Site icon Vistara News

Company analysis : ಕಂಪನಿಯ ಬೆಳವಣಿಗೆಯನ್ನು ಷೇರು ಹೂಡಿಕೆದಾರರು ತಿಳಿದುಕೊಳ್ಳುವುದು ಹೇಗೆ?

Infront of Bombay stock Exchange

#image_title

ಷೇರು ಹೂಡಿಕೆದಾರರು ಯಾವುದಾದರೂ ಒಂದು ಕಂಪನಿಯ ಷೇರುಗಳನ್ನು ( Company analysis ) ಖರೀದಿಸಿದಾಗ, ಆ ಕಂಪನಿಯ ಮಾಲಿಕತ್ವದಲ್ಲಿ ಒಂದು ಅಂಶವನ್ನು ಪಡೆದಂತಾಗುತ್ತದೆ. ಆದರೆ ಅದೇ ವೇಳೆ ಕಂಪನಿಯ ಷೇರುಗಳು ಲಾಭದಾಯಕವಾಗಬೇಕಿದ್ದರೆ, ಆ ಕಂಪನಿಯು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ದಾಖಲಿಸಬಹುದೇ ಎಂಬುದನ್ನೂ ತಿಳಿದುಕೊಳ್ಳುವುದು ಮುಖ್ಯ. ಕಂಪನಿಯ ಹಳೆಯ ಪರ್ಫಾರ್ಮೆನ್ಸ್‌ ಮತ್ತು ಭವಿಷ್ಯದ ಟ್ರೆಂಡ್‌ ಗಮನಿಸಿ ನಿರ್ಧರಿಸುವುದು ಒಂದು ವಿಧಾನ. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಕಂಪನಿಯ ಗಾತ್ರ ಮತ್ತು ರ‍್ಯಾಂಕಿಂಗ್:‌ ಆಯಾ ಉದ್ಯಮ ಕ್ಷೇತ್ರದಲ್ಲಿ ಕಂಪನಿಯ ಗಾತ್ರ ಮತ್ತು ರ‍್ಯಾಂಕಿಂಗ್‌ ಅನ್ನು ಗಮನಿಸಿದಾಗ ಹೂಡಿಕೆದಾರರಿಗೆ ಹಲವು ಸಂಗತಿಗಳು ಗೊತ್ತಾಗುತ್ತದೆ. ಕಂಪನಿ ಹೊಂದಿರುವ ರಿಸ್ಕ್‌ಗಳ ಬಗ್ಗೆಯೂ ಅರ್ಥ ಮಾಡಿಕೊಳ್ಳಬಹುದು. ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆ, ನಿವ್ವಳ ಲಾಭ, ವಾರ್ಷಿಕ ಆದಾಯದ ಬೆಳವಣಿಗೆಯ ಪ್ರಮಾಣ, ಹೂಡಿಕೆಗೆ ಸಿಗುತ್ತಿರುವ ರಿಟರ್ನ್ಸ್‌, ಮಾರಾಟ ವಹಿವಾಟಿನ ಅಂಕಿ ಅಂಶಗಳು ನಿರ್ಣಾಯಕವಾಗುತ್ತದೆ. ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಹೇಗೆ ತೊಡಗಿಸಿಕೊಂಡಿದೆ ಎಂಬುದನ್ನೂ ಒಂದು ಮಾನದಂಡವಾಗಿ ಪರಿಗಣಿಸಬಹುದು. ಬೆಳವಣಿಗೆಯ ದಾಖಲೆ: ಕಂಪನಿಯ ವಹಿವಾಟಿನ ಬೆಳವಣಿಗೆ, ನಿವ್ವಳ ಆದಾಯ, ಬಂಡವಾಳ, ಸಾಲದ ಪ್ರಮಾಣ ಇತ್ಯಾದಿಗಳನ್ನು ಗಮನಿಸಿದ ಬಳಿಕ, ಇನ್ನೂ ತಿಳಿದುಕೊಳ್ಳಬೇಕಾದ ಅಂಶಗಳು ಇವೆ. ಅವುಗಳ ಪಟ್ಟಿ ಇಲ್ಲಿದೆ-

ಮೊದಲನೆಯದಾಗಿ ಪ್ರೈಸ್‌ ಟು ಅರ್ನಿಂಗ್‌ ರೇಶಿಯೊ. ಎರಡನೆಯದಾಗಿ ವಾರ್ಷಿಕ ಬೆಳವಣಿಗೆಯ ದರ. ಪಿಇ ರೇಶಿಯೊ ಎನ್ನುವುದು ಸ್ಟಾಕ್ಸ್‌ಗಳನ್ನು ಅಳೆಯಲು ಇರುವ ಜನಪ್ರಿಯವಾದ ವಿಧಾನ. ಮಾರುಕಟ್ಟೆಯಲ್ಲಿ ಷೇರು ದುಬಾರಿಯಾಗಿದೆಯೇ, ಅಗ್ಗವಾಗಿದೆಯೇ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಪಿ ಇ ರೇಶಿಯೊ ಎಂದರೆ ಒಂದು ಸ್ಟಾಕ್‌ನ ಗಳಿಸುವ ಸಾಮರ್ಥ್ಯ. ಉದಾಹರಣೆಗೆ ಒಂದು ಷೇರಿಗೆ ಪಿಇ ರೇಶಿಯೊ 20 ಇದ್ದರೆ, ಹೂಡಿಕೆದಾರರು ಆ ಷೇರಿನ ಪ್ರತಿ 1 ರೂ. ಗಳಿಕೆಗೆ ಹೂಡಿಕೆದಾರರು 20 ರೂ. ಕೊಡಲು ರೆಡಿಯಾಗಿರುತ್ತಾರೆ ಎಂದರ್ಥ. ಒಂದು ಷೇರಿನ ಪಿಇ ರೇಶಿಯೊ 20-25 ಇದ್ದರೆ ಉತ್ತಮ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ:Stock Investment : ಷೇರು ಹೂಡಿಕೆದಾರರು ಉತ್ತಮ ಭವಿಷ್ಯದ ಇಂಡಸ್ಟ್ರಿಗಳನ್ನು ಗುರುತಿಸುವುದು ಹೇಗೆ?

ಹಣಕಾಸು ವಿಶ್ಲೇಷಣೆ: ಹೂಡಿಕೆದಾರರು ಕಂಪನಿಯ ಕಳೆದ ಕೆಲವು ವರ್ಷಗಳ ಫೈನಾನ್ಷಿಯಲ್‌ ಸ್ಟೇಟ್‌ಮೆಂಟ್‌ಗಳನ್ನು ಓದಬೇಕು. ಇದರಿಂದ ಕೆಲವು ಫಂಡಮೆಂಟಲ್‌ ರೇಶಿಯೊಗಳನ್ನು ತಿಳಿದುಕೊಳ್ಳಬಹುದು. ದೀರ್ಘಾವಧಿಗೆ ಕಂಪನಿಯು ತನ್ನ ಸಾಲಗಳನ್ನು ಮರು ಪಾವತಿಸುವ ಸಾಮರ್ಥ್ಯ ಹೊಂದಿದೆಯೇ ಎಂಬುದನ್ನು ಕಂಡುಕೊಳ್ಳಬೇಕು. ಸಾಲ ಅಥವಾ ಫಂಡ್‌ ಸಂಗ್ರಹಿಸುವ ಸಾಮರ್ಥ್ಯ ಇದೆಯೇ ಎಂದು ತಿಳಿಯಬೇಕು.

ಆಡಳಿತದ ಉತ್ತಮ ಗುಣಮಟ್ಟ: ಕೆಲವು ಬಿಸಿನೆಸ್‌ ಗ್ರೂಪ್‌ಗಳ ಷೇರುಗಳು ಅದೇ ಕ್ಷೇತ್ರದ ಇತರ ಕಂಪನಿಗಳಿಗಿಂತ ಹೆಚ್ಚಿನ ಮೌಲ್ಯವಿರುವುದನ್ನು ಹೂಡಿಕೆದಾರರು ಗಮನಿಸಬಹುದು. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಏನೆಂದರೆ, ಅಂಥ ಕಂಪನಿಗಳ ಆಡಳಿತದ ಗುಣಮಟ್ಟ ಉನ್ನತ ಮಟ್ಟದಲ್ಲಿ ಇರುವುದು. ಅದು ಹೂಡಿಕೆದಾರರ ವಿಶ್ವಾಸವನ್ನು ವೃದ್ಧಿಸುತ್ತದೆ. ಷೇರುದಾರರಿಗೆ ಕಂಪನಿಯು ಒಳ್ಳೆಯ ಡಿವಿಡೆಂಡ್‌ ಮತ್ತು ಬೋನಸ್‌ ನೀಡುತ್ತಿದೆಯೇ ಎಂಬುದೂ ಮುಖ್ಯವಾಗುತ್ತದೆ. ಕಂಪನಿಯ ಉತ್ಪಾದನಾ ಘಟಕಕಗಳು, ಕಚೇರು ಇರುವ ಸ್ಥಳ, ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವಣ ಸಂಬಂಧ, ಷೇರು ಹಂಚಿಕೆಯ ವಿವರಗಳು ಕೂಡ ನಿರ್ಣಾಯಕ.

Exit mobile version