ವಾಷಿಂಗ್ಟನ್: ಕಚ್ಚಾ ತೈಲ ದರ ಈ ವರ್ಷಾಂತ್ಯದ ವೇಳೆಗೆ ಪ್ರತಿ ಬ್ಯಾರೆಲ್‌ಗೆ ೬೫ ಡಾಲರ್‌ಗೆ ಹಾಗೂ ೨೦೨೩ರಲ್ಲಿ ೪೫ ಡಾಲರ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಮೂಲದ ಹಣಕಾಸು ಮತ್ತು ಬ್ರೋಕರೇಜ್ ಕಂಪನಿ ಸಿಟಿಯ ವರದಿ ತಿಳಿಸಿದೆ.
ಸಿಟಿ ವರದಿಯ ಪ್ರಕಾರ ೨೦೨೨ ಮತ್ತು ೨೦೨೩ರಲ್ಲಿ ರಷ್ಯಾದಿಂದ ಕಚ್ಚಾ ತೈಲ ರಫ್ತು ಗಣನೀಯ ಹೆಚ್ಚಳವಾಗಲಿದೆ. ಎರಡನೆಯದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಕುಸಿಯಲಿದೆ. ಇದರ ಪರಿಣಾಮ ತೈಲ ದಾಸ್ತಾನು ಕೂಡ ವೃದ್ಧಿಸಲಿದೆ. ಹೀಗಾಗಿ ದರ ಮತ್ತಷ್ಟು ತಗ್ಗಲಿದೆ. ಜಾಗತಿಕ ಆರ್ಥಿಕತೆಯ ಮಂದಗತಿ, ಪೂರೈಕೆಯಲ್ಲಿ ಕೊರತೆ ಇತ್ಯಾದಿ ಸವಾಲುಗಳು ಮುಂದುವರಿಯಲಿದೆ ಎಂದೂ ಸಿಟಿ ವರದಿ ತಿಳಿಸಿದೆ.
101 ಡಾಲರ್‌ಗೆ ಇಳಿಕೆಯಾದ ಕಚ್ಚಾ ತೈಲ ದರ
ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ೧೦೧ ಡಾಲರ್‌ಗೆ ತಗ್ಗಿದೆ. ಕಳೆದ ವಾರ ಕಚ್ಚಾ ತೈಲ ದರ ೧೦೫ ಡಾಲರ್ ಆಸುಪಾಸಿನಲ್ಲಿತ್ತು.
ತೈಲ ತೆರಿಗೆಯಿಂದ ೯೪,೮೦೦ ಕೋಟಿ ರೂ. ಸಂಗ್ರಹ
ಕಚ್ಚಾ ತೈಲದ ಮೇಲಿನ ತೆರಿಗೆ ವಸೂಲಾತಿಯಿಂದ ಪ್ರಸಕ್ತ ಸಾಲಿನಲ್ಲಿ ಉಳಿದಿರುವ ತಿಂಗಳುಗಳಲ್ಲಿ ೯೪,೮೦೦ ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ. ದೇಶೀಯ ತೈಲ ಮಾರಾಟ ಮತ್ತು ರಫ್ತಿನ ಮೇಲೆ ಸರ್ಕಾರ ತೆರಿಗೆ ವಿಧಿಸುತ್ತದೆ.