ಮುಂಬಯಿ: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಬಲಿ ತೆಗೆದುಕೊಂಡ ಭಾನುವಾರದ ರಸ್ತೆ ಅಪಘಾತದಲ್ಲಿ ಪೊಲೀಸರಿಗೆ ಪ್ರಾಥಮಿಕ ತನಿಖೆಯ ಪ್ರಕಾರ, ಕಾರಿನ ಅತಿ ವೇಗದ ಚಾಲನೆಯೇ (Cyrus Mistry Death) ದುರಂತಕ್ಕೆ ಕಾರಣವೆಂದು ಕಂಡು ಬಂದಿದೆ.
ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸೈರಸ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಪಾಲ್ಘಾರ್‌ನಲ್ಲಿ ಚರೋಟಿ ಚೆಕ್ ಪೋಸ್ಟ್ ದಾಟಿದ ಬಳಿಕ ಕಾರು ೨೦ ಕಿ.ಮೀ ದೂರವನ್ನು ಕೇವಲ ೯ ನಿಮಿಷದಲ್ಲಿ ಕ್ರಮಿಸಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದ್ದಾರೆ.
ಭಾನುವಾರ ಮಧ್ಯಾಹ್ನ ೨.೨೧ ಗಂಟೆಗೆ ಕಾರು ಚೆಕ್ ಪೋಸ್ಟ್ ದಾಟಿತ್ತು. ಅಪಘಾತ ೨.೩೦ಕ್ಕೆ ಸಂಭವಿಸಿತ್ತು. ಅಪಘಾಥ ಸಂಭವಿಸಿದ ಸ್ಥಳ ಚೆಕ್‌ಪೋಸ್ಟ್‌ನಿಂದ 20 ಕಿ.ಮೀ ದೂರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯರ ಪ್ರಕಾರ ಮಿಸ್ತ್ರಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಮರ್ಸಿಡಿಸ್ ಕಾರನ್ನು ಮುಂಬಯಿನ ಗೈನಕಾಲಜಿಸ್ಟ್ ಡಾ. ಅನಾಹಿತ ಪಾಂಡೊಲೆ ಚಲಾಯಿಸುತ್ತಿದ್ದರು.
ಇದನ್ನೂ ಓದಿ:Cyrus Mistry | ಟಾಟಾ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ವಿಧಿವಶ, ಮೋದಿ ಸಂತಾಪ