್ರೋಗ್ರಾಮ್ ಗಳನ್ನು ಮಾಡುವುದರಿಂದ 40,00,000 ರೂ. ಗಳಿಸಬಹುದು. ಭಾರತದಲ್ಲಿ ಇದು 4-6 ಮ್ಯಾನೇಜಿಂಗ್ ಡೈರೆಕ್ಟರ್‌ಗಳ ಸಂಬಳ.