Site icon Vistara News

IDBI Bank | ಐಡಿಬಿಐ ಬ್ಯಾಂಕ್‌ನ 51% ಷೇರು ಮಾರಾಟಕ್ಕೆ ಕೇಂದ್ರ ಸರ್ಕಾರ ಪರಿಶೀಲನೆ

idbi bank

ನವ ದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಐಡಿಬಿಐ ಬ್ಯಾಂಕ್‌ನ (IDBI Bank) ೫೧% ಷೇರುಗಳನ್ನು ಮಾರಾಟ ಮಾಡಲು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಸಾರ್ವಜನಿಕ ಬ್ಯಾಂಕ್‌ ಖಾಸಗೀಕರಣ ಪ್ರಕ್ರಿಯೆ ನಡೆಯಲಿದೆ.

ಭಾರತೀಯ ಜೀವ ವಿಮಾ ನಿಗಮವು ಐಡಿಬಿಐ ಬ್ಯಾಂಕ್‌ನಲ್ಲಿ ೯೪% ಷೇರುಗಳನ್ನು ಒಳಗೊಂಡಿದೆ. ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಒಟ್ಟಾಗಿ ಷೇರು ವಿಕ್ರಯಕ್ಕೆ ಸಂಬಂಧಿಸಿ ಪರಿಶೀಲಿಸುತ್ತಿದೆ. ಷೇರು ಮಾರಾಟದ ಬಳಿಕವೂ ಉಭಯ ಬಣಗಳು ಬ್ಯಾಂಕ್‌ನಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಷೇರುಗಳನ್ನು ಉಳಿಸಿಕೊಳ್ಳಲು ಕೂಡ ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಸಚಿವರುಗಳ ಸಮಿತಿಯು ಐಡಿಬಿಐ ಬ್ಯಾಂಕ್‌ನ ಷೇರು ಮಾರಾಟದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಕಳೆದ ೧೨ ತಿಂಗಳುಗಳಲ್ಲಿ ಐಡಿಬಿಐ ಬ್ಯಾಂಕ್‌ನ ಷೇರು ದರದಲ್ಲಿ ೬.೩% ಗೆ ಏರಿಕೆಯಾಗಿದೆ. ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ೪೨,೪೭೦ ಕೋಟಿ ರೂ.ಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಎರಡೂ ತಮ್ಮ ಷೇರುಗಳ ಮಾರಾಟದ ಮೂಲಕ ಐಡಿಬಿಐ ಬ್ಯಾಂಕ್‌ನ ಆಡಳಿತಾತ್ಮಕ ನಿಯಂತ್ರಣವನ್ನು ಬಿಟ್ಟುಕೊಡಲಿವೆ.

Exit mobile version