Site icon Vistara News

Financial Year End: ಈ ಹಣಕಾಸು ವರ್ಷದ ಅಂತ್ಯ ಮಾರ್ಚ್​ 31ರೊಳಗೆ ನೀವು ಮಾಡಲೇಬೇಕಾದ 5 ಕೆಲಸಗಳು ಇವು

Complete These 5 tasks before Financial Year End

#image_title

ಮಾರ್ಚ್​ 31 ಸಮೀಪಿಸುತ್ತಿದೆ. ಎಲ್ಲ ಹಣಕಾಸು ವ್ಯವಹಾರಗಳಿಗೂ ಇದು ನಿರ್ಣಾಯಕ ಘಟ್ಟ ಮತ್ತು ಗಡುವು. ಈ ಮಾರ್ಚ್​ 31ರೊಳಗೆ (Financial Year End) ನೀವು ಒಂದಷ್ಟು ಕಾರ್ಯಗಳನ್ನು ಮುಗಿಸಿರದೆ ಇದ್ದರೆ, ಇದು ನಿಮ್ಮ ಹಣಕಾಸಿನ ವ್ಯವಹಾರದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಅವು ಯಾವವು? ಇಲ್ಲಿದೆ ನೋಡಿ ಮಾರ್ಚ್​ 31ರೊಳಗೆ ನೀವು ಬಹುಮುಖ್ಯವಾಗಿ ಮಾಡಬೇಕಾದ ಐದು ಕೆಲಸಗಳು..

1. ಪಾನ್​ ಮತ್ತು ಆಧಾರ್ ಕಾರ್ಡ್​ ಲಿಂಕ್ ಮಾಡಿಸಿ
ಇದು ಅತ್ಯಂತ ಪ್ರಮುಖವಾಗಿ ನೀವು ಮಾಡಬೇಕಾದ ಕೆಲಸ. ನೀವಿನ್ನೂ ಆಧಾರ್ ಕಾರ್ಡ್ ಮತ್ತು ಪಾನ್​ ಕಾರ್ಡ್ ಲಿಂಕ್ ಮಾಡಿಸಿರದೆ ಇದ್ದರೆ, ಈ ಮಾರ್ಚ್​ 31ರೊಳಗೆ ಮಾಡಿಬಿಡಿ. ಹಾಗೊಮ್ಮೆ ಮಾಡದೆ ಇದ್ದರೆ ನಿಮಗೆ 1000 ರೂಪಾಯಿ ದಂಡ ಬೀಳುತ್ತದೆ ಮತ್ತು ಪಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಮತ್ತೆ ಪಾನ್​ ಕಾರ್ಡ್​​ನ್ನು ಮರು ಸಕ್ರಿಯಗೊಳಿಸಲು 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.

2. ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ
ನೀವಿನ್ನೂ ಯಾವುದೇ ರೀತಿಯ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರದೆ ಇದ್ದರೆ ಮಾರ್ಚ್​ 31ರೊಳಗೆ ಅದನ್ನು ಮಾಡಿ. ಪಿಪಿಎಫ್​, ಸುಕನ್ಯಾ ಸಮೃದ್ಧಿ ಯೋಜನೆ, ನಿಶ್ಚಿತ ಠೇವಣಿ (Fixed Deposit )ಗಳಲ್ಲಿ ಹಣ ಹೂಡಿಕೆ ಮಾಡಿ. ಈ ಮೂಲಕ ನಿಮ್ಮ ತೆರಿಗೆ ಉಳಿತಾಯದ ಲಾಭ ಪಡೆಯಿರಿ.

3. ಮ್ಯೂಚ್ಯುಯಲ್ ಫಂಡ್​ಗಳ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಳಿಸಿ
ಯಾವುದೇ ಮ್ಯೂಚ್ಯುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್​ 31ರೊಳಗೆ ಅದರ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿರುವುದು ಕಡ್ಡಾಯ ಎಂದು ಸೆಬಿ (Securities and Exchange Board of India) ಸುತ್ತೋಲೆ ಹೊರಡಿಸಿದೆ. ಅದರಲ್ಲಿ ನೀವೊಮ್ಮೆ ವಿಫಲವಾದರೆ ನಿಮ್ಮ ಅಕೌಂಟ್​ ಫ್ರೀಜ್​ ಆಗುತ್ತದೆ. ಅಂದರೆ ಬ್ಯಾಂಕ್​ ನಿಮ್ಮ ಅಕೌಂಟ್​ನಿಂದ ಕೆಲವು ವ್ಯವಹಾರಗಳನ್ನು ತಡೆ ಹಿಡಿಯುತ್ತದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಹೊಸ ವರ್ಷದಲ್ಲಿ ಹಳೆ ಬಜೆಟ್, ಎಡವಟ್ಟು ಮಾಡಿದ ಗೆಹ್ಲೋಟ್

4. ಎನ್​ಎಸ್​ಇ ಮ್ಯೂಚುಯಲ್​ ಫಂಡ್​ ಪ್ಲಾಟ್​ಫಾರ್ಮ್​​ನಲ್ಲಿ ಮೊಬೈಲ್​ ನಂಬರ್​ ಮತ್ತು ಇಮೇಲ್ ಐಡಿ ದೃಢೀಕರಿಸಿ
ನ್ಯಾಷನಲ್​ ಸ್ಟಾಕ್​ ಮಾರ್ಕೆಟ್​ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ)ದ ಮ್ಯೂಚುಯಲ್​ ಫಂಡ್ ವೇದಿಕೆ (ಎನ್​ಎಫ್​ಎಂ)ನಲ್ಲಿ ನಿಮ್ಮ ಮೊಬೈಲ್​ ಸಂಖ್ಯೆ ಮತ್ತು ಇಮೇಲ್​ ಐಡಿಯನ್ನು ದೃಢೀಕರಿಸಬೇಕು. ಇದು ಮಾರ್ಚ್​ 31ರೊಳಗೆ ಆಗಬೇಕು. ಎನ್​ಎಸ್​ಇಯಲ್ಲಿ ವ್ಯವಹಾರ ಹೊಂದಿರುವವರಿಗೆ ಇದು ಅನ್ವಯ.

5. ಪಿಪಿಎಫ್​ ಅಕೌಂಟ್​​ಗೆ 500 ರೂ. ವರ್ಗಾಯಿಸಿ
ನಿಮ್ಮ ಪಿಪಿಎಫ್​ ಅಕೌಂಟ್​​ (Public Provident Fund)ಗೆ ಮಾರ್ಚ್​ 31ರೊಳಗೆ 500 ರೂಪಾಯಿ ವರ್ಗಾಯಿಸಿ. ಈ ಪಿಪಿಎಫ್​ ನಿಯಮದ ಅನುಸಾರ ಪ್ರತಿ ಹಣಕಾಸು ವರ್ಷಾಂತ್ಯದಲ್ಲಿ ಖಾತೆದಾರರು ತಮ್ಮ ಖಾತೆಗೆ 500 ರೂ.ವರ್ಗಾಯಿಸಬೇಕು. ಅದಿಲ್ಲದೆ ಹೋದರೆ ಅವರ ಪಿಪಿಎಫ್​ ಅಕೌಂಟ್​ ನಿಷ್ಕ್ರಿಯಗೊಳ್ಳುತ್ತದೆ. ನೀವು ಪಿಪಿಎಫ್​ ಅಕೌಂಟ್ ಹೊಂದಿದ್ದರೆ, ತಿಂಗಳಾಂತ್ಯದೊಳಗೆ 500 ರೂ.ಹಾಕಿಬಿಡಿ.

Exit mobile version