Site icon Vistara News

World Idli Day : ಸ್ವಿಗ್ಗಿಯಲ್ಲಿ 1 ವರ್ಷಕ್ಕೆ 3.3 ಕೋಟಿ ಪ್ಲೇಟ್‌ ಇಡ್ಲಿಗೆ ಬೇಡಿಕೆ, ಬೆಂಗಳೂರಿಗರಿಗೆ ಯಾವುದು ಇಷ್ಟ?

Idli

ಹೈದರಾಬಾದ್:‌ ವಿಶ್ವ ಇಡ್ಲಿ ದಿನದ ಪ್ರಯುಕ್ತ ಸ್ವಿಗ್ಗಿ ಗುರುವಾರ ಕೆಲ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಅದರ ಪ್ರಕಾರ ಸ್ವಿಗ್ಗಿಯು ಕಳೆದೊಂದು ವರ್ಷದದಲ್ಲಿ 3.3 ಕೋಟಿ ಪ್ಲೇಟ್‌ ಇಡ್ಲಿಗೆ ಆರ್ಡರ್‌ಗಳನ್ನು ಸ್ವೀಕರಿಸಿತ್ತು.‌ 2022ರ ಮಾರ್ಚ್‌ 30ರಿಂದ 2023ರ ಮಾರ್ಚ್‌ 25 ತನಕದ ಅಂಕಿ ಅಂಶಗಳನ್ನು ಸ್ವಿಗ್ಗಿ ಪರಿಗಣಿಸಿದೆ.‌ (World Idli Day) ಬೆಂಗಳೂರು, ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ಹೆಚ್ಚು ಆರ್ಡರ್‌ಗಳು ಸ್ವಿಗ್ಗಿಗೆ ಲಭಿಸಿದೆ.

ಮುಂಬಯಿ, ಕೊಯಮತ್ತೂರು, ಪುಣೆ, ವಿಜಾಗ್‌, ದಿಲ್ಲಿ, ಕೋಲ್ಕತಾ, ಕೊಚ್ಚಿಯಲ್ಲೂ ಇಡ್ಲಿ ಪ್ರಿಯರ ಸಂಖ್ಯೆ ಗಣನೀಯವಾಗಿ ಇದೆ ಎಂದು ಸ್ವಿಗ್ಗಿಯ ವರದಿ ತಿಳಿಸಿದೆ. ಬೆಳಗ್ಗೆ 8ರಿಂದ 10 ಗಂಟೆಯ ಅವಧಿಯಲ್ಲಿ ಇಡ್ಲಿಗೆ ಹೆಚ್ಚಿನ ಆರ್ಡರ್‌ಗಳು ಸಿಗುತ್ತವೆ. ಚೆನ್ನೈ, ಹೈದರಾಬಾದ್‌, ಬೆಂಗಳೂರು, ಕೊಯಮತ್ತೂರು ಮತ್ತು ಮುಂಬಯಿನಲ್ಲಿ ಊಟದ ವೇಳೆಯಲ್ಲೂ ಇಡ್ಲಿಗೆ ಆರ್ಡರ್‌ ಮಾಡುತ್ತಾರೆ ಎಂದು ವರದಿ ತಿಳಿಸಿದೆ. ಎಲ್ಲ ಕಡೆಯಲ್ಲೂ ಪ್ಲೇನ್‌ ಇಡ್ಲಿಗೆ ಬೇಡಿಕೆ ಹೆಚ್ಚು,. ಸಾಮಾನ್ಯವಾಗಿ ಒಂದು ಪ್ಲೇಟ್‌ನಲ್ಲಿ ಎರಡು ಇಡ್ಲಿ ಇರುತ್ತದೆ.

ಬೆಂಗಳೂರಿನಲ್ಲಿ ರವೆ ಇಡ್ಲಿ ಜನಪ್ರಿಯ: ಎಲ್ಲ ನಗರಗಳಲ್ಲೂ ಸಾಮಾನ್ಯ ಇಡ್ಲಿ ಹೆಚ್ಚು ಮಾರಾಟವಾಗುತ್ತದೆ. ಆದರೆ ಅದು ಬಿಟ್ಟರೆ ಬೆಂಗಳೂರಿನಲ್ಲಿ ಜನತೆಗೆ ರವೆ ಇಡ್ಲಿ ಅತ್ಯಂತ ಜನಪ್ರಿಯವಾಗಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನೇಯ್ಯಿ ಖಾರಮ್ ಪೋಡಿ ಇಡ್ಲಿ ಜನಪ್ರಿಯವಾಗಿದೆ ಎಂದು ಸ್ವಿಗ್ಗಿ ವರದಿ ತಿಳಿಸಿದೆ. ತಟ್ಟೆ ಇಡ್ಲಿ, ಮಿನಿ ಇಡ್ಲಿಗೂ ಬೇಡಿಕೆ ಇದೆ ಎಂದಿದೆ.

ಒಬ್ಬ ವ್ಯಕ್ತಿಯಿಂದ 6 ಲಕ್ಷ ಇಡ್ಲಿಗೆ ಆರ್ಡರ್:

ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು (World Idli Day) ಕಳೆದ 12 ತಿಂಗಳಿನಲ್ಲಿ ಇಡಿಗೋಸ್ಕರ 6 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ. ಆನ್‌ಲೈನ್‌ ಮೂಲಕ ಆರ್ಡರ್‌ಗಳನ್ನು ಸ್ವೀಕರಿಸಿ ಆಹಾರ ವಿತರಿಸುವ ಸ್ವಿಗ್ಗಿ, ವಿಶ್ವ ಇಡ್ಲಿ ದಿನದ ಪ್ರಯುಕ್ತ ತನ್ನ ವಿಶ್ಲೇಷಣೆಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ಸ್ವಿಗ್ಗಿಯ ಹೈದರಾಬಾದ್‌ ಮೂಲದ ಬಳಕೆದಾರರೊಬ್ಬರು ಕಳೆದ 12 ತಿಂಗಳುಗಳಲ್ಲಿ 8,428 ಪ್ಲೇಟ್‌ ಇಡ್ಲಿಗಳನ್ನು ಖರೀದಿಸಿದ್ದಾರೆ. ಇದರ ಬೆಲೆ 6 ಲಕ್ಷ ರೂ.ಗಳಾಗಿದೆ.

ಹೈದರಾಬಾದ್‌ನ ಸ್ವಿಗ್ಗಿ ಬಳಕೆದಾರರೊಬ್ಬರಿಗೆ ಇಡ್ಲಿ ಎಂದರೆ ಬಲು ಇಷ್ಟ. ಕಳೆದೊಂದು ವರ್ಷದಲ್ಲಿ 6 ಲಕ್ಷ ರೂ. ಬೆಲೆಯ ಇಡ್ಲಿಗಳನ್ನು ಖರೀದಿಸಿದ್ದ ಅವರು ಕುಟುಂಬ, ಬಂಧುಗಳು, ಸ್ನೇಹಿತರಿಗೆ ಹಂಚಿದ್ದಾರೆ.

Exit mobile version