Site icon Vistara News

Infosys | ಇನ್ಫೋಸಿಸ್‌ ಉದ್ಯೋಗಿಗಳಿಗೆ ಮತ್ತೊಂದು ಕಂಪನಿಯ ಕೆಲಸ ಮಾಡಲು ಒಪ್ಪಿಗೆ

Infoysis

ಬೆಂಗಳೂರು: ಐಟಿ ವಲಯದಲ್ಲಿ ಮೂನ್‌ಲೈಟಿಂಗ್‌ ಬಗ್ಗೆ ಚರ್ಚೆ ಕಾವೇರುತ್ತಿದೆ. ಈ ನಡುವೆ ಐಟಿ ದಿಗ್ಗಜ ಇನ್ಫೋಸಿಸ್‌, ತನ್ನ ಉದ್ಯೋಗಿಗಳಿಗೆ ಪೂರ್ವಾನುಮತಿ ಪಡೆದು ಮತ್ತೊಂದು ಕಂಪನಿಯ ಗಿಗ್‌ (Gig work- ಅರೆಕಾಲಿಕ) ಕೆಲಸಗಳನ್ನು ಮಾಡಲು ಅನುಮತಿ ನೀಡಿದೆ.

ಉದ್ಯೋಗಿಗಳು ತಮ್ಮ ಮ್ಯಾನೇಜರ್‌ ಮತ್ತು ಬಿಪಿ-ಎಚ್‌ಆರ್‌ ಅನುಮತಿ ಪಡೆದು ಮತ್ತೊಂದು ಕಂಪನಿಯ ಕೆಲಸ ಮಾಡಬಹುದು. ಆದರೆ ಇನ್ಫೋಸಿಸ್‌ ಜತೆ ಸ್ಪರ್ಧಿಸುತ್ತಿರುವ ಕಂಪನಿಗಳು ಅಥವಾ ಇನ್ಫೋಸಿಸ್‌ನ ಗ್ರಾಹಕ ಕಂಪನಿಗಳ ಜತೆಗೆ ಗಿಗ್‌ ವರ್ಕ್‌ ಮಾಡಬಾರದು ಎಂದು ಇ-ಮೇಲ್‌ ಮೂಲಕ ಇನ್ಫೋಸಿಸ್‌ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಪ್ರಸ್ತುತ ಮ್ಯಾನೇಜರ್‌ ಹಂತದ ಉದ್ಯೋಗಿಗಳಿಗೆ ಮಾತ್ರ ಈ ಇ-ಮೇಲ್‌ ರವಾನೆಯಾಗಿದೆ.

ಉದ್ಯೋಗಿಗಳು ತಮ್ಮ ಮುಖ್ಯ ಯೋಜನೆಗಳ ಜತೆಗೆ ಇತರ ಸಮಯದಲ್ಲಿ ಇತರ ಕಂಪನಿಯ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು. ಹೀಗಿದ್ದರೂ, ಇನ್ಫೋಸಿಸ್‌ ಜತೆಗಿನ ಗ್ರಾಹಕರ ಒಪ್ಪಂದಕ್ಕೆ ಯಾವುದೇ ಚ್ಯುತಿಯಾಗದಂತೆ ಗಿಗ್‌ ವರ್ಕ್‌ ಅನ್ನು ಉದ್ಯೋಗಿಗಳು ನಿರ್ವಹಿಸಬೇಕು ಎಂದು ತಿಳಿಸಿದೆ. ಕಚೇರಿಯ ವೇಳೆಯ ಅವಧಿಯಲ್ಲಿ ಕೂಡ ಇದನ್ನು ಮಾಡಲು ಸಾಧ್ಯವಿಲ್ಲ. ಇತರ ಅವಧಿಯಲ್ಲಿ ನಿರ್ವಹಿಸಬಹುದು.

ಇತ್ತೀಚೆಗೆ ಕಂಪನಿಯ ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿದ ಸಂದರ್ಭ ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್‌ ಅವರು, ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ಗಿಗ್‌ ವರ್ಕ್‌ಗಳನ್ನು ಮಾಡಲು ಅವಕಾಶ ನೀಡಲಾಗುವುದು. ಇದಕ್ಕಾಗಿ ಆಂತರಿಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು. ಕಳೆದ ತ್ರೈಮಾಸಿಕದಲ್ಲಿ ಈ ಅನುಕೂಲ ಪಡೆಯಲು ಬಯಸಿ 4,000 ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ಪೈಕಿ 600 ಅರ್ಜಿಗಳನ್ನು ಅಂಗೀಕರಿಸಲಾಗಿದೆ.

ಮತ್ತೊಂದು ಕಡೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಕೂಡ ಆಂತರಿಕವಾಗಿ ಗಿಗ್‌ ಪದ್ಧತಿಗೆ ಯೋಜಿಸುತ್ತಿದೆ. ಕಂಪನಿ 6 ಲಕ್ಷ ಉದ್ಯೋಗಿಗಳಿಗೆ ಇದರಿಂದ ಸಹಕಾರಿಯಾಗಲಿದೆ.

ಇದನ್ನೂ ಓದಿ: Swiggy new offer| ಸ್ವಿಗ್ಗಿ ಸಂಸ್ಥೆಯ ಸಿಬ್ಬಂದಿಗೆ ಎರಡನೇ ಉದ್ಯೋಗ ಮಾಡಲು ಅವಕಾಶ

Exit mobile version