Site icon Vistara News

Inflation| ಕೇಂದ್ರ ಸರ್ಕಾರದಿಂದ ಇಲಾಖೆಗಳ ವೆಚ್ಚ ನಿಯಂತ್ರಣಕ್ಕೆ ಸೂಚನೆ ಸಂಭವ

finance ministry

ನವದೆಹಲಿ: ಕೇಂದ್ರ ಸರ್ಕಾರ ಹಣದುಬ್ಬರವನ್ನು (Inflation) ನಿಯಂತ್ರಿಸುವ ಉದ್ದೇಶದಿಂದ ಹೆಚ್ಚುವರಿ ಅನುದಾನ ನಿರೀಕ್ಷಿಸದಂತೆ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚನೆ ನೀಡುವ ಸಾಧ್ಯತೆ ಇದೆ.

ಹಣದುಬ್ಬರವನ್ನು ಹತ್ತಿಕ್ಕಲು ಆರ್‌ಬಿಐ ಕೈಗೊಂಡಿರುವ ಕ್ರಮಗಳಿಗೆ ಪೂರಕವಾಗಿ ನಾನಾ ಇಲಾಖೆಗಳ ಖರ್ಚುವೆಚ್ಚಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕಂದಾಯ ವೆಚ್ಚದ ಪರಿಷ್ಕೃತ ಅಂದಾಜಿನಲ್ಲಿ ಹೆಚ್ಚುವರಿ ಅನುದಾನವನ್ನು ನಿರೀಕ್ಷಿಸದಂತೆ ಹಣಕಾಸು ಸಚಿವಾಲಯವು ಇತರ ಸಚಿವಾಲಯಗಳಿಗೆ ಸೂಚಿಸಲಿದೆ. ಇಲಾಖೆಗಳಲ್ಲಿ ಖರ್ಚು ವೆಚ್ಚಗಳು ಹೆಚ್ಚಿದರೆ, ಹಣದುಬ್ಬರವನ್ನು ನಿಯಂತ್ರಿಸುವ ಆರ್‌ಬಿಐನ ಕ್ರಮಗಳಿಗೆ ಹಿನ್ನಡೆಯಾಗುವ ಅಪಾಯ ಇರುವುದರಿಂದ ಸರ್ಕಾರ ಎಚ್ಚರ ವಹಿಸಿದೆ.

ಸಚಿವಾಲಯ ಮತ್ತು ಇಲಾಖೆಗಳಲ್ಲಿ ಹೆಚ್ಚುವರಿ ಕಂದಾಯ ವೆಚ್ಚಕ್ಕೆ ಅವಕಾಶ ಸೀಮಿತವಾಗಿದೆ. ೨೦೨-೨೩ರಲ್ಲಿ ವಿತ್ತೀಯ ಕೊರತೆ ೧೬.೬ ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ೬.೪%ರಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ. ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ವೆಚ್ಚ ಏರಿಕೆಯಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸುಂಕ ಕಡಿತದಿಂದ ತೆರಿಗೆ ಸಂಗ್ರಹದ ಮೇಲೆ ಪ್ರಭಾವ ಬೀರಲಿದೆ. ಈ ನಡುವೆ ಭಾರತದಿಂದ ಕಚ್ಚಾ ತೈಲ ರಫ್ತಿನ ಮೇಲೆ ಸುಂಕ ಹೆಚ್ಚಳದ ಮೂಲಕ ತೆರಿಗೆ ಆದಾಯ ಹೆಚ್ಚಿಸಲು ಉದ್ದೇಶಿಸಲಾಗಿದೆ.

Exit mobile version