Site icon Vistara News

China loans : ಚೀನಾ ಸಾಲ ಪಡೆದ ಡಜನ್‌ಗಟ್ಟಲೆ ಬಡ ದೇಶಗಳು ಈಗ ಪತನದ ಅಂಚಿನಲ್ಲಿ

China

ಬೀಜಿಂಗ್:‌ ಚೀನಾದ ಸಾಲದ (China loans) ಬಲೆಗೆ ಸಿಲುಕಿರುವ ಡಜನ್‌ಗಟ್ಟಲೆ ಬಡ ರಾಷ್ಟ್ರಗಳು ಈಗ ಪತನದ ಅಂಚಿನಲ್ಲಿವೆ. ನೂರಾರು ಬಿಲಿಯನ್‌ ಡಾಲರ್‌ ಸಾಲವನ್ನು ತೀರಿಸಲಾಗದೆ ಒದ್ದಾಡುತ್ತಿವೆ. ಪಾಕಿಸ್ತಾನ, (pakistan) ಕೀನ್ಯಾ, ಜಾಂಬಿಯಾ, ಲಾವೋಸ್‌, ಮಂಗೋಲಿಯಾ ಅಂಥ (Economic instability) ದೇಶಗಳ ಪಟ್ಟಿಯಲ್ಲಿ ಇವೆ.

ಈ ದೇಶಗಳು ತಮ್ಮ ತೆರಿಗೆ ಆದಾಯಲ್ಲಿ ಹೆಚ್ಚು ಮೊತ್ತವನ್ನು ಚೀನಾ ಸಾಲ ತೀರಿಸಲು ನೀಡಬೇಕಾದ ದುಸ್ಥಿತಿ ಬಂದೊದಗಿದೆ. ಹೀಗಾಗಿ ಶಾಲೆ, ಆಸ್ಪತ್ರೆಗಳನ್ನು ನಡೆಸಲು, ರಸ್ತೆ ಇತ್ಯಾದಿ ಮೂಲಸೌಕರ್ಯಕ್ಕೆ ಅವುಗಳ ಬಳಿ ಹಣ ಇಲ್ಲವಾಗಿದೆ. ಅವುಗಳ ವಿದೇಶಿ ವಿನಿಮಯ ಸಂಗ್ರಹ ಬರಿದಾಗುತ್ತಿದೆ.

ಬಡ ದೇಶಗಳಿಗೆ ಸಾಲ ಕೊಡುವ ಚೀನಾ ತನ್ನ ಸಾಲದ ವಿವಿರಗಳನ್ನು, ಅಂದರೆ ಮೊತ್ತ, ಷರತ್ತುಗಳನ್ನು ಗೌಪ್ಯವಾಗಿಡುತ್ತದೆ. ಆದರೆ ಯಾವ ಕಾರಣಕ್ಕೂ ಸಾಲ ಮನ್ನಾ ಮಾಡುವುದಿಲ್ಲ. ಹೀಗಾಗಿ ಇತರ ಸಾಲದಾತರು ಅಂಥ ದೇಶಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ.

ಇದನ್ನೂ ಓದಿ :China-Sri Lanka : ಶ್ರೀಲಂಕಾಕ್ಕೆ ಸಾಲ ಮರು ಪಾವತಿಸಲು 2 ವರ್ಷಗಳ ಮೊರಟೋರಿಯಂ ನೀಡಿದ ಚೀನಾ

ಶ್ರೀಲಂಕಾ ಮತ್ತು ಜಾಂಬಿಯಾ ಈಗಾಗಲೇ ಚೀನಿ ಸಾಲ ತೀರಿಸಲಾಗದೆ ದಿವಾಳಿಯಾಗಿವೆ. ಬಂದರು, ಗಣಿಗಾರಿಕೆ, ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ಚೀನಾದಿಂದ ಪಡೆದ ಸಾಲವನ್ನು ಮರು ಪಾವತಿಸಲಾಗದೆ ಬಳಲಿವೆ. ಪಾಕಿಸ್ತಾನದಲ್ಲಿ ಲಕ್ಷಾಂತರ ಜವಳಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ವಿದ್ಯುತ್‌ ಇಲ್ಲದೆ ಕಾರ್ಖಾನೆಗಳು ಮುಚ್ಚಿವೆ.

ಶ್ರೀಲಂಕಾದಲ್ಲಿ ಕಾರ್ಖಾನೆಗಳು ಮುಚ್ಚಿ 5 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹಣದುಬ್ಬರ 50% ದಾಟಿದೆ. ದೇಶದ ಹಲವು ಭಾಗಗಳು ಕಡು ಬಡತನದ ದವಡೆಗೆ ಸಿಲುಕಿವೆ.

Exit mobile version