Site icon Vistara News

Byju’s Results| ಬೈಜೂಸ್‌ನಿಂದ ಶೀಘ್ರದಲ್ಲಿಯೇ ಹಣಕಾಸು ಫಲಿತಾಂಶ ಪ್ರಕಟ ನಿರೀಕ್ಷೆ

byzus

ಬೆಂಗಳೂರು: ಆನ್‌ಲೈನ್‌ ಶಿಕ್ಷಣ ತಂತ್ರಜ್ಞಾನ ದಿಗ್ಗಜ ಬೈಜೂಸ್‌ ಶೀಘ್ರದಲ್ಲಿಯೇ (Byju’s Results) ತನ್ನ ಹಣಕಾಸು ಫಲಿತಾಂಶವನ್ನು ಪ್ರಕಟಿಸಲಿದೆ. ಬೈಜೂಸ್‌ ತನ್ನ ೨೦೨೦-೨೧ರ ಫಲಿತಾಂಶವನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ೨೦೧೯-೨೦ರಲ್ಲಿ ಸಂಸ್ಥೆಯು ೫೧ ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ೨,೭೩೪ ಕೋಟಿ ರೂ. ಆದಾಯವನ್ನು ಗಳಿಸಿತ್ತು.

ಹೂಡಿಕೆದಾರರು ಮತ್ತು ನಿಯಂತ್ರಕ ವಲಯದಿಂದ ಬೈಜೂಸ್‌ನ ಹಣಕಾಸು ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ವರದಿಗಳ ಪ್ರಕಾರ ಇನ್ನೊಂದು ವಾರದೊಳಗೆ ಬೈಜೂಸ್‌ ತನ್ನ ಫಲಿತಾಂಶವನ್ನು ಪ್ರಕಟಿಸಲಿದೆ. ಗ್ಲೋಬಲ್‌ ಕನ್ಸಲ್ಟಿಂಗ್‌ ಕಂಪನಿ ಡೆಲಾಯಿಟ್‌ ಸಿದ್ಧಪಡಿಸಿರುವ ಹಣಕಾಸು ಲೆಕ್ಕಪತ್ರ ವರದಿಯನ್ನು ಕಂಪನಿ ಬಿಡುಗಡೆಗೊಳಿಸಲಿದೆ. ಬೈಜೂಸ್‌ ಕಳೆದ ವರ್ಷ ೧೦ ಸ್ಟಾರ್ಟಪ್‌ಗಳನ್ನು ಖರೀದಿಸಿತ್ತು. ಇದರ ಒಟ್ಟು ಮೌಲ್ಯ ಸುಮಾರು ೨.೫ ಶತಕೋಟಿ ಡಾಲರ್‌ಗಳಾಗಿದೆ.(ಅಂದಾಜು ೧೯,೭೫೦ ಕೋಟಿ ರೂ.)

ಬೈಜೂ ರವೀಂದ್ರನ್

ಬೈಜೂಸ್‌ ೬ ಶತಕೋಟಿ ಡಾಲರ್‌ಗೂ (೪೭,೪೦೦ ಕೋಟಿ ರೂ.) ಹೆಚ್ಚು ಹೂಡಿಕೆಯನ್ನು ಗಳಿಸಿದೆ. ಸ್ಥಾಪಕ ಬೈಜು ರವೀಂದ್ರನ್‌ ಸ್ವತಃ ತಮ್ಮ ಜೇಬಿನಿಂದ ೪೦೦ ದಶಲಕ್ಷ ಡಾಲರ್‌ (೩,೧೬೦ ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ಬೈಜು ರವೀಂದ್ರನ್‌ ಅವರು ೨೦೧೧ರಲ್ಲಿ ಬೆಂಗಳೂರಿನಲ್ಲಿ ಬೈಜೂಸ್‌ ಅನ್ನು ಆರಂಭಿಸಿದ್ದರು. ಬೈಜೂಸ್‌ ತನ್ನ ಐಪಿಒಗೆ ಕೂಡ ಸಜ್ಜಾಗುತ್ತಿದೆ.

Exit mobile version