Site icon Vistara News

ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಏರ್‌ಲೈನ್‌ಗಳ ಆಡಿಟ್‌ ಆರಂಭಿಸಿದ ಡಿಜಿಸಿಎ

air india deal

ನವ ದೆಹಲಿ: ಕಳೆದ ೪೫ ದಿನಗಳಲ್ಲಿ ಹಲವಾರು ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿರುವ ಹಿನ್ನೆಲೆಯಲ್ಲಿ ಏರ್‌ಲೈನ್‌ಗಳ ವಿಶೇಷ ಆಡಿಟ್‌ ವರದಿಯನ್ನು ವಿಮಾನಯಾನ ನಿರ್ದೇಶನಾಲಯ ಡಿಜಿಸಿಎ ಆರಂಭಿಸಿದೆ.

ವಿಮಾನಗಳ ನಿರ್ವಹಣೆಗೆ ಸಿಬ್ಬಂದಿ ಬಳಸುತ್ತಿರುವ ಸಲಕರಣೆಗಳು, ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಬಗ್ಗೆ ಆಡಿಟ್‌ ವರದಿ ಸಿದ್ಧವಾಗಲಿದೆ.

ಡಿಜಿಸಿಎಯ ಈ ಲೆಕ್ಕ ಪರಿಶೋಧನೆ ಎರಡು ತಿಂಗಳುಗಳ ಕಾಲ ನಡೆಯಲಿದೆ. ನುರಿತ ಸಿಬ್ಬಂದಿ ಏರ್ ಲೈನ್‌ಗೆ ಲಭ್ಯರಿದ್ದಾರೆಯೇ ಎಂಬುದನ್ನೂ ಡಿಜಿಸಿಎ ಪರಿಶೀಲಿಸಲಿದೆ. ಕಳೆದ ೪೫ ದಿನಗಳಲ್ಲಿ ಪದೇಪದೆ ತಾಂತ್ರಿಕ ಅಡಚಣೆಯ ಪ್ರಕರಣಗಳು ಸಂಭವಿಸಿದ್ದು, ವಿಮಾನಯಾನ ವಲಯದಲ್ಲಿ ಕಳವಳಕ್ಕೆ ಕಾರಣವಾಗಿದೆ. ಕಳೆದ ಜುಲೈ ೫ರಿಂದ ೯ ಪ್ರಕರಣಗಳು ವರದಿಯಾಗಿವೆ.

ಡಿಜಿಸಿಎ ( Directorate General of Civil Aviation) ಕೂಡ ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿದೆ. ಜುಲೈ ೧೮ರಂದು ಡಿಜಿಸಿಎ ವಿಶೇಷ ಆಡಿಟ್‌ ವರದಿಗೆ ಆದೇಶಿಸಿತ್ತು.

Exit mobile version