ನವ ದೆಹಲಿ: ವಾಣಿಜ್ಯೋದ್ದೇಶಕ್ಕೆ ಬಳಸುವ ಅಡುಗೆ ಅನಿಲ (ಎಲ್ಪಿಜಿ) ದರದಲ್ಲಿ ಸೋಮವಾರ ಪ್ರತಿ ಸಿಲಿಂಡರ್‌ಗೆ ೩೬ ರೂ. ಇಳಿಕೆಯಾಗಿದೆ. ೧೯ ಕೆ.ಜಿ ತೂಕದ ಸಿಲಿಂಡರ್‌ಗೆ ಈ ದರ ಕಡಿತ ಅನ್ವಯವಾಗಲಿದೆ.
ದಿಲ್ಲಿಯಲ್ಲಿ ಈಗ ವಾಣಿಜ್ಯೋದ್ದೇಶದ ೧೯ ಕೆ.ಜಿ ಎಲ್ಪಿಜಿ ಸಿಲಿಂಡರ್ ದರ ೧,೯೭೬ ರೂ.ಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ೨,೧೦೦ ರೂ.ಗಳಿಂದ ೨,೦೬೩ ರೂ.ಗೆ ತಗ್ಗಿದೆ. ಕಳೆದ ಜುಲೈ ೬ರಂದು ಕೂಡ ೧೯ ಕೆ.ಜಿ ಸಿಲಿಂಡರ್‌ನ ದರದಲ್ಲಿ ೮.೫ ರೂ. ದರ ಕಡಿತ ಉಂಟಾಗಿದೆ. ಜುಲೈ ೬ರಂದು ೧೪.೧ ಕೆ.ಜಿ ಸಿಲಿಂಡರ್ ದರದಲ್ಲಿ ೫೦ ರೂ. ಏರಿಸಲಾಗಿತ್ತು.
ಪ್ರಮುಖ ನಗರಗಳಲ್ಲಿ ವಾಣಿಜ್ಯ ಬಳಕೆಯ ೧೯ ಕೆ.ಜಿ ಎಲ್ಪಿಜಿ ಸಿಲಿಂಡರ್ ದರ
ಬೆಂಗಳೂರು | 2,063 ರೂ. |
ದಿಲ್ಲಿ | 1,976 ರೂ. |
ಮುಂಬಯಿ | 1,936 ರೂ. |
ಚೆನ್ನೈ | 2,141 ರೂ. |