Site icon Vistara News

Cisco Layoff | 650ಕ್ಕೂ ಅಧಿಕ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತೆಸೆದ ಸಿಸ್ಕೋ

ವಾಷಿಂಗ್ಟನ್:‌ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಐಟಿ ಸಂಸ್ಥೆಗಳು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಇದೀಗ ಆ ಸಾಲಿಗೆ ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಸಿಸ್ಕೋ (Cisco Layoff) ಕೂಡ ಸೇರಿಕೊಂಡಿದೆ. ಸಿಸ್ಕೋ ತನ್ನ 673 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.

ಇದನ್ನೂ ಓದಿ: Tech layoffs | ‌ಗ್ರೇಟ್‌ ರಿಸೆಶನ್ ಮಟ್ಟವನ್ನೂ ಮೀರಿದ ಐಟಿ ಉದ್ಯೋಗ ಕಡಿತ, 2023ರಲ್ಲಿ ಮತ್ತಷ್ಟು ಜಾಬ್‌ ಕಟ್?

ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಮುಖ್ಯ ಕಚೇರಿಯಿಂದ 371 ಸಿಬ್ಬಂದಿಯನ್ನು ತೆಗೆಯಲಾಗಿದೆ. ಅದರಲ್ಲಿ ಇಬ್ಬರು ಉಪಾಧ್ಯಕ್ಷರುಗಳೂ ಇರುವುದಾಗಿ ವರದಿಯಾಗಿದೆ. ಹಾಗೆಯೇ ಮಿಲ್ಪಿತಾಸ್‌ನಲ್ಲಿರುವ ಕಚೇರಿಯಿಂದ 222 ಸಿಬ್ಬಂದಿಯನ್ನು ತೆಗೆಯಲಾಗಿದೆ. ಅದರಲ್ಲಿ ಹೆಚ್ಚಿನವರು ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ಹುದ್ದೆಯಲ್ಲಿರುವವರಾಗಿದ್ದಾರೆ.

ಸಿಸ್ಕೋ ಸಂಸ್ಥೆಯಲ್ಲಿ ಒಟ್ಟಾರೆಯಾಗಿ 4,000 ಸಿಬ್ಬಂದಿಯಿದ್ದಾರೆ. ಸಂಸ್ಥೆ ಅದರಲ್ಲಿ ಶೇ.5 ಸಿಬ್ಬಂದಿಯನ್ನು ತೆಗೆದುಹಾಕುವ ಯೋಜನೆಯಲ್ಲಿದೆ ಎನ್ನಲಾಗಿದೆ. ಸಂಸ್ಥೆಯು ಅನೇಕ ಕಾರಣಗಳಿಂದಾಗಿ ಸಿಬ್ಬಂದಿಯನ್ನು ಮರುಸಮತೋಲನ ಮಾಡುವ ಅವಶ್ಯಕತೆ ಇದೆ ಎಂದು ಕಳೆದ ನವೆಂಬರ್‌ನಲ್ಲಿ ಹೇಳಿತ್ತು. ಇದೀಗ ಅದರ ಹೆಜ್ಜೆಯೆನ್ನುವಂತೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ: Mass layoff | ತಂತ್ರಜ್ಞಾನ ವಲಯದ ಬಳಿಕ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲೂ ಉದ್ಯೋಗ ಕಡಿತ

Exit mobile version