Site icon Vistara News

ದಾವೋಸ್ ವಿಶ್ವ ಆರ್ಥಿಕ ಸಮಾವೇಶಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ

basavaraj bommai cm

ಬೆಂಗಳೂರು: ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ಮೇ 22 ರಿಂದ 26ರ ತನಕ ನಡೆಯಲಿರುವ ವರ್ಲ್ಡ್‌ ಎಕನಾಮಿಕ್‌ ಫೋರಮ್‌ನ (WEF ) ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗದಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.‌ ಮಂಜುನಾಥ್‌ ಪ್ರಸಾದ್‌, ವಿಶೇಷ ಕರ್ತವ್ಯ ಅಧಿಕಾರಿ ರೋಹನ್‌ ಬಿರಾದಾರ್‌, ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಆಪ್ತ ಕಾರ್ಯದರ್ಶಿ ಶರಣಬಸಪ್ಪ ಅವರು ತೆರಳಲಿದ್ದಾರೆ.

300 ಮಂದಿ ಭಾಗವಹಿಸುವ ನಿರೀಕ್ಷೆ
ದಾವೋಸ್‌ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದರೆ ಮೋದಿಯವರು ಭಾಗವಹಿಸುತ್ತಿರುವುದರ ಬಗ್ಗೆ ಅಧಿಕೃತ ಪ್ರಕಟಣೆಯಾಗಿಲ್ಲ. ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ, ಆಂಧ್ರಪ್ರದೇಶ ಸಿಎಂ ವೈಎಸ್‌ ಜಗಮೋಹನ್‌ ರೆಡ್ಡಿ, ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆ, ತೆಲಂಗಾಣ ಸಿಎಂ ಕೆ.ಸಿ ರಾವ್‌ ಪುತ್ರ ಕೆ.ಟಿ ರಾಮ ರಾವ್‌ ಭಾಗವಹಿಸಲಿದ್ದಾರೆ.
ಭಾರತದ 100 ಮಂದಿ ಸಿಇಒಗಳು, ಜಗತ್ತಿನ ನಾನಾ ಭಾಗಗಳ ಉದ್ಯಮಿಗಳು, ಸರಕಾರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಬಂಡವಾಳ ಹೂಡಿಕೆಗೆ ಕರ್ನಾಟಕ ಬೆಸ್ಟ್‌, ರಾಯಭಾರಿಗಳಿಗೆ ಬೊಮ್ಮಾಯಿ ಅಭಯ

Exit mobile version