Site icon Vistara News

Union Budget 2023: ಮಹಿಳಾ ಸಮ್ಮಾನ್‌ ಬಚತ್‌ ಯೋಜನೆ, 7.5% ಬಡ್ಡಿಯ ಉಳಿತಾಯ ಯೋಜನೆ

cash

ನವ ದೆಹಲಿ: ಮಹಿಳೆಯರಿಗೆ ವಾರ್ಷಿಕ 2 ಲಕ್ಷ ರೂ. ಉಳಿತಾಯಕ್ಕೆ 7.5% ಬಡ್ಡಿ ನೀಡುವ ಮಹಿಳಾ ಸಮ್ಮಾನ್‌ ಬಚತ್‌ ಯೋಜನೆಯನ್ನು ಘೋಷಿಸಲಾಗಿದೆ. 2025 ತನಕ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸದ್ಯಕ್ಕೆ ಸಾಮಾನ್ಯ ಠೇವಣಿಗಳಲ್ಲಿ 7% ಬಡ್ಡಿ ಸಿಗುತ್ತದೆ.

ಸರ್ಕಾರ 2023-24ರಲ್ಲಿ ಪರಿಣಾಮಕಾರಿ ಬಂಡವಾಳ ವೆಚ್ಚವನ್ನು 13.7 ಲಕ್ಷ ಕೋಟಿ ರೂ.ಗೆ ಏರಿಸಿದೆ. ಇದು ಜಿಡಿಪಿಯ 3.3%ಕ್ಕೂ ಹೆಚ್ಚು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. (Union Budget 2023) ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಯೋಜನೆಯನ್ನು ಇನ್ನೊಂದು ವರ್ಷ ಮುಂದುವರಿಸಲು ಕೂಡ ನಿರ್ಧರಿಸಲಾಗಿದೆ. ನ್ಯಾಶನಲ್‌ ಫೈನಾನ್ಸ್‌ ರಿಜಿಸ್ಟ್ರಿಯನ್ನು ಕೂಡ ಸ್ಥಾಪಿಸಲಾಗುವುದು. ಇದು ಹಣಕಾಸು ವ್ಯವಹಾರಗಳ ದಾಖಲಾತಿಯನ್ನು ವ್ಯವಸ್ಥೆಗೊಳಿಸಲಿದೆ.

ಬ್ಯಾಂಕಿಂಗ್‌ ವಲಯದ ಸುಧಾರಣೆಗೆ, ಹಣಕಾಸು ಸಾಕ್ಷರತೆಗೆ ಪ್ರತ್ಯೇಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ.

Exit mobile version