Site icon Vistara News

Communication Skill : ಬಿಸಿನೆಸ್‌ ಜಗತ್ತಿನಲ್ಲಿ ನೀವು ಎಂದಿಗೂ ಕೋಪಗೊಳ್ಳದಿರಿ

ಈ ಒಂದು ಸೂತ್ರವನ್ನು ನೀವು ಕರಗತ ಮಾಡಿದರೆ ಸಂವಹನ ಕೌಶಲದಲ್ಲಿ, ಸಂಧಾನ ಮತ್ತು ಮಾತುಕತೆಯಲ್ಲಿ, ಚರ್ಚೆಗಳಲ್ಲಿ ಮಾಸ್ಟರ್‌ ಆಗಿ ಬಿಡುತ್ತೀರಿ. ( Communication Skill ) ನಿಮ್ಮ ಬಹುತೇಕ ತರ್ಕಗಳು ಏಕೆ ಅನುತ್ಪಾದಕವಾಗುತ್ತವೆ ಹಾಗೂ ನಿರರ್ಥಕ ಎಂಬುದನ್ನೂ ಇದು ಬಿಂಬಿಸುತ್ತದೆ. ಆ ಸೂತ್ರ ಯಾವುದು ಎಂದರೆ-ನೀವೆಂದಿಗೂ ಕೋಪಗೊಳ್ಳಬಾರದು. ತಾಳ್ಮೆಗೆಡಬಾರದು. ಈ ಸೂತ್ರವು ಬಿಸಿನೆಸ್‌ ಜಗತ್ತಿಗೂ ಅನ್ವಯವಾಗುತ್ತದೆ.

ಉದ್ಯಮಶೀಲತೆ ಎಂದರೆ ರಿಸ್ಕ್‌ ಟೇಕಿಂಗ್‌ ಮತ್ತು ಸಂಶೋಧನೆ. ಆದರೆ ಪ್ರತಿಯೊಂದು ಯಶಸ್ವಿ ಬಿಸಿನೆಸ್‌ ಹಿಂದೆ ಉತ್ತಮ ಕಮ್ಯುನಿಕೇಶನ್‌ ಇರುತ್ತದೆ. ಶ್ರೇಷ್ಠ ಉತ್ಪನ್ನ ಅಥವಾ ಸೇವೆಯನ್ನು ನೀವು ನೀಡಬೇಕಿದ್ದರೆ, ಮಾರುಕಟ್ಟೆಯಲ್ಲಿ ಜನಪ್ರಿಯಗೊಳಿಸಬೇಕಿದರೆ ಸಮರ್ಥವಾದ ಕಮ್ಯುನಿಕೇಶನ್‌ ಮುಖ್ಯ.

ಬಹುತೇಕ ಕುಟುಂಬಗಳಲ್ಲೂ ಪತಿ-ಪತ್ನಿಯ ಜಗಳ ಅಥವಾ ವಾದ-ವಿವಾದಗಳಲ್ಲಿ ಒಂದು ಹಂತದ ಬಳಿಕ ಯಾರಾದರೂ ಒಬ್ಬರು ತಮ್ಮ ಕೋಪ-ತಾಪಗಳನ್ನು ಬದಿಗೊತ್ತಿ ಶಾಂತಿ ಕಾಪಾಡುತ್ತಾರೆ. ಇಲ್ಲದಿದ್ದರೆ ಕಲಹ ತಾರಕಕ್ಕೇರಿ ಅನಾಹುತ ಸಂಭವಿಸಬಹುದು. ವಾಸ್ತವ ಏನೆಂದರೆ ನಿಮ್ಮ ವೈಯಕ್ತಿಕ ಜೀವನವೇ ಇರಬಹುದು, ಬಿಸಿನೆಸ್‌ ಲೈಫ್‌ ಆಗಿರಬಹುದು, ಕಮ್ಯುನಿಕೇಶನ್ನೇ ಸಮಸ್ಯೆ ಮತ್ತು ಸಮಸ್ಯೆಯ ಇತ್ಯರ್ಥಕ್ಕೆ ಮೂಲವಾಗಿರುತ್ತದೆ. ಪ್ರತಿಯೊಂದು ಸಂಘರ್ಷವೂ ರಿಲೇಶನ್‌ ಶಿಪ್‌ ಅನ್ನು ಮಾಗಿಸುತ್ತಿದೆಯೇ ಅಥವಾ ದುರ್ಬಲಗೊಳಿಸುತ್ತಿದೆಯೇ ಎಂದು ಗ್ರಹಿಸಬಹುದು. ಆರೋಗ್ಯಕರ ಸಂಘರ್ಷವು ಸಂಬಂಧಗಳನ್ನು ಬಲಪಡಿಸುತ್ತದೆ. ಏಕೆಂದರೆ ಅದು ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗುತ್ತದೆ. ಅನಾರೋಗ್ಯಕರ ಸಂಘರ್ಷವು ಸಂಬಂಧವನ್ನು ಬಿಗಡಾಯಿಸುತ್ತದೆ. ಏಕೆಂದರೆ ಇದು ಪರಸ್ಪರ ವಿರುದ್ಧವಾಗಿರುತ್ತದೆ.

ಒಬ್ಬ ಉದ್ಯಮಿಯಾದವನು ತನ್ನ ಬಿಸಿನೆಸ್‌ನ ಧ್ಯೇಯೋದ್ದೇಶಗಳನ್ನು ಸ್ಪಷ್ಟವಾಗಿ ಕಮ್ಯುನಿಕೇಟ್‌ ಮಾಡಬೇಕಾಗುತ್ತದೆ. ನಿಮ್ಮ ಗುರಿ, ಮಾರುಕಟ್ಟೆ ತಂತ್ರಗಾರಿಕೆಯನ್ನು ನಿರೂಪಿಸಲು ಕೂಡ ಸಂವಹನ ಕಲೆ ಮುಖ್ಯ. ಅಕಸ್ಮಾತ್‌ ನೀವಿದನ್ನು ಮಾಡದಿದ್ದರೆ, ನಿಮ್ಮ ಬಿಸಿನೆಸ್‌ ಅನ್ನು ಅಭಿವೃದ್ಧಿಪಡಿಸುವುದು ಕಷ್ಟ.

ನೀವು ಒಬ್ಬ ಒಳ್ಳೆಯ ಕೇಳುಗನೂ ಆಗಿರಬೇಕು. ಉತ್ತಮ ಸಂವಹನಕಾರರೆಲ್ಲ ಅಷ್ಟೇ ಉತ್ತಮ ಕೇಳುಗರೂ ಆಗಿರುತ್ತಾರೆ. ಏಕೆಂದರೆ ಮೊದಲನೆಯದಾಗಿ ನೀವು ಉದ್ಯಮಿಯಾಗುವುದಿದ್ದರೆ ಗ್ರಾಹಕರು ಏನು ಹೇಳುತ್ತಾರೆ, ಅವರ ಅಗತ್ಯವೇನು ಎಂಬುದನ್ನು ನೀವು ಕೇಳಬೇಕು. ಎರಡನೆಯದಾಗಿ ನಿಮ್ಮ ಬಿಸಿನೆಸ್‌ ಅನ್ನು ಸುಧಾರಿಸಲು ಗ್ರಾಹಕರ ಫೀಡ್‌ ಬ್ಯಾಕ್‌ ಪಡೆಯಬೇಕು. ನೀವು ಒಳ್ಳೆಯ ಕೇಳುಗರಾಗಿರದಿದ್ದರೆ, ಮಹತ್ವದ ಮಾಹಿತಿ ಮಿಸ್‌ ಆಗಬಹುದು.

ನೆಟ್‌ ವರ್ಕಿಂಗ್‌ ಮತ್ತು ಸಂಬಂಧಗಳ ನಿರ್ವಹಣೆ ಉದ್ಯಮಶೀಲತೆಯಲ್ಲಿ ಮುಖ್ಯವಾಗಿರುತ್ತದೆ. ನೀವು ಒಳ್ಳೆಯ ಕಮ್ಯುನಿಕೇಟರ್‌ ಆಗಿರದಿದ್ದರೆ ರಿಲೇಶನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸುವುದು ಕಷ್ಟ. ಏಕೆಂದರೆ ಜನರಿಗೆ ನಿಮ್ಮ ಜತೆಗೆ ವೈಯಕ್ತಿಕವಾಗಿ ಸಂಪರ್ಕ ಸಾಧಿಸಲು ಕಷ್ಟವಾದೀತು. ಅವರೂ ನಿಮ್ಮ ಜತೆ ವಿಶ್ವಾಸ ಹೊಂದದಿರಬಹುದು. ಸಂಭವನೀಯ ಗ್ರಾಹಕರು, ಪಾಲುದಾರಿಕೆ, ಹೂಡಿಕೆದಾರರು ಮತ್ತು ಇತರರ ಜತೆಗೆ ಪ್ರಬಲ ಸಂವಹನ ನಡೆಸಲು ಉತ್ತಮ ಕಮ್ಯುನಿಕೇಶನ್‌ ಸ್ಕಿಲ್‌ ಅವಶ್ಯಕ.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ನೀವು ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ಮಾರಾಟ ಮಾಡಲೇಬೇಕಾಗುತ್ತದೆ. ಕೊನೆಯದಾಗಿ ಉದ್ಯಮಶೀಲತೆ ಎಂದರೆ ಮಾರಾಟ ಮಾಡುವುದು. ಅಷ್ಟು ಮಾತ್ರವಲ್ಲದೆ ನಿಮ್ಮ ಜತೆ ಕೆಲಸ ಮಾಡುವ ತಂಡವನ್ನು ಹುರಿದುಂಬಿಸಬೇಕಾಗುತ್ತದೆ. ಆದರೆ ನಿಮ್ಮ ಟೀಮ್‌ ಜತೆ ಸಮರ್ಥವಾಗಿ ಕಮ್ಯುನಿಕೇಟ್‌ ಮಾಡಲು ಸಾಧ್ಯವಾಗದಿದ್ದರೆ ಇದು ಕಷ್ಟವಾಗುತ್ತದೆ. ಕೊನೆಯದಾಗಿ ಯಶಸ್ವಿ ಉದ್ಯಮಿಯಾಗಲು ಸಂವಹನ ಕಲೆ ಅನಿವಾರ್ಯ.

Exit mobile version