Site icon Vistara News

Business Guide : ಹಣ ಸಂಪಾದಿಸಲು ವ್ಯಾಪಾರದ ಕಲೆ ತಿಳಿಯುವುದು ಏಕೆ ಮುಖ್ಯ?

business man

ಜೀವನದಲ್ಲಿ ಅನೇಕ ಕನಸುಗಳನ್ನು ನನಸಾಗಿಸಲು ಸೇಲ್ಸ್‌ ಅಥವಾ ( Business Guide) ವ್ಯಾಪಾರ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಹೀಗಿದ್ದರೂ, ಅನೇಕ ಮಂದಿ ಇದನ್ನು ಕೈಬಿಡುತ್ತಾರೆ. ಏಕೆಂದರೆ ಸೇಲ್ಸ್‌ ನಿಜಕ್ಕೂ ಕಷ್ಟಕರವಾದ ಕೆಲಸ. ಇದಕ್ಕೆ ಸಮಯ ಬೇಕು, ಪ್ರಯತ್ನ, ತ್ಯಾಗ, ನೋವಿನ ಬೆಲೆಯನ್ನು ಕೊಡಬೇಕಾಗುತ್ತದೆ. ಇದಕ್ಕೆ ನಿರಂತರವಾದ ಅಭ್ಯಾಸವೂ ಅವಶ್ಯಕ. ನೀವು ವ್ಯಾಪಾರ ಅಥವಾ ಸೇಲ್ಸ್‌ನ ಕೌಶಲವನ್ನು ಏಕೆ ತಿಳಿದುಕೊಳ್ಳಬೇಕು ಎನ್ನುವುದಕ್ಕೆ ಇಲ್ಲಿ ಪ್ರಮುಖ ಕಾರಣಗಳ ಪಟ್ಟಿಯನ್ನು ನೀಡಲಾಗಿದೆ. ಗಮನವಿಟ್ಟು ಓದಿರಿ.

  1. 1. ಮೊದಲನೆಯದಾಗಿ ಸೇಲ್ಸ್‌ ಕಲೆಯನ್ನು ಕರಗತ ಮಾಡಿಕೊಳ್ಳುವುದರಿಂದ ಕೈ ತುಂಬಾ ಹಣ ಸಿಗುತ್ತದೆ.
  2. 2. ಎರಡನೆಯದಾಗಿ ಸೇಲ್ಸ್‌ ನಿಮಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ.
  3. 3. ಜಗತ್ತಿನ ಪ್ರತಿಯೊಂದು ಕಂಪನಿಯಲ್ಲೂ ಸೇಲ್ಸ್‌ ವಿಭಾಗದವರು ಬೇಕೇ ಬೇಕು.
  4. 4. ಅಲ್ಪ ಅವಧಿಯಲ್ಲಿಯೇ ಅಪಾರವಾದ ಜ್ಞಾನವನ್ನು ಸೇಲ್ಸ್‌ ನಿಮಗೆ ಕೊಡುತ್ತದೆ.
  5. 5. ಬೇರೆ ಯಾವ ವೃತ್ತಿಯೂ ನಿಮ್ಮನ್ನು ರಫ್‌ & ಠಫ್‌ ಮಾಡುವುದಿಲ್ಲ. ಅಷ್ಟು ಅಚಲ ಮತ್ತು ಇಚ್ಛಾಶಕ್ತಿಯನ್ನು ತುಂಬುತ್ತದೆ.
  6. 6. ಸೇಲ್ಸ್‌ ವೃತಿಯು ನಿಮ್ಮನ್ನು ಜನಸ್ನೇಹಿಯನ್ನಾಗಿಸುತ್ತದೆ.
  7. 7. ಜನರ ಮನಸ್ಥಿತಿಯನ್ನು ಅರಿಯಲು ಸೇಲ್ಸ್‌ ಸಹಕರಿಸುತ್ತದೆ.
  8. 8. ಸೇಲ್ಸ್‌ ನಿಮ್ಮನ್ನು ಹೆಚ್ಚು ಶಕ್ತಿಶಾಲಿ ಮತ್ತು ಪ್ರಭಾವಿಯನ್ನಾಗಿಸುತ್ತದೆ.
  9. 9. ಜೀವನ ಮತ್ತು ಬಿಸಿನೆಸ್‌ ಲೈಫ್‌ ಎರಡರಲ್ಲೂ ಸೇಲ್ಸ್‌ ನಿರ್ಣಾಯಕ ಪಾತ್ರ ವಹಿಸುತ್ತದೆ.

ಬಿಸಿನೆಸ್‌ ಸಲಹೆಗಾರ ಭೂಪೇಂದ್ರ ಸಿಂಗ್‌ ರಾಥೋರ್‌ ಹೀಗೆನ್ನುತ್ತಾರೆ- ನಾನೂ ಒಂದು ಕಾಲದಲ್ಲಿ ತಿಂಗಳಿಗೆ 1200 ರೂ. ಮಾತ್ರ ಸಂಪಾದಿಸುತ್ತಿದ್ದೆ. ಈಗ ನನ್ನ ವೃತ್ತಿಯಿಂದ ತಿಂಗಳಿಗೆ 2.5 ಕೋಟಿ ರೂ. ಸಂಪಾದಿಸುತ್ತೇನೆ. ಗಂಟೆಗೆ ಒಂದು ಕೋಟಿ ರೂ. ಗಳಿಸುವ ಸಾಮರ್ಥ್ಯವನ್ನು ಪಡೆದಿರುವೆ. 2021ರ ಮೇನಲ್ಲಿ ನಡೆಸಿದ ಸೇಲ್ಸ್‌ ವೆಬಿನಾರ್‌ನಿಂದ ಇದು ಸಾಧ್ಯವಾಗಿದೆ. ಕೋವಿಡ್‌ ಬಿಕ್ಕಟ್ಟಿನ ಬಳಿಕ ಜಗತ್ತು ಜರ್ಜರಿತವಾಗಿದ್ದರೆ, ಸೇಲ್ಸ್‌ನಿಂದಾಗಿ ನನ್ನ ಗಳಿಕೆ ಎತ್ತರದಿಂದ ಎತ್ತರಕ್ಕೆ ಏರಿತು. ಒಂದೇ ಒಂದು ದಿನವೂ ಲಕ್ಷಾಂತರ ಮಂದಿ ಇತರರಂತೆ ನಾನು ಸಂತ್ರಸ್ತನಾಗಲಿಲ್ಲ ಎನ್ನುತ್ತಾರೆ ಭೂಪೇಂದ್ರ ಸಿಂಗ್.‌

ಇದು ಸೇಲ್ಸ್‌ ಅನ್ನು ವೃತ್ತಿಯಾಗಿ ತೆಗೆದುಕೊಂಡರೆ ಸಿಗುವ ಶಕ್ತಿ ಮತ್ತು ಲಾಭ. ನಾನು ಮತ್ತೆ ಮತ್ತೆ ಸೇಲ್ಸ್‌ ಪ್ರೊಫೆಷನಲ್‌ ಆಗಲು ಬಯಸುತ್ತೇನೆ ಎನ್ನುತ್ತಾರೆ ಭೂಪೇಂದ್ರ ಸಿಂಗ್.‌ ಸೇಲ್ಸ್‌ನಿಂದಲೇ ನಾನು 15 ಕೋಟಿ ರೂ. ಬೆಲೆಬಾಳುವ ಮನೆ, ಐಷಾರಾಮಿ ಕಾರುಗಳನ್ನು ಖರೀದಿಸುವಂತಾಯಿತು. ಸೇಲ್ಸ್‌ ವೃತ್ತಿ ಹೊರತುಪಡಿಸಿ ಬೇರಾವುದರಿಂದಲೂ ಇವುಗಳನ್ನೆಲ್ಲ ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ನೀವೀಗ ಕೇಳಬಹುದು, ನೀವೇನೋ ಮಾಡಿದಿರಿ, ಆದರೆ ಇದು ಎಲ್ಲರಿಗೂ ಸಾಧ್ಯವೇ?

ಹೌದು, ಸಾಧ್ಯ ಎನ್ನುತ್ತೇನೆ. ನನ್ನ ವೆಬಿನಾರ್‌ನಲ್ಲಿ ಭಾಗವಹಿಸಿದ್ದ ಶೈಲೇಂದ್ರ ದೇವಂಗನ್‌ ಎಂಬುವರು ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಮಾಡುತ್ತಾರೆ. ಮೂರು ದಿನಗಳಲ್ಲಿ 30 ಕೋಟಿ ರೂ. ಪ್ರಾಪರ್ಟಿಯೊಂದನ್ನು ಮಾರಿದರು. 35 ಲಕ್ಷ ರೂ. ಕಮಿಶನ್‌ ಗಳಿಸಿದರು. ವೆಬಿನಾರ್‌ನಲ್ಲಿ ಭಾಗವಹಿಸಿದ್ದ ಮತ್ತೊಬ್ಬ ವ್ಯಕ್ತಿ ಸಂತೋಷ್‌ ಪಾಲ್‌ ವರ್ಷಕ್ಕೆ 2 ಕೋಟಿ ರೂ. ಗಳಿಸುತ್ತಾರೆ. ಇದಕ್ಕೂ ಮೊದಲು ತಿಂಗಳಿಗೆ 50,000 ರೂ. ಗಳಿಸುತ್ತಿದ್ದರು.

ಇದನ್ನೂ ಓದಿ : Divya Ayodhya: ರಾಮಮಂದಿರ ಯಾತ್ರಿಕರಿಗಾಗಿ ಬಂತು ಆ್ಯಪ್; ಆಲ್‌ ಇನ್‌ ಒನ್‌ ಗೈಡ್‌ನಲ್ಲೇನಿದೆ?

ಮಾಧವ್‌ ರಾವ್‌ ಎಂಬುವರು 2021ರಲ್ಲಿ 30 ಲಕ್ಷ ರೂ. ವ್ಯಾಪಾರವನ್ನು ಮಾಡುತ್ತಿದ್ದರು. ಅದಕ್ಕೂ ಮುನ್ನ ದಿವಾಳಿಯಾಗಿದ್ದರು. ಮನೆ ಮಾರಾಟವಾಗುವ ಹಂತಕ್ಕೆ ಪರಿಸ್ಥಿತಿ ಕುಸಿದಿತ್ತು. ಅವರು ಆಫ್‌ಲೈನ್‌ ಜತೆಗೆ ಆನ್‌ಲೈನ್‌ ಮೂಲಕವೂ ಬಿಸಿನೆಸ್‌ ಶುರು ಮಾಡಿದರು. ಅದು ಕೈ ಹಿಡಿಯಿತು. 2020ರಲ್ಲಿ ಸಾಲಗಳನ್ನು ಮರು ಪಾವತಿ ಮಾಡಿದರು. 2022ರಲ್ಲಿ ವಾರ್ಷಿಕ 1 ಕೋಟಿ ರೂ. ವಹಿವಾಟು ನಡೆಸಿದರು. ” ನಾನು ಅನಗತ್ಯವಾಗಿ ಟಿವಿ ಚಾನೆಲ್‌ ನೋಡೋದನ್ನು ನಿಲ್ಲಿಸಿದೆ, ಮೊಬೈಲ್‌ ಫೋನ್‌ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಗ್ರಾಹಕರನ್ನು ಗಳಿಸಿದೆ. ಹಳೆಯ ಗ್ರಾಹಕರನ್ನೂ ಉಳಿಸಿಕೊಂಡೆ. ಮೊದಲ ತಿಂಗಳಲ್ಲೇ 2 ಲಕ್ಷ ರೂ. ಗಳಿಸಿದೆ. ಸ್ವಲ್ಪ ಸಾಲವನ್ನೂ ತೀರಿಸಿದೆ. ಪ್ರತಿ ತಿಂಗಳೂ ವ್ಯಾಪಾರ ಹೆಚ್ಚುತ್ತಾ ಹೋಯಿತು ಎನ್ನುತ್ತಾರೆ ಮಾಧವ್‌ ರಾವ್.‌

Exit mobile version