Site icon Vistara News

ChatGPT : ಚಾಟ್‌ಜಿಪಿಟಿ ಮನುಷ್ಯರಿಗೆ ಪರ್ಯಾಯವೇ? ನಾರಾಯಣ ಮೂರ್ತಿ ಹೇಳಿದ್ದೇನು?

Youngsters should work 70 hours a week Says Narayana Murthy

narayana murthy

ಬೆಂಗಳೂರು: ಈಗ ಎಲ್ಲ ಕಡೆ ಎಐ ತಂತ್ರಜ್ಞಾನ ಆಧರಿತ ಚಾಟ್‌ಬೋಟ್‌ಗಳದ್ದೇ ಚರ್ಚೆ. ಚಾಟ್‌ಜಿಪಿಟಿ ಮನುಷ್ಯರು ಮಾಡುವ ಅನೇಕ ಕೆಲಸಗಳನ್ನು ಕಸಿದುಕೊಳ್ಳಲಿದೆ ( ChatGPT ) ಎಂಬ ಭಯ ಮಿಶ್ರಿತ ಕುತೂಹಲವೂ ಇದೆ. ಆದರೆ ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ನ ಎನ್‌ ಆರ್‌ ನಾರಾಯಣಮೂರ್ತಿ ಅವರು ಇದರ ಬಗ್ಗೆ ಏನು ಹೇಳುತ್ತಾರೆ ಗೊತ್ತೇ?

ಚಾಟ್‌ಬೋಟ್‌ಗಳು ಪ್ರಬಂಧರಚನೆ, ಕೋಡಿಂಗ್‌, ಸಂಭಾಷಣೆ ಮೊದಲಾದ ಮನುಷ್ಯರು ಮಾಡುವ ಕೆಲಸಗಳನ್ನು ಮಾಡಲಿವೆ ಎಂಬ ಆತಂಕದ ನಡುವೆ ನಾರಾಯಣಮೂರ್ತಿ ಅವರು, ಮನುಷ್ಯರಿಗೆ ಚಾಟ್‌ಬೋಟ್‌ಗಳು ಪರ್ಯಾಯ ಆಗಲಾರವು ಎಂದು ಹೇಳಿದ್ದಾರೆ. ಚಾಟ್‌ಬೋಟ್‌ಗಳು ಅಲಿಬಾಬಾ ಮತ್ತು ಬೈಡು ಮೊದಲಾದ ಕಂಪನಿಗಳನ್ನು ಆಕರ್ಷಿಸಿದ್ದು, ಅವುಗಳದ್ದೇ ಮಾದರಿಯ ಚಾಟ್‌ಜಿಪಿಟಿಯನ್ನು ಅಭಿವೃದ್ಧಿಪಡಿಸಿವೆ.

ನಾರಾಯಣಮೂರ್ತಿಯವರು ಇನ್ಫೋಸಿಸ್‌ನಲ್ಲಿ 1981-2002 ನಡುವೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. (CEO) ಚಾಟ್‌ಜಿಪಿಟಿಯನ್ನು ನಮ್ಮ ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಪ್ರಯೋಜನವಾಗುವುದಿದ್ದರೆ ಮಾತ್ರ ಬಳಸಬಹುದು. ಆದರೆ ಮನುಷ್ಯರಿಗೆ ಅವುಗಳು ಬದಲಿ ಆಗದು ಎಂದು ನಾರಾಯಣಮೂರ್ತಿ ಅವರು ಸಿಎನ್‌ಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ ವಿವರಿಸಿದರು.

ಮನುಷ್ಯರ ಕಲ್ಪನಾ ಶಕ್ತಿಗಿಂತ ಮಿಗಿಲು ಬೇರಿಲ್ಲ: ಮೂರ್ತಿ

ಮನುಷ್ಯರ ಕಲ್ಪನಾ ಶಕ್ತಿ ಎಲ್ಲಕ್ಕಿಂತ ದೊಡ್ಡದು. ಅದನ್ನು ಮೀರಿಸಲು ಯಾವುದಕ್ಕೂ ಸಾಧ್ಯವಿಲ್ಲ ಎಂಬ ಸಿದ್ಧಾಂತವನ್ನು ನಾನು ನಂಬುತ್ತೇನೆ. ಆದ್ದರಿಂದ ಚಾಟ್‌ಜಿಪಿಟಿ ಮೊದಲಾದ ಎಐ ಆಧರಿತ ಟೂಲ್ಸ್‌ಗಳು ಮನುಷ್ಯದರಿಗೆ ಪರ್ಯಾಯವಾಗಲಿದೆ ಎಂಬ ಆತಂಕ ಬೇಡ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

ಇನ್ಫೋಸಿಸ್‌, ಜನವರಿ-ಮಾರ್ಚ್‌ ಅವಧಿಯ ತ್ರೈಮಾಸಿಕ ಹಣಕಾಸು ( Infosys Q4 results) ಫಲಿತಾಂಶವನ್ನು ಪ್ರಕಟಿಸಿದ್ದು, 6,128 ಕೋಟಿ ರೂ. ಲಾಭ ಗಳಿಸಿದೆ. ಪ್ರತಿ ಷೇರಿಗೆ 17.50 ರೂ.ಗಳ ಡಿವಿಡೆಂಡ್‌ ಅನ್ನೂ ಘೋಷಿಸಿದೆ. ಲಾಭದ ಪ್ರಮಾಣದಲ್ಲಿ 7.7% ಹೆಚ್ಚಳವಾಗಿದೆ.

ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯು 5,696 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇನ್ಫೋಸಿಸ್‌ನ ಆದಾಯದಲ್ಲಿ 16% ಏರಿದ್ದು, 37,441 ಕೋಟಿ ರೂ.ಗೆ ಏರಿದೆ. ಕಳೆದ ಸಾಲಿನಲ್ಲಿ ಕಂಪನಿ 32,276 ಕೋಟಿ ರೂ. ಆದಾಯ ಗಳಿಸಿತ್ತು. ಜನವರಿ-ಮಾರ್ಚ್‌ ಅವಧಿಯಲ್ಲಿ ಇನ್ಫೊಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಭವು 24.3%ರಿಂದ 20.9%ಕ್ಕೆ ತಗ್ಗಿದೆ. ಫಲಿತಾಂಶವು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ದರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಷೇರು ದರ 2.79% ಇಳಿದಿತ್ತು. (1,383 ರೂ.) ‌

ಸ್ಯಾನ್‌ ಫ್ರಾನ್ಸಿಸ್ಕೊ ಮೂಲದ ಎಐ ಕಂಪನಿ ಓಪನ್‌ ಎಐ, ಚಾಟ್‌ಜಿಪಿಟಿಯನ್ನು 2022ರ ನವೆಂಬರ್‌ನಲ್ಲಿ ಅಭಿವೃದ್ಧಿಪಡಿಸಿತ್ತು.

Exit mobile version