ನವ ದೆಹಲಿ: ಸೀಲಿಂಗ್ ಫ್ಯಾನ್‌ಗಳ ದರದಲ್ಲಿ ಶೀಘ್ರದಲ್ಲೇ 8-20% ಏರಿಕೆ ನಿರೀಕ್ಷಿಸಲಾಗಿದೆ. ಬ್ಯೂರೊ ಆಫ್ ಎನರ್ಜಿ ಎಫೀಶಿಯನ್ಸ್ ನಿಯಮಾವಳಿಗಳ ಪ್ರಕಾರ 2023 ಜನವರಿಯಿಂದ ಸ್ಟಾರ್ ಲೇಬಲ್ ಕಡ್ಡಾಯವಾಗಿರುವುದರಿಂದ ದರ ಏರಿಕೆಯಾಗಲಿದೆ. (Ceiling fan price) ಇಂಧನ ಬಳಕೆಯಲ್ಲಿ ದಕ್ಷತೆಯನ್ನು ಮಾಪನ ಮಾಡಲು ಸ್ಟಾರ್ ಲೇಬಲ್ ವ್ಯವಸ್ಥೆ ಜಾರಿಯಲ್ಲಿದೆ.
1 ಸ್ಟಾರ್ ದರ್ಜೆಯ ಫ್ಯಾನ್ 30% ಇಂಧನ ಉಳಿತಾಯವನ್ನು ಬಿಂಬಿಸುತ್ತವೆ. 5 ಸ್ಟಾರ್ ದರ್ಜೆ ಇದ್ದರೆ 50% ಇಂಧನ ಉಳಿತಾಯವನ್ನು ಬಿಂಬಿಸುತ್ತದೆ.
ಹವೆಲ್ಸ್, ಓರಿಯೆಂಟ್ ಎಲೆಕ್ಟ್ರಿಕ್, ಉಷಾ ಇಂಟರ್ ನ್ಯಾಶನಲ್ ಈ ನಡೆಯನ್ನು ಸ್ವಾಗತಿಸಿವೆ. ಈ ಸ್ಟಾರ್ ಲೇಬಲ್ ಪದ್ಧತಿಯಿಂದ ಸೀಲಿಂಗ್ ಫ್ಯಾನ್ ದರವನ್ನು 5-20% ಏರಿಸುವುದು ಅನಿವಾರ್ಯ ಎಂದು ಉತ್ಪಾದಕ ಕಂಪನಿಗಳು ತಿಳಿಸಿವೆ.
ಭಾರತದಲ್ಲಿ ಮನೆಯಲ್ಲಿ ಬಳಸುವ ಫ್ಯಾನ್‌ಗಳು ಸರಾಸರಿ 20% ವಿದ್ಯುತ್ ಅನ್ನು ಬಳಸುತ್ತವೆ. ಈ ಸ್ಟಾರ್ ಲೇಬಲ್ ಇರುವ ಫ್ಯಾನ್‌ಗಳಿಂದ ಗ್ರಾಹಕರಿಗೆ ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆ. ಹವೆಲ್ಸ್ ಇಂಡಿಯಾ ತನ್ನ ಸೀಲಿಂಗ್ ಫ್ಯಾನ್‌ಗಳ ದರ ಏರಿಸುವುದಾಗಿ ತಿಳಿಸಿದೆ. ಭಾರತದಲ್ಲಿ ಫ್ಯಾನ್ ಮಾರುಕಟ್ಟೆಯ ಗಾತ್ರ ಅಂದಾಜು 10,000 ಕೋಟಿ ರೂ.ಗಳಾಗಿದೆ. ಸುಮಾರು 200 ಕಂಪನಿಗಳು ಫ್ಯಾನ್‌ಗಳ ಮಾರುಕಟ್ಟೆಯಲ್ಲಿವೆ.