ನವ ದೆಹಲಿ: ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಜತೆಗೆ ಲಿಂಕ್ ಮಾಡಲು (Voter ID-Aadhaar card Linking) ವಿಧಿಸಿದ್ದ 2023ರ ಮಾರ್ಚ್ 31ರ ಗಡುವನ್ನು 2024ರ ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ. ನಾಗರಿಕರು 2024ರ ಮಾರ್ಚ್ 31ರೊಳಗೆ ಆನ್‌ಲೈನ್ ಮೂಲಕ ಅಥವಾ ಎಸ್ಸೆಮ್ಮೆಸ್ ಮೂಲಕ ಆಧಾರ್-ವೋಟರ್ ಐಡಿ ಲಿಂಕ್ ಮಾಡಬಹುದು.
ಹೀಗಿದ್ದರೂ ಇದು ಕಡ್ಡಾಯವಲ್ಲ. ಐಚ್ಛಿಕವಾಗಿದೆ. ಚುನಾವಣಾ ಆಯೋಗದ ಪ್ರಕಾರ ಒಂದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ವೋಟರ್ ಐಡಿ ಹೊಂದಿರುವುದನ್ನು ಗುರುತಿಸಲು ಹಾಗೂ ಒಂದೇ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದಿರುವುದನ್ನು ಪತ್ತೆ ಹೆಚ್ಚಲು ಆಧಾರ್ ಜತೆ ಲಿಂಕ್ ಮಾಡುವುದರಿಂದ ಸಹಕಾರಿಯಾಗಲಿದೆ.
ವೋಟರ್ ಐಡಿ ಜತೆ ಆಧಾರ್ ಲಿಂಕ್ ಹೇಗೆ?
ನ್ಯಾಶನಲ್ ವೋಟರ್ಸ್ ಸರ್ವೀಸ್ ಪೋರ್ಟಲ್‌ಗೆ ಭೇಟಿ ಕೊಡಿ (National voters service portal) https://nvsp.in
search in Electoral Roll ಆಯ್ಕೆಗೆ ಹೋಗಿ
ಆಧಾರ್ ಸಂಖ್ಯೆ ದಾಖಲಿಸಿ
ಬಳಿಕ ನೋಂದಾಯಿತ ಮೊಬೈಲ್‌ಗೆ ಅಥವಾ ಇ-ಮೇಲ್‌ಗೆ ಒಟಿಪಿ ಬರುತ್ತದೆ.
ಒಟಿಪಿ ದಾಖಲಿಸಿ, ವೋಟರ್ ಐಡಿಯು ಆಧಾರ್ ಕಾರ್ಡ್‌ಗೆ ಲಿಂಕ್ ಆಗುತ್ತದೆ.