ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಗುರುವಾರ ತನ್ನ ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, 2,525 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಅಂದರೆ 89% ಏರಿಕೆಯಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 1,333 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕೆನರಾ ಬ್ಯಾಂಕ್‌ನ ಒಟ್ಟು ಆದಾಯ ಕೂಡ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 24,932 ಕೋಟಿ ರೂ.ಗೆ ಏರಿಕೆಯಾಗಿತ್ತು. 20202-21ರ ಇದೇ ಅವಧಿಯಲ್ಲಿ 21,331 ಕೋಟಿ ರೂ. ಇತ್ತು.
ಕೆನರಾ ಬ್ಯಾಂಕ್‌ನ ಅನುತ್ಪಾದಕ ಆಸ್ತಿ (NPA) ಸೆಪ್ಟೆಂಬರ್ 30ರ ವೇಳೆಗೆ 6.37% ಕ್ಕೆ ಇಳಿಕೆಯಾಗಿದೆ. 2021ರ ಇದೇ ವೇಳೆಗೆ 8.42% ಇತ್ತು.