ನವ ದೆಹಲಿ: ಕೇಂದ್ರ ಸರ್ಕಾರ ಕಲ್ಲಿದ್ದಲು ಉತ್ಪಾದಕ ಕೋಲ್ ಇಂಡಿಯಾ ಲಿಮಿಟೆಡ್, ಹಿಂದೂಸ್ತಾನ್ ಝಿಂಕ್, ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿಮಿಟೆಡ್‌ನಿಂದ 5-10% ಷೇರು ಮಾರಾಟ (Coal India disinvestment ) ಮಾಡಲು ನಿರ್ಧರಿಸಿದೆ.
ಈ ಬಂಡವಾಳ ಹಿಂತೆಗೆತದ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಬ್ಲೂಮ್ ಬರ್ಗ್ ಲೆಕ್ಕಾಚಾರದ ಪ್ರಕಾರ ಸರ್ಕಾರದ ಬೊಕ್ಕಸಕ್ಕೆ 16,500 ಕೋಟಿ ರೂ. ಲಭಿಸುವ ನಿರೀಕ್ಷೆ ಇದೆ.
ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹಿಂತೆಗೆತದ ಮೂಲಕ 65,000 ಕೋಟಿ ರೂ. ಬಂಡವಾಳವನ್ನು ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ ಇದುವರೆಗೆ ಇದರ ಮೂರನೇ ಒಂದರಷ್ಟನ್ನು ಮಾತ್ರ ಸಂಗ್ರಹಿಸಿದೆ. ಕಳೆದ ಮೇನಲ್ಲಿ ನಡೆದ ಎಲ್‌ಐಸಿಯ ಐಪಿಒದಿಂದ ಇದು ಸಾಧ್ಯವಾಗಿದೆ.