- ಜಿಸ್ಟಿ ಮಂಡಳಿಯ ನಿರ್ಣಯ ಶಿಫಾರಸು ಅಷ್ಟೇ.
- ಕೇಂದ್ರ, ರಾಜ್ಯ ಸರಕಾರಗಳಿ ಜಿಎಸ್‌ಟಿ ಬಗ್ಗೆ ಕಾನೂನು ರಚಿಸಬಹುದು
ಹೊಸದಿಲ್ಲಿ: ಜಿಎಸ್‌ಟಿಗೆ ಸಂಬಂಧಿಸಿದ ಕಾನೂನುಗಳನ್ನು ರಚಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಮಾನ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಜಿಎಸ್‌ಟಿ ಮಂಡಳಿಯ ನಿರ್ಣಯಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಶಿಫಾರಸಿನ ಸ್ವರೂಪದಲ್ಲಿ ಇರುತ್ತವೆಯೇ ಹೊರತು, ಅವುಗಳಿಗೆ ಸರಕಾರಗಳ ಬದ್ಧತೆ ಇರಬೇಕೆಂದಿಲ್ಲ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ತೀರ್ಪು ನೀಡಿದೆ.
ಹೀಗಾಗಿ ಜಿಎಸ್‌ಟಿ ಮಂಡಳಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಜಿಎಸ್‌ಟಿ ಮಂಡಳಿಯು ವ್ಯಾಪಕವಾದ ಚರ್ಚೆಯ ಮೂಲಕ ಶಿಫಾರಸುಗಳನ್ನು ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು.
2020ರಲ್ಲಿ ರಿವರ್ಸ್ ಶುಲ್ಕದ ಹೆಸರಿನಲ್ಲಿ ಸಮುದ್ರ ಮಾರ್ಗದ ಸರಕು ಸಾಗಣೆಗೆ ಸಂಬಂಧಿಸಿ ಆಮದುದಾರರಿಗೆ ವಿಧಿಸಲಾಗಿದ್ದ ಐಜಿಎಸ್‌ಟಿಯನ್ನು ರದ್ದುಪಡಿಸಿ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪುರಸ್ಕರಿಸಿರುವ ಸುಪ್ರೀಂಕೋರ್ಟ್ ಈ ತೀರ್ಪು ಕೊಟ್ಟಿದೆ.