ನವ ದೆಹಲಿ: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು (Interest rate) ಪರಿಷ್ಕರಿಸಿದೆ.
2 ಕೋಟಿ ರೂ.ಗಿಂತ ಕೆಳಗಿನ ಮೊತ್ತದ ಠೇವಣಿಗೆ ಬಡ್ಡಿ ದರವನ್ನು 2022ರ ಅಕ್ಟೋಬರ್ 31ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಮಾಡಲಾಗಿದೆ. ಇದರೊಂದಿಗೆ ಸಾರ್ವಜನಿಕ ವಲಯದ ಇತರ ಬ್ಯಾಂಕ್‌ಗಳ ಮಾದರಿಯಲ್ಲಿ ಕೆನರಾ ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆಯಾದಂತಾಗಿದೆ.
ಕೆನರಾ ಬ್ಯಾಂಕ್ ಸಾಮಾನ್ಯ ಠೇವಣಿದಾರರಿಗೆ 666 ದಿನಗಳ ಠೇವಣಿಗೆ, ಗರಿಷ್ಠ ಬಡ್ಡಿ ದರ 7.00% ನೀಡಲಿದೆ. ಹಿರಿಯ ನಾಗರಿಕರಿಗೆ 7.50% ಸಿಗಲಿದೆ. 3-10 ವರ್ಷ ಅವಧಿಯ ಎಫ್‌ಡಿಗೆ 6.50% ಬಡ್ಡಿ ದರ ನಿಗದಿಯಾಗಿದೆ. ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಉಳಿತಾಯ ಖಾತೆಗೆ ಗರಿಷ್ಠ 4% ಬಡ್ಡಿ ನೀಡುತ್ತದೆ.