Site icon Vistara News

Canara Bank | ಕೆನರಾ ಬ್ಯಾಂಕ್‌ ಎಟಿಎಂನಲ್ಲಿ ಡೆಬಿಟ್‌ ಕಾರ್ಡ್‌ ಮೂಲಕ ನಗದು ಹಿಂತೆಗೆತ ಮಿತಿ ಹೆಚ್ಚಳ

canara bank

canara bank

ಮುಂಬಯಿ: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌, (Canara Bank) ಡೆಬಿಟ್‌ ಕಾರ್ಡ್‌ ಮೂಲಕ ಎಟಿಎಂನಿಂದ ನಗದು ಹಿಂತೆಗೆತದ ದೈನಿಕ ಮಿತಿಯನ್ನು ಏರಿಸಿದೆ.

ಕೆನರಾ ಬ್ಯಾಂಕ್‌ನ ಕ್ಲಾಸಿಕ್‌ ಡೆಬಿಟ್‌ ಕಾರ್ಡ್‌ ಅಡಿಯಲ್ಲಿ ಎಟಿಎಂ ನಗದು ಹಿಂತೆಗೆತದ ಮಿತಿಯನ್ನು 40,000 ರೂ.ಗಳಿಂದ 75,000 ರೂ.ಗೆ ಏರಿಸಲಾಗಿದೆ. ಪಾಯಿಂಟ್‌ ಆಫ್‌ ಸೇಲ್‌ (POS) ಸಾಧನದಲ್ಲಿ ಈ ಕಾರ್ಡ್‌ ಬಳಕೆಯ ದೈನಿಕ ಮಿತಿಯನ್ನು 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಏರಿಸಲಾಗಿದೆ.

ಕಾಂಟ್ಯಾಕ್ಟ್‌ ಲೆಸ್‌ ಟ್ರಾನ್ಸಕ್ಷನ್‌ನಲ್ಲಿ ಪ್ರತಿ ಸಂದರ್ಭ 5,000 ರೂ. ತನಕ ಮತ್ತು ದಿನಕ್ಕೆ 5 ಸಲ ಮಾಡಬಹುದು.

Exit mobile version