ನವ ದೆಹಲಿ: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ತನ್ನ ಎಂಸಿಎಲ್‌ಆರ್ ಆಧಾರಿತ ಸಾಲಗಳು (Canara Bank) ಬಡ್ಡಿ ದರದಲ್ಲಿ 0.15% ಏರಿಕೆ ಮಾಡಿದೆ. ಇದರ ಪರಿಣಾಮ ಎಂಸಿಎಲ್‌ಆರ್ ಆಧಾರಿತ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲಗಳ ಬಡ್ಡಿ ದರ ಹೆಚ್ಚಳವಾಗಲಿದೆ.
ಎಂಸಿಎಲ್‌ಆರ್ ಆಧಾರಿತ ಸಾಲಗಳ ವಾರ್ಷಿಕ ಬಡ್ಡಿ ದರ 7.65%ರಿಂದ 7.75%ಕ್ಕೆ ವೃದ್ಧಿಸಿದೆ. ಒಂದು ವರ್ಷಗಳ ಅವಧಿಗೆ ಇದು ನಿಗದಿಯಾಗಿರುತ್ತದೆ.
ಆರ್‌ಬಿಐ ತನ್ನ ರೆಪೊ ದರವನ್ನು ಏರಿಸಿದ ಬಳಿಕ ಬಹುತೇಕ ಬ್ಯಾಂಕ್‌ಗಳು ಸಾಲಗಳ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ. ಆದರೆ ಅದೇ ರೀತಿ ಠೇವಣಿಗಳ ಬಡ್ಡಿ ದರ ಮಾತ್ರ ಏರಿಕೆಯಾಗಿಲ್ಲ.