ನವ ದೆಹಲಿ: ಕೇಂದ್ರ ಸರ್ಕಾರಿ ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯುವ ಸಲುವಾಗಿ ಲೈಫ್ ಸರ್ಟಿಫಿಕೇಟ್ ಅಥವಾ ಜೀವನ್ ಪ್ರಮಾಣ್ ಪತ್ರದ ದೃಢೀಕರಣವನ್ನು ಪ್ರತಿ ವರ್ಷ (Digital life certificates) ನೀಡಬೇಕಾಗುತ್ತದೆ. ಇದುವರೆಗೆ ಇದಕ್ಕಾಗಿ ಕಚೇರಿಗೆ ಹೋಗಿ ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಇದೀಗ ಪಿಂಚಣಿದಾರರು ಆಧಾರ್ ಮತ್ತು ಫೇಸ್ ರೆಕಗ್ನಿಶನ್ ತಂತ್ರಜ್ಞಾನದ ಮೂಲಕ ತಮ್ಮ ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಪಡೆಯಬಹುದು. ಸಂಬಂಧಿಸಿದ ಕಚೇರಿಗೇ ತೆರಳಬೇಕಿಲ್ಲ.
ಕೇಂದ್ರ ಸರ್ಕಾರ ಫೇಸ್ ರೆಕಗ್ನಿಶನ್ ತಂತ್ರಜ್ಞಾನವನ್ನು ಆಧಾರ್ ಡೇಟಾ ಬೇಸ್ ಜತೆ ಲಿಂಕ್ ಮಾಡಲು ಅನುಮತಿ ನೀಡಿತ್ತು. ಈ ಬಗ್ಗೆ ವ್ಯಾಪಕ ಜನ ಜಾಗೃತಿಗೆ ಸರ್ಕಾರ ನಿರ್ಧರಿಸಿದೆ.
ಪಿಂಚಣಿದಾರರು ಪಿಂಚಣಿ ಪಡೆಯುವ ನಿಟ್ಟಿನಲ್ಲಿ ಜೀವನ್ ಪ್ರಮಾಣ್ ಪತ್ರ ಅಗತ್ಯವಾಗಿದೆ. ಪಿಂಚಣಿದಾರರ ಇರುವಿಕೆ ಬಗ್ಗೆ ಅದು ಆಧಾರವಾಗಿದೆ. ಪ್ರತಿ ವರ್ಷ ನವೆಂಬರ್ 1ರಿಂದ ಇದನ್ನು ಪಿಂಚಣಿದಾರರು ಸಲ್ಲಿಸಬೇಕಾಗುತ್ತದೆ.