ನವ ದೆಹಲಿ: ಭಾರತವು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ವ್ಯಾಪ್ತಿಗೆ ಕ್ರಿಪ್ಟೊ ಕರೆನ್ಸಿಯನ್ನು ಸೇರ್ಪಡೆಗೊಳಿಸಿದೆ. (Crypto currency) ಇದರೊಂದಿಗೆ ಕ್ರಿಪ್ಟೊ ಸೇರಿದಂತೆ ಡಿಜಿಟಲ್ ಆಸ್ತಿಗಳ ವರ್ಗಾವಣೆಗಳ ಮೇಲೆ ನಿಗಾ ವಹಿಸಿದೆ. ಹಣಕಾಸು ಸಚಿವಾಲಯವು ಮಂಗಳವಾರ ನೀಡಿರುವ ನೋಟಿಸ್‌ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ವ್ಯಾಪ್ತಿಗೆ ಕ್ರಿಪ್ಟೊ ವ್ಯವಹಾರಗಳೂ (crypto trading) ಸೇರಿವೆ ಎಂದಿದೆ.
ಕ್ರಿಪ್ಟೊ ಟ್ರೇಡಿಂಗ್, ಸಂಗ್ರಹ, ಸಂಬಂಧಿತ ಹಣಕಾಸು ಸೇವೆಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ವ್ಯಾಪ್ತಿಗೆ (anti money laundering ) ಬರುತ್ತದೆ ಎಂದು ಸರ್ಕಾರ ತಿಳಿಸಿದೆ.
ಡಿಜಿಟಲ್ ಅಸೆಟ್ ಪ್ಲಾಟ್ ಫಾರ್ಮ್‌ಗಳಿಗೆ ಸಂಬಂಧಿಸಿ ಜಾಗತಿಕ ದರ್ಜೆಯ ನಿಯಮಾವಳಿಗಳನ್ನು ಭಾರತ ಕೂಡ ಅನುಸರಿಸಲು ನಿರ್ಧರಿಸಿದೆ.