ಬೀಜಿಂಗ್: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಕ್ಕೆ ಸಾಲ ಮರು ಪಾವತಿಸಲು ಕೇವಲ 2 ವರ್ಷಗಳ ಮೊರಟೋರಿಯಂ ಅನ್ನು ಚೀನಾ ನೀಡಿದೆ. (China-Sri Lanka) ಶ್ರೀಲಂಕಾ ಒಟ್ಟು 51 ಶತಕೋಟಿ ಡಾಲರ್ ವಿದೇಶಿ ಸಾಲದ ಹೊರೆಯನ್ನು (ಅಂದಾಜು 4.18 ಲಕ್ಷ ಕೋಟಿ ರೂ.) ಹೊಂದಿದೆ. ಚೀನಾ ತನ್ನ ಬೆಲ್ಟ್ & ರೋಡ್ ಯೋಜನೆಯ ಅಡಿಯಲ್ಲಿ ಶ್ರೀಲಂಕಾಕ್ಕೆ ಸಾಲ ನೀಡಿತ್ತು. ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳಿಗೆ ಬಂದರು, ರಸ್ತೆ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಸಾಲದ ನೆರವನ್ನು ಚೀನಾ ನೀಡುತ್ತಿದೆ. ಈ ಮೂಲವ ಅಂಥ ದೇಶಗಳ ಜತೆ ವಾಣಿಜ್ಯ ಸಂಪರ್ಕವನ್ನು ಹೆಚ್ಚಿಸುತ್ತಿದೆ. ಆದರೆ ಇದು ವಿವಾದಗಳಿಗೂ ಕಾರಣವಾಗಿದೆ. ಚೀನಾ ಸಾಲದ ಕೂಪಕ್ಕೆ ಇಂಥ ದೇಶಗಳನ್ನು ತಳ್ಳುತ್ತಿದೆ ಎಂಬ ಆರೋಪವೂ ಇದೆ.
ಶ್ರೀಲಂಕಾಗೆ ಜಪಾನ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಬಳಿಕ ಹೆಚ್ಚಿನ ಸಾಲದ ನೆರವನ್ನು ಚೀನಾ ನೀಡಿದೆ. ಚೀನಾದಿಂದ ಪಡೆದ ಸಾಲದ ಹಣದಲ್ಲಿ ಲಂಕಾ ಏರ್‌ಪೋರ್ಟ್ ಅನ್ನು ನಿರ್ಮಿಸಿದೆ. ಭಾರತ ಕೂಡ 4.4 ಶತಕೋಟಿ ಡಾಲರ್ (35,640 ಕೋಟಿ ರೂ.) ಸಾಲ ನೀಡಿದೆ.
ಶ್ರೀಲಂಕಾ ಇದೀಗ ಐಎಂಎಫ್‌ನಿಂದಲೂ ಹೊಸ ಸಾಲವನ್ನು ( 23,490 ಕೋಟಿ ರೂ.) ನಿರೀಕ್ಷಿಸುತ್ತಿದೆ. ಚೀನಾ ಕೂಡ ಇದಕ್ಕೆ ಬೆಂಬಲಿಸಿದೆ.