Site icon Vistara News

ಕೇಂದ್ರ ಸರಕಾರದ ನಾನಾ ಯೋಜನೆಗಳ ಪ್ರಯೋಜನ ಪಡೆಯಲು ಶೀಘ್ರದಲ್ಲೇ ಜನ ಸಮರ್ಥ ವೆಬ್‌ ಪೋರ್ಟಲ್

parliment

ಹೊಸದಿಲ್ಲಿ: ಕೇಂದ್ರ ಸರಕಾರದ ನಾನಾ ಯೋಜನೆಗಳ ಪ್ರಯೋಜನ ಪಡೆಯಲು ಶೀಘ್ರದಲ್ಲೇ “ಜನ ಸಮರ್ಥʼ ಎಂಬ ಹೊಸ ವೆಬ್‌ ಪೋರ್ಟಲ್‌ ಬಿಡುಗಡೆಯಾಗಲಿದೆ. ಇದರಿಂದ ಒಂದೇ ಕಡೆ ಕೇಂದ್ರದ ಎಲ್ಲ ಜನೋಪಯೋಗಿ ಯೋಜನೆಗಳ ವಿವರ ಪಡೆಯಲು, ಅನುಕೂಲ ಹೊಂದಲು ಸಾಧ್ಯವಾಗಲಿದೆ.

ನರೇಂದ್ರ ಮೋದಿಯವರ “ಕನಿಷ್ಠ ಸರಕಾರ ಗರಿಷ್ಠ ಆಡಳಿತʼ ಪರಿಕಲ್ಪನೆಯ ಭಾಗವಾಗಿ ಹೊಸ ( Jann smarth) ಪೋರ್ಟಲ್‌ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಮೊದಲಿಗೆ ಕೇಂದ್ರದ 15 ಯೋಜನೆಗಳನ್ನು ವೆಬ್‌ ಪೋರ್ಟಲ್‌ ಹೊಂದಲಿದೆ. ಬಳಿಕ ಇತರ ಯೋಜನೆಗಳೂ ಸೇರ್ಪಡೆಯಾಗಲಿದೆ.

ಉದಾಹರಣೆಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆ ಮತ್ತು ಕ್ರೆಡಿಟ್ ಲಿಂಕ್ಡ್‌ ಕ್ಯಾಪಿಟಲ್‌ ಸಬ್ಸಿಡಿ ಸ್ಕೀಮ್‌ ಅನ್ನು ನಾನಾ ಇಲಾಖೆಗಳು ಜಾರಿಗೊಳಿಸಿವೆ. ವೆಬ್‌ ಪೋರ್ಟಲ್‌ ಇಂಥ ಯೋಜನೆಗಳು ಒಂದೇ ಕಡೆ ಸಿಗುವಂತೆ ಮಾಡಲಿದೆ. ಇದರಿಂದ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ರಾಜ್ಯ ಸರಕಾರದ ಯೋಜನೆಗಳನ್ನೂ ಭವಿಷ್ಯದಲ್ಲಿ ಇದಕ್ಕೆ ಸೇರಿಸಲಾಗುವುದು.

ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಕ್ಷಿಪ್ರ ಸಾಲ ವಿತರಣೆಗೆ ಅನುಕೂಲವಾಗಲು http://psbloansin5959minutes.com ಎಂಬ ವೆಬ್‌ ಪೋರ್ಟಲ್‌ ತೆರೆದಿತ್ತು. ಇದು ಸಣ್ಣ ಉದ್ದಿಮೆದಾರರಿಗೆ 59 ನಿಮಿಷಗಳಲ್ಲಿ ಸಾಲದ ತಾತ್ವಿಕ ಮಂಜೂರಾತಿ ಪಡೆಯಲು ನೆರವು ನೀಡುತ್ತದೆ. ಇದಾದ 7-8 ದಿನಳಲ್ಲಿ ಸಾಲ ವಿತರಣೆ ಪ್ರಕ್ರಿಯೆ ನಡೆಯುತ್ತದೆ. ಈ ಯೋಜನೆ ಬಿಡುಗಡೆಯಾದ ಮೊದಲ ಎರಡು ತಿಂಗಳುಗಳಲ್ಲಿ 37,412 ಕೋಟಿ ರೂ. ಸಾಲ ವಿತರಣೆಯಾಗಿತ್ತು.

Exit mobile version