ನವ ದೆಹಲಿ: ಎಫ್‌ಎಂಸಿಜಿ ವಲಯದ ದಿಗ್ಗಜ ಕಂಪನಿ ಡಾಬರ್ ಇಂಡಿಯಾ ಲಿಮಿಟೆಡ್, (Dabur acquired Badshah) ಬಾದ್‌ಶಾ ಮಸಾಲಾ ಕಂಪನಿಯಲ್ಲಿನ 51% ಷೇರುಗಳನ್ನು ಖರೀದಿಸಿದೆ.
ಡಾಬರ್ ಇಂಡಿಯಾ ಲಿಮಿಟೆಡ್ 99,528 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಲಾರ್ಜ್ ಕ್ಯಾಪ್ ಕಂಪನಿಯ ಸಾಲಿಗೆ ಸೇರಿದೆ. 2023ರ ಜನವರಿ 2ರಂದು ಡೀಲ್ ಪೂರ್ಣವಾಗಿದೆ.
ಡಾಬರ್ ಇಂಡಿಯಾ ಷೇರು ದರ ಮಂಗಳವಾರ 562 ರೂ.ಗಳ ಮಟ್ಟದಲ್ಲಿ ಇತ್ತು. ಈ ಹಿಂದಿನ ದರಕ್ಕೆ ಹೋಲಿಸಿದರೆ ಏರಿಕೆಯಾಗಿದೆ. ಡಾಬರ್ ಇಂಡಿಯಾ 139 ವರ್ಷ ಹಳೆಯ ಎಫ್‌ಎಂಸಿಜಿ ಕಂಪನಿಯಾಗಿದ್ದು, ಉದ್ಯಮಿ ಎಸ್‌ಕೆ ಬರ್ಮನ್ 1884ರಲ್ಲಿ ಸ್ಥಾಪಿಸಿದ್ದರು. ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಬಾದ್‌ಶಾ ಮಸಾಲಾ ಮುಂಬಯಿ ಮೂಲದ ಕಂಪನಿಯಾಗಿದ್ದು, 1958ರಲ್ಲಿ ಸ್ಥಾಪನೆಯಾಗಿದೆ.