Site icon Vistara News

Nyoma Airfiled | ಚೀನಾಕ್ಕೆ ಪ್ರತ್ಯುತ್ತರ ನೀಡಲು ಲಡಾಕ್‌ನಲ್ಲಿ ನ್ಯೋಮಾ ಏರ್‌ಫೀಲ್ಡ್‌ ನಿರ್ಮಾಣ

nyoma

ಲಡಾಕ್‌ : ಲಡಾಕ್‌ನ ನ್ಯೋಮಾದಲ್ಲಿ ಭಾರತ ಹೊಸ ಏರ್‌ಫೀಲ್ಡ್‌ ಅನ್ನು ನಿರ್ಮಾಣ ಮಾಡುತ್ತಿದ್ದು, ಗಡಿ ಭಾಗದಲ್ಲಿ ಎಲ್‌ಒಸಿಯ ಆಚೆಗೆ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿರುವ ಚೀನಾಕ್ಕೆ ಪ್ರತ್ಯುತ್ತರ ನೀಡಲು (Nyoma Airfiled) ಸಹಕಾರಿಯಾಗಲಿದೆ.

ಈಗ ಅಲ್ಲಿ ಇರುವ ಸಣ್ಣ ಏರ್‌ಫೀಲ್ಡ್‌ ಮಿಲಿಟರಿಯ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸಲು ಬಳಕೆಯಾಗುತ್ತಿದ್ದು, ಸೀಮಿತ ಸಾಮರ್ಥ್ಯವನ್ನು ಹೊಂದಿದೆ. ಎಲ್‌ಐಸಿಯಿಂದ 50 ಕಿ.ಮೀಗಿಂತಲೂ ಕಡಿಮೆ ಅಂತರದಲ್ಲಿ ಈ ನ್ಯೋಮಾ ಏರ್‌ಫೀಲ್ಡ್‌ ನಿರ್ಮಾಣವಾಗುತ್ತಿದೆ. ಎರಡು ವರ್ಷಗಳಲ್ಲಿ ಈ ಏರ್‌ಫೀಲ್ಡ್‌ ಬಳಕೆಗೆ ಸಿದ್ಧವಾಗಲಿದೆ. ಯುದ್ಧ ವಿಮಾನಗಳಿಗೆ ಅತ್ಯಾಧುನಿಕ ಲ್ಯಾಂಡಿಂಗ್‌ ಗ್ರೌಂಡ್‌ ಇದಾಗಲಿದೆ. 214 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಲಡಾಕ್‌ ಸಮುದ್ರ ಮಟ್ಟದಿಂದ 13,000 ಅಡಿ ಎತ್ತರದಲ್ಲಿದೆ.

ವ್ಯೋಮಾ ಏರ್‌ಫೀಲ್ಡ್‌ 1,235 ಎಕರೆ ಪ್ರದೇಶದಲ್ಲಿ ಹರಡಿದ್ದು, ಮಿಲಿಟರಿ ವಿಮಾನಗಳಿಗೆ ಬೇಕಾದ ಮೂಲಸೌಕರ್ಯ ಮತ್ತು 2.7 ಕಿ.ಮೀ ರನ್‌ವೇಯನ್ನು ಹೊಂದಿದೆ. ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ ಈ ಏರ್‌ಫೀಲ್ಡ್‌ ಯೋಜನೆಯ ಕಾಮಗಾರಿಗಳಿಗೆ ಬಿಡ್‌ಗಳನ್ನು ಆಹ್ವಾನಿಸಿದೆ. ಗಡಿಭಾಗದ ಸೂಕ್ಷ್ಮ ಪ್ರದೇಶಗಳಲ್ಲಿ ಮಿಲಿಟರಿ ವಿಮಾನಗಳು ಮತ್ತು ಸೇನಾ ಪಡೆಯ ಚಲನವಲನಗಳಿಗೆ ಇದರಿಂದ ಹಾದಿ ಸುಗಮವಾಗಲಿದೆ. ಲೇಹ್-ಲೋಮಾ ರಸ್ತೆಗೆ ಇದು ಸಮೀಪದಲ್ಲಿದೆ.

2020ರಿಂದೀಚೆಗೆ ಗಡಿಯಲ್ಲಿ ಚೀನಾ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಗಡಿಯಲ್ಲಿ ಸೇನಾ ಸೌಕರ್ಯಗಳನ್ನು ಬಲಪಡಿಸಿದೆ.

Exit mobile version