Site icon Vistara News

Business Guide : ಮ್ಯೂಚುವಲ್‌ ಫಂಡ್ ಯೋಜನೆಗಳ ಬೇಸಿಕ್‌ ಕೆಟಗರಿಗಳು ಯಾವುದು, ಪ್ರಯೋಜನ ಪಡೆಯುವುದು ಹೇಗೆ?

mutual funds

ಮ್ಯೂಚುವಲ್‌ ಫಂಡ್‌ಗಳಲ್ಲಿ ಲಾರ್ಜ್‌, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ಗಳು ( Business Guide ) ಎಂಬ ಮೂರು ಬೇಸಿಕ್‌ ಕೆಟಗರಿಗಳು ಇವೆ. ಇವುಗಳ ರಿಸ್ಕ್‌ ಹಾಗೂ ರಿಟರ್ನ್‌ಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ : ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಈಕ್ವಿಟಿ ಫಂಡ್‌ಗಳಾಗಿದ್ದು, ಭಾರತದಲ್ಲಿನ ಟಾಪ್‌ 100 ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಕಂಪನಿಗಳು ದೇಶದಲ್ಲಿನ ದೊಡ್ಡ ಬ್ರಾಂಡ್‌ಗಳಾಗಿವೆ. ಬಹುತೇಕ ಭಾರತೀಯರು ದಿನ ನಿತ್ಯ ಈ ಬ್ರಾಂಡ್‌ಗಳ ಉತ್ಪನ್ನಗಳನ್ನು ಬಳಸುತ್ತಾರೆ. ಲಾರ್ಜ್‌ ಕ್ಯಾಪ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಮನೆ ಮಾತಾಗಿರುವ ಬ್ರಾಂಡ್‌ಗಳಲ್ಲಿ ಇನ್ವೆಸ್ಟ್‌ ಮಾಡುವ ಅವಕಾಶ ಸಿಗುತ್ತದೆ. ಗ್ರಾಹಕರ ವಿಶ್ವಾಸ ಗಳಿಸಿರುವ ಮತ್ತು ಸ್ಥಿರವಾದ ಬಿಸಿನೆಸ್‌, ಉತ್ತಮ ಲಾಭ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಕನಿಷ್ಠ ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಹೂಡಿಕೆ ಮಾಡುವವರಿಗೆ ಅನುಕೂಲಕರ.

ಮಿಡ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್:‌ ಮಿಡ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಮಧ್ಯಮ ಗಾತ್ರದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಕಂಪನಿಗಳಲ್ಲಿ ವೇಗವಾಗಿ ಬೆಳವಣಿಗೆ ದಾಖಲಿಸುತ್ತಿರುವ ಕಂಪನಿಗಳೂ ಇರುತ್ತವೆ. ಮಿಡ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರ ಪ್ರಯೋಜನ ಏನೆಂದರೆ, ಭವಿಷ್ಯದಲ್ಲಿ ಉತ್ತಮ ಆದಾಯ ನೀಡಬಲ್ಲ ಕಂಪನಿಗಳ ಷೇರುಗಳಲ್ಲಿ ಈ ಫಂಡ್‌ಗಳು ಹೂಡಿಕೆ ಮಾಡುವುದರಿಂದ ಅದರ ಲಾಭವೂ ಹೂಡಿಕೆದಾರರಿಗೆ ಸಿಗುತ್ತದೆ. ಏಳಕ್ಕೂ ಹೆಚ್ಚು ವರ್ಷಗಳ ಕಾಲ ಹೂಡಿಕೆ ಮಾಡುವವರಿಗೆ ಅನುಕೂಲಕರ.

ಸ್ಮಾಲ್‌ ಕ್ಯಾಪ್‌ ಮ್ಯೂಚುವಲ್ ಫಂಡ್‌ : ಸ್ಮಾಲ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಟಾಪ್‌ 250ಕ್ಕಿಂತ ಹೊರತಾಗಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಇತರ ಫಂಡ್‌ಗಳಿಗೆ ಹೋಲಿಸಿದರೆ ಇದು ಸ್ವಲ್ಪ ಹೆಚ್ಚು ರಿಸ್ಕ್‌ ಇರುವಂಥದ್ದು. ಹೀಗಿದ್ದರೂ ಈ ಷೇರುಗಳು ಅತ್ಯಲ್ಪ ಅವಧಿಯಲ್ಲಿ ಎರಡು ಅಥವಾ ಮೂರು ಪಟ್ಟು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನೂ ಹೊಂದಿರುತ್ತವೆ. ಹೀಗಿದ್ದರೂ, ಸ್ಮಾಲ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಮುನ್ನ ಇನ್ವೆಸ್ಟ್‌ ಮೆಂಟ್‌ ರಿಸ್ಕ್‌ ಮತ್ತು ರಿಟರ್ನ್ ಅನ್ನು ತಿಳಿದುಕೊಳ್ಳಬೇಕು. ಹೂಡಿಕೆಗೆ ತಗಲುವ ವೆಚ್ಚವನ್ನೂ ಅರಿತುಕೊಳ್ಳಬೇಕು.

ಇದನ್ನೂ ಓದಿ :Money Guide : ಹಣದ ಬಗ್ಗೆ ಈಗ ಮಧ್ಯಮ ವರ್ಗದ ಜನ ಹೇಗೆ ಯೋಚಿಸಬೇಕು?

ಮ್ಯೂಚುವಲ್‌ ಫಂಡ್‌ಗಳಲ್ಲಿ ಲಾರ್ಜ್‌, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ಗಳು ಮಾತ್ರವಲ್ಲದೆ, ಮೂರು ಕ್ರಾಸ್‌ -ಕ್ಯಾಪ್‌ ಕೆಟಗರಿಗಳೂ ಇವೆ. ಅವುಗಳೆಂದರೆ ಮಲ್ಟಿ-ಕ್ಯಾಪ್‌, ಫ್ಲೆಕ್ಸಿ-ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಇವೆ.

ಮಲ್ಟಿ ಕ್ಯಾಪ್‌ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಎಲ್ಲ ಗಾತ್ರದ ಮತ್ತು ವಲಯದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಫ್ಲೆಕ್ಸಿ ಕ್ಯಾಪ್‌ ಕೆಟಗರಿಯಲ್ಲಿ ನಾನಾ ಮಾರುಕಟ್ಟೆ ಬಂಡವಾಳ ಮೌಲ್ಯವಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ.

Exit mobile version