Site icon Vistara News

Agniveers : ಮಾಜಿ ಅಗ್ನಿವೀರರಿಗೆ ಬಿಎಸ್ಎಫ್‌ನಲ್ಲಿ 10% ಉದ್ಯೋಗ ಮೀಸಲು ಘೋಷಿಸಿದ ಕೇಂದ್ರ ಸರ್ಕಾರ

agniveer

agniveer

ನವ ದೆಹಲಿ: ಕೇಂದ್ರ ಗೃಹ ಸಚಿವಾಲಯವು ಮಾಜಿ ಅಗ್ನಿವೀರರಿಗೆ ಗಡಿ ಭದ್ರತಾಪಡೆಯಲ್ಲಿ (Border Security Force -BSF) 10% ಮೀಸಲಾತಿಯನ್ನು ಘೋಷಿಸಿದೆ. ಗೃಹ ಸಚಿವಾಲಯವು ಈ ಮಾಜಿ ಅಗ್ನಿವೀರರಿಗೆ ಬಿಎಸ್‌ಎಫ್‌ ಸೇರಲು ಅನುಕೂಲ ಆಗುವಂತೆ ಗರಿಷ್ಠ ವಯೋಮಿತಿಯಲ್ಲಿ (Agniveers) ಕೂಡ 5 ವರ್ಷ ಸಡಿಲಗೊಳಿಸಲಾಗಿದೆ.

ಬಿಎಸ್‌ಎಫ್‌ ಮಾತ್ರವಲ್ಲದೆ ಕೇಂದ್ರೀಯ ಅರೆ ಸೇನಾ ಪಡೆ ( Central para -military forces) ಮತ್ತು ಅಸ್ಸಾಂ ರೈಫಲ್ಸ್‌ (Assam Rifles) ಕೂಡ ಅಗ್ನಿವೀರರಿಗೆ ಉದ್ಯೋಗ ಮೀಸಲು ಕಲ್ಪಿಸಿವೆ.

ಸಿಎಪಿಎಫ್‌ನಲ್ಲಿ ( ಕೇಂದ್ರೀಯ ಅರೆ ಸೇನಾ ಪಡೆ) ನೇಮಕಾತಿಗೆ ವಯೋಮಿತಿ 18-23 ವರ್ಷಗಳಾಗಿವೆ. ಆದರೆ ಅಗ್ನಿವೀರರನ್ನು 26 ವರ್ಷದ ತನಕ ನೇಮಿಸಲು ಅವಕಾಶ ನೀಡಲಾಗಿದೆ. ಕೇಂದ್ರೀಯ ಅರೆ ಸೇನಾ ಪಡೆ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ 73,000 ಹುದ್ದೆಗಳಿವೆ.

Exit mobile version