ಪುಣೆ : ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ (Canara Bank) ಕಳೆದ 11 ವರ್ಷಗಳಲ್ಲಿ 1.29 ಲಕ್ಷ ಕೋಟಿ ರೂ.ಗಳನ್ನು ರೈಟ್ ಆಫ್ ಮಾಡಿದೆ. ಆದರೆ ಸುಸ್ತಿ ಸಾಲಗಾರರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದೆ ಎಂದು ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಕೆನರಾ ಬ್ಯಾಂಕ್ 2011ರಿಂದ 2022ರ ಅವಧಿಯಲ್ಲಿ 1.29 ಲಕ್ಷ ಕೋಟಿ ರೂ.ಗಳನ್ನು ರೈಟ್ ಆಫ್ ಮಾಡಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದೆ ಎಂದು ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ವಿವೇಕ್ ವೆಲಾನ್ಕರ್ ಹೇಳಿದ್ದಾರೆ.
ಹೀಗಿದ್ದರೂ ಕೆನರಾ ಬ್ಯಾಂಕ್ ತನ್ನ ಸಾಲ ಸುಸ್ತಿದಾರರ ಹೆಸರುಗಳನ್ನು ಆರ್‌ಟಿಐ ಅಡಿಯಲ್ಲಿ ಬಹಿರಂಗಪಡಿಸಿಲ್ಲ ಎಂದು ವಿವೇಕ್ ಹೇಳಿದ್ದಾರೆ. ” ಅರ್ಜಿದಾರರು ಸುಸ್ತಿ ಸಾಲಗಾರರ ವೈಯಕ್ತಿಕ ಮಾಹಿತಿಯನ್ನು ಕೋರಿದ್ದು, ಅದು ಆರ್‌ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲʼʼ ಎಂದು ಕೆನರಾ ಬ್ಯಾಂಕ್ ತಿಳಿಸಿರುವುದಾಗಿ ವರದಿಯಾಗಿದೆ.