Site icon Vistara News

Windfal Tax | ದೇಶೀಯ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್‌ ತೆರಿಗೆ ಕಡಿತಗೊಳಿಸಿದ ಕೇಂದ್ರ

crude oil

ನವ ದೆಹಲಿ: ಕೇಂದ್ರ ಸರ್ಕಾರ ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್‌ ತೆರಿಗೆಯನ್ನು ( Windfal Tax) ಕಡಿತಗೊಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಚ್ಚಾ ತೈಲದ ವಿಂಡ್‌ ಫಾಲ್‌ ತೆರಿಗೆಯನ್ನು ಪ್ರತಿ ಟನ್ನಿಗೆ ೧೭,೭೫೦ ರೂ.ಗಳಿಂದ ೧೩,೦೦೦ ರೂ.ಗೆ ಇಳಿಸಿದೆ.

ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ಕಚ್ಚಾ ತೈಲದ ದರ ಗಣನೀಯವಾಗಿ ಏರಿಕೆಯಾಗಿತ್ತು. ಇದರ ಪರಿಣಾಮ ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗುವ ಕಚ್ಚಾ ತೈಲದ ರಫ್ತಿನಲ್ಲಿ ಭಾರಿ ಲಾಭ ಸಿಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ ಅದರ ಮೇಲಿನ ವಿಂಡ್‌ ಫಾಲ್‌ ತೆರಿಗೆಯನ್ನು ಏರಿಸಿತ್ತು. ಆದರೆ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ೬ ತಿಂಗಳಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿರುವುದರಿಂದ ವಿಂಡ್‌ ಫಾಲ್‌ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೀಗಿದ್ದರೂ ಸರ್ಕಾರ ಡೀಸೆಲ್‌ ರಫ್ತಿನ ಮೇಲೆ ಮೇಲ್ತೆರಿಗೆ (ಲೆವಿ) ಅನ್ನು ಲೀಟರ್‌ಗೆ ೫ ರೂ.ಗಳಿಂದ ೭ ರೂ.ಗೆ ಏರಿಸಿದೆ. ಎಟಿಎಫ್‌ ರಫ್ತಿನಲ್ಲಿ ಲೀಟರ್‌ಗೆ ೨ ರೂ. ಮೇಲ್ತೆರಿಗೆಯನ್ನು ವಿಧಿಸಲಾಗಿದೆ.

ಏನಿದು ವಿಂಡ್‌ಫಾಲ್ ಟ್ಯಾಕ್ಸ್?:‌ ಒಂದು ಕಂಪನಿ ಅಥವಾ ವಲಯದಲ್ಲಿ ಅನಿರೀಕ್ಷಿತವಾಗಿ ಭಾರಿ ಲಾಭ ಉಂಟಾದರೆ, ಸರ್ಕಾರ ಅದರ ಮೇಲೆ ಹಾಕುವ ಹೆಚ್ಚುವರಿ ತೆರಿಗೆಗೆ ವಿಂಡ್‌ಫಾಲ್‌ ಟ್ಯಾಕ್ಸ್‌ ಎನ್ನುತ್ತಾರೆ. ಆರ್ಥಿಕ ಪರಿಸ್ಥಿತಿಯ ಪರಿಣಾಮ ಅಂಥ ಲಾಭ ಆದಾಗ ಸರ್ಕಾರ ವಿಂಡ್‌ಫಾಲ್‌ ತೆರಿಗೆಯನ್ನು ವಿಧಿಸುತ್ತದೆ.

ಇದನ್ನೂ ಓದಿ:GOOD NEWS | ಕಚ್ಚಾತೈಲ ದರ 5% ಇಳಿಕೆ, ಇರಾನ್‌ನಿಂದಲೂ ತೈಲ ಪೂರೈಕೆಯ ನಿರೀಕ್ಷೆ

Exit mobile version