Site icon Vistara News

GST ದರ ಪರಿಷ್ಕರಣೆ ಕುರಿತ, ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಸಭೆ ಜೂನ್‌ 17ಕ್ಕೆ

CM basavaraja bommai

ನವದೆಹಲಿ: ಜಿಎಸ್‌ಟಿ ದರಗಳ ಪರಿಷ್ಕರಣೆಗೆ ಸಂಬಂಧಿಸಿದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಚಿವರುಗಳ ಸಮಿತಿ ಸಭೆ ಜೂನ್‌ 17ರಂದು ನಡೆಯಲಿದೆ.

ಜಿಎಸ್‌ಟಿ ದರಗಳಲ್ಲಿ ಸಂಭವನೀಯ ಬದಲಾವಣೆಗಳ ಬಗ್ಗೆ ಸಮಿತಿ ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿಯ ಅಂತಿಮ ವರದಿಗೆ ಇನ್ನೂ ಕಾಲಾವಕಾಶ ನಿರೀಕ್ಷಿಸಲಾಗಿದೆ. ಕೇಂದ್ರ ಹಾಗೂ ರಾಜ್ಯಗಳ ಹಣಕಾಸು ಸಚಿವರುಗಳನ್ನು ಒಳಗೊಂಡ ೭ ಮಂದಿ ಸದಸ್ಯರನ್ನು ಹೊಂದಿದೆ. ಈ ಹಿಂದೆ 2021ರ ನವೆಂಬರ್‌ನಲ್ಲಿ ಸಮಿತಿ ಸಭೆ ಸೇರಿತ್ತು.

ಜಿಎಸ್‌ಟಿ ಅಡಿಯಲ್ಲಿ ೫%, 12%, 18% ಮತ್ತು 28% ಎಂಬ ನಾಲ್ಕು ದರಗಳ ಶ್ರೇಣಿ ಇದೆ. ಸಗಟು ಹಣದುಬ್ಬರ 15.88%ಕ್ಕೆ ಏರಿಕೆಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಜಿಎಸ್‌ಟಿ ತೆರಿಗೆ ಶ್ರೇಣಿಗಳ ಬದಲಾವಣೆಗೆ ಅವಕಾಶಗಳು ಉಂಟಾಗಿಲ್ಲ ಎಂದೂ ಮೂಲಗಳು ತಿಳಿಸಿವೆ.

ಈ ನಡುವೆ ಜಿಎಸ್‌ಟಿ ಅನುಷ್ಠಾನಕ್ಕೆ ಸಂಬಂಧಿಸಿ ರಾಜ್ಯಗಳಿಗೆ ನೀಡುತ್ತಿರುವ ನಷ್ಟ ಪರಿಹಾರವನ್ನು ಇನ್ನೂ 3-5 ವರ್ಷ ವಿಸ್ತರಿಸಬೇಕು ಎಂದು ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವ ಅಮಿತ್‌ ಮಿತ್ರಾ ಒತ್ತಾಯಿಸಿದ್ದಾರೆ.

Exit mobile version