ನವ ದೆಹಲಿ: ಕಳೆದ ನಾಲ್ಕು ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ (Crude oil price) ಪ್ರತಿ ಬ್ಯಾರೆಲ್‌ಗೆ 90 ಡಾಲರ್ ಮಟ್ಟಕ್ಕಿಂತ ಕೆಳಕ್ಕೆ ಇಳಿಕೆಯಾಗಿದ್ದು, ಸೋಮವಾರ 70 ಡಾಲರ್‌ಗೆ ತಗ್ಗಿದೆ. ಕಳೆದ ಜೂನ್‌ನಲ್ಲಿ 124 ಡಾಲರ್‌ಗೆ ಏರಿಕೆಯಾಗಿತ್ತು.
ಕಚ್ಚಾ ತೈಲ ದರ ಇಳಿಕೆಯಾಗಿದ್ದೇಕೆ?
ಜಾಗತಿಕ ಆರ್ಥಿಕತೆಯ ಮಂದಗತಿ, ಅಮೆರಿಕ, ಯುರೋಪ್‌ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ಕಚ್ಚಾ ತೈಲ ದರ ಇಳಿಕೆಗೆ ಕಾರಣವಾಗಿದೆ. ಹೀಗಿದ್ದರೂ, ಭಾರತದಲ್ಲಿ ಶೀಘ್ರದಲ್ಲೇ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ತಜ್ಞರು.
ಕಚ್ಚಾ ತೈಲ ದರ ನಾಟಕೀಯವಾಗಿ ಕುಸಿದಿದೆ. ಇದು ಎಷ್ಟು ದಿನ ಕೆಳಮಟ್ಟದಲ್ಲಿ ಇರಲಿದೆ ಎಂದು ಗ್ರಹಿಸುವುದು ಕಷ್ಟ ಎನ್ನುತ್ತಾರೆ ಇಂಡಿಯಾ ರೇಟಿಂಗ್ಸ್‌ನ ಪ್ರಮುಖ ಆರ್ಥಿಕ ತಜ್ಞ ಸುನಿಲ್ ಕುಮಾರ್ ಸಿನ್ಹಾ. ಕಚ್ಚಾ ತೈಲ ದರ ಇಳಿಕೆಯಾದರೆ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ದರ ಇಳಿಕೆ ಸದ್ಯಕ್ಕೆ ಅನಿರೀಕ್ಷಿತ ಏಕೆ?
ತೈಲ ಸಂಸ್ಕರಣೆ ಘಟಕಗಳು ಗ್ರಾಹಕರಿಗೆ ಕಚ್ಚಾ ತೈಲ ದರ ಇಳಿಕೆಯ ಲಾಭವನ್ನು ತಕ್ಷಣ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇಲ್ಲ. ಮೊದಲು ಕಂಪನಿಗಳು ಕಳೆದ ವರ್ಷ ಮಾರಾಟದಲ್ಲಿ ಉಂಟಾಗಿದ್ದ ನಷ್ಟವನ್ನು ಭರ್ತಿ ಮಾಡಲು ಮುಂದಾಗಲಿವೆ. ಕಳೆದ ವರ್ಷ ಏಪ್ರಿಲ್‌ನಿಂದ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ ಎನ್ನುತ್ತಾರೆ ತಜ್ಞರು.