Site icon Vistara News

Business Guide : ಸೇಲ್ಸ್‌ನಲ್ಲಿ ಯಶಸ್ಸು ಸಿಗಲು ಕಲಿಯಬೇಕಿರುವ ಸಾಫ್ಟ್‌ ಸ್ಕಿಲ್ಸ್

Amazon Sweets

Amazon gets notice over sale of products claiming to be Ayodhya's Ram Mandir prasad

ನೀವು ಒಬ್ಬ ಗ್ರೇಟ್‌ ಸೇಲ್ಸ್‌ ಪ್ರೊಫೆಶನಲ್‌ ಆಗಬೇಕಿದ್ದರೆ, ಕೆಲವೊಂದು ಸಾಫ್ಟ್‌ ಸ್ಕಿಲ್‌ಗಳನ್ನು ಕಲಿಯಬೇಕು. ಹಾಗಾದರೆ ಅವುಗಳು ಯಾವುದು ಹಾಗೂ ಅವುಗಳನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದನ್ನು ( Business Guide ) ನೋಡೋಣ.

ಮೊದಲನೆಯದಾಗಿ ಆತ್ಮ ವಿಶ್ವಾಸದಿಂದ ಮಾತನಾಡಿ. ಸೇಲ್ಸ್‌ನಲ್ಲಿ ನಿಮ್ಮ ಭಾವನೆಗಳನ್ನು ಸಂಭವನೀಯ ಗ್ರಾಹಕರಿಗೆ ವರ್ಗಾಯಿಸುವುದು ಮುಖ್ಯ. ನಿಮ್ಮ ಉತ್ಪನ್ನ ಅಥವಾ ಸೇವೆಯ ಬಗ್ಗೆ ಗ್ರಾಹಕರ ಜತೆಗೆ ಕುತೂಹಲ ಮತ್ತು ಆಸಕ್ತಿಯಿಂದ ಮಾತನಾಡಿ. ಅವರಿಗೆ ಮನವರಿಕೆಯಾಗುವಂತೆ ವಿವರಿಸಿ. ರಿಟರ್ನ್‌ ಬಗ್ಗೆ ಗ್ರಾಹಕರಿಗೆ ಆತ್ಮವಿಶ್ವಾಸ ಬರುವಂತಿರಬೇಕು. ನಿಮ್ಮ ಮಾತಿನಲ್ಲಿ ಜೋಶ್‌ ಅನ್ನು ಗ್ರಾಹಕರು ನಿರೀಕ್ಷಿಸುತ್ತಾರೆ. ಎನರ್ಜಿ ಮತ್ತು ಎಕ್ಸೈಟ್‌ಮೆಂಟ್‌ ಜನರನ್ನು ಬಹುವಾಗಿ ಆಕರ್ಷಿಸುತ್ತದೆ. ನೀವು ಒಂದು ಪ್ರಾಡಕ್ಟ್‌ ಬಗ್ಗೆ ಗ್ರಾಹಕರಿಗೆ ಹೇಳುವಾಗ ಎಷ್ಟು ಪ್ರಭಾವಿತಗೊಳಿಸಬೇಕೆಂದರೆ, ಅದು ಅವರ ಸಬ್‌ ಕಾನ್ಷಿಯಸ್‌ ಮೈಂಡ್‌ ಗೆ ಸಂದೇಶ ರವಾನಿಸುವಂತಿರಬೇಕು.

ಸೇಲ್ಸ್‌ನಲ್ಲಿ ನಿಮ್ಮ ದನಿ ಅಂತಃಕರಣಪೂರ್ವಕವಾಗಿ ಇರಬೇಕು. ಅದು ಗ್ರಾಹಕರ ಮನಸ್ಸನ್ನು ಗೆಲ್ಲುತ್ತದೆ. ಅದು ಗ್ರಾಹಕರಿಗೆ ನಿಮ್ಮ ಉತ್ಪನ್ನ ಅಥವಾ ಸೇವೆಯ ಬಗ್ಗೆ ಸ್ಪಷ್ಟ ನಿಲುವನ್ನು ತಾಳಲು ಸಹಕರಿಸುತ್ತದೆ. ನಿಮ್ಮ ಗ್ರಾಹಕರು ತಕ್ಷಣಕ್ಕೆ ತಮ್ಮ ಕೈಯಲ್ಲಿ ದುಡ್ಡಿಲ್ಲ ಎಂದು ಹೇಳಿದರೆ ಏನು ಮಾಡುತ್ತೀರಿ. ತಕ್ಷಣವೇ ತಿರಸ್ಕಾರದ ಭಾವನೆಯನ್ನು ತೋರದಿರಿ. ಅದರ ಬದಲು ಸ್ವಲ್ಪ ಕಳವಳ, ಕಾಳಜಿಯಿಂದ ಮಾತನಾಡಿ. ಅವರ ಆಲೋಚನೆಗಳ ಬಗ್ಗೆ ಸಹಮತ ಇದೆ ಎಂಬುದನ್ನು ತಿಳಿಸಿ. ಜತೆಗೆ ನಿಮ್ಮ ವಸ್ತುಶಃ ಪರಿಸ್ಥಿತಿಯನ್ನೂ ತಿಳಿಸಿ. ಕಾಳಜಿಯನ್ನು ವಹಿಸುತ್ತಲೇ ಅವರಿಗೆ ಇನ್ವೆಸ್ಟ್‌ ಮಾಡಲು ಕೆಲವು ಆಯ್ಕೆಗಳನ್ನೂ ನೀಡಬಹುದು. ಉದಾಹರಣೆಗೆ ಮೊದಲು 50% ಹಣ ಕಟ್ಟಿದರೆ ಉತ್ಪನ್ನವನ್ನು ಕೊಡುವಂಥದ್ದು ಹಾಗೂ ನಿಗದಿತ ಅವಧಿಯೊಳಗೆ ಪೂರ್ಣ ಹಣವನ್ನು ಕೊಡುವ ನಿಯಮವನ್ನು ಅಳವಡಿಸುವುದು ಎಲ್ಲವೂ ವೃತ್ತಿಪರತೆಯನ್ನು ಬಿಂಬಿಸುತ್ತದೆ. ಜತೆಗೆ ನಿಮ್ಮ ಗ್ರಾಹರನ್ನೂ ನಿಮ್ಮ ಜತೆಯಲ್ಲೇ ಉಳಿಸುತ್ತದೆ.

ನಿಮ್ಮ ಗ್ರಾಹಕರು ಹೂಡಿಕೆಗೆ ಮುನ್ನ ಹೆಂಡತಿಯ ಬಳಿ ಒಮ್ಮೆ ಕೇಳುತ್ತೇನೆ ಎಂದರೆ, ನೀವು ಆಶ್ಚರ್ಯ ವ್ಯಕ್ತಪಡಿಸಿ, ಸರ್‌ ಏನು ಹೇಳುತ್ತೀರಿ, ಹಣಕಾಸು ಹೂಡಿಕೆಯ ನಿಮ್ಮ ಜವಾಬ್ದಾರಿಯನ್ನು ಪತ್ನಿಯ ಜವಾಬ್ದಾರಿಯನ್ನಾಗಿಸುತ್ತೀರಾ, ಅದು ಅವರಿಗೆ ಅರ್ಥವಾಗದೆಯೂ ಹೋಗಬಹುದು, ಅಥವಾ ಇಬ್ಬರೂ ನಮ್ಮಲ್ಲಿಗೆ ಬನ್ನಿ, ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಮನವೊಲಿಸಬಹುದು. ನಿಮ್ಮ ಪ್ರಾಡಕ್ಟ್‌ ಬಗ್ಗೆ ಅಗ್ರೆಸ್ಸಿವ್‌ ಆಗಿಯೂ ಗ್ರಾಹಕರ ಬಳಿ ಮಾತನಾಡಬಹುದು.

ಬಾಡಿ ಲಾಂಗ್ವೇಜ್‌ನ ಮಹತ್ವ: ಒಳ್ಳೆಯ ಸೇಲ್ಸ್‌ ಪ್ರೊಫೆಶನಲ್‌ ಉತ್ತಮ ಬಾಡಿ ಲಾಂಗ್ವೇಜ್‌ ಅನ್ನೂ ಹೊಂದಿರುವುದು ಅವಶ್ಯಕ. ಬಾಡಿ ಲಾಂಗ್ವೇಜ್‌ ಎನ್ನುವುದು ಸೇಲ್ಸ್‌ ಪರ್ಸನ್‌ ಆಗಿ ನಿಮ್ಮ ವಾಯ್ಸ್‌ ಅನ್ನು ಬದಲಿಸುತ್ತದೆ. ಅಗ್ರೆಸ್ಸಿವ್‌ ಸೇಲ್ಸ್‌ ಮಾಡಲು ಬಾಡಿ ಲಾಂಗ್ವೇಜ್‌ ಕೂಡ ಅಗ್ರೆಸ್ಸಿವ್‌ ಆಗಿರಬೇಕು. ನಿಮ್ಮ ಡ್ರೆಸ್ಸಿಂಗ್‌ ಹ್ಯಾಬಿಟ್‌ ಕೂಡ ಮಹತ್ವ ಪಡೆಯುತ್ತದೆ. ಸೂಟ್‌, ಟೈ ಅಥವಾ ಕೋಟ್‌ ಅಥಾರಿಟಿಯನ್ನು ಪ್ರತಿಬಿಂಬಿಸುತ್ತದೆ. ಗ್ರಾಹಕರ ಮೇಲೆ ಪ್ರಭಾವ ಬೀರುವಲ್ಲಿ ಡ್ರೆಸ್‌ ಪ್ರಭಾವ ಬೀರುತ್ತದೆ.

ಇದನ್ನೂ ಓದಿ: Money plus : ಶ್ರೀಮಂತರಾಗಲು ಶ್ರೀಮಂತರು ಹೇಳಿರುವ ಸೀಕ್ರೆಟ್ಸ್

ಸೇಲ್ಸ್‌ನಲ್ಲಿ ಸ್ಟೋರಿ ಟೆಲ್ಲಿಂಗ್‌ ಶೈಲ್‌ ಮುಖ್ಯ. ನಿಮ್ಮ ಕಂಪನಿ ಅಥವಾ ಪ್ರಾಡಕ್ಟ್‌ ಬಗ್ಗೆ ಚಂದನೆಯ ಕಥನ ಕಲೆಯೊಂದು ನಿಮ್ಮಲ್ಲಿ ಇರಬೇಕು. ನಿಮ್ಮ ಜರ್ನಿಯ ಬಗ್ಗೆ ಕಥೆಯ ಮೂಲಕ ತಿಳಿಸಬೇಕು. ನಿಮ್ಮ ಕಂಪನಿ ಮತ್ತು ಪ್ರಾಡಕ್ಟ್‌ ಬಗ್ಗೆ ಕನಿಷ್ಠ 30 ಕಥೆಗಳನ್ನು ಹೇಳಬೇಕು.

Exit mobile version