ಸೂರತ್: ವಜ್ರದ ಉತ್ಪಾದನೆಯಲ್ಲಿ 21% ಇಳಿಕೆಯಾಗಿರುವ ಪರಿಣಾಮ ಗುಜರಾತ್‌ನ ಸೂರತ್‌ನಲ್ಲಿ ಇದೇ ಉದ್ದಿಮೆಯನ್ನು ಅವಲಂಬಿಸಿದ್ದ 10,000 ಮಂದಿ ಉದ್ಯೋಗ (Dimond production) ಕಳೆದುಕೊಂಡಿದ್ದಾರೆ.
ಸಾಮೂಹಿಕ ಉದ್ಯೋಗ ನಷ್ಟದ ಜತೆಗೆ ಸಾವಿರಾರು ಕೆಲಸಗಾರರ ವೇತನ ಕಡಿತ ಸಂಭವಿಸಿದೆ ಎಂದು ಸೂರತ್ ವಜ್ರದ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಮೇಶ್ ಜಿಲಾರಿಯಾ ತಿಳಿಸಿದ್ದಾರೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಇಎಂಐ ಕಟ್ಟಲಾಗದೆ ಕಾರ್ಮಿಕರು ಕಂಗಾಲಾಗಿದ್ದಾರೆ. ವಜ್ರದ ಉದ್ದಿಮೆಗಳ ಸಣ್ಣ ಪುಟ್ಟ ಘಟಕಗಳು ಮುಚ್ಚಿರುವುದು ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ವಜ್ರದ ಉದ್ದಿಮೆ ವಲಯದಲ್ಲಿ ಕಾರ್ಮಿಕ ಕಾನೂನುಗಳು ಬಿಗಿಯಾಗಿ ಜಾರಿಯಾಗಬೇಕು. ಅಮೆರಿಕ ಮತ್ತು ಇತರ ದೇಶಗಳಲ್ಲಿ ವಜ್ರದ ಉತ್ಪಾದನೆ ಇಳಿಮುಖವಾಗಿದೆ ಎಂದು ಜೆಮ್ಸ್ & ಜ್ಯುವೆಲ್ಲರಿ ಪ್ರಮೋಶನ್ ಕೌನ್ಸಿಲ್‌ನ ಪ್ರಾದೇಶಿಕ ಅಧ್ಯಕ್ಷ ವಿಜಯ್ ಮಾಂಗುಕಿಯಾ ತಿಳಿಸಿದ್ದಾರೆ. ಸೂರತ್‌ನಲ್ಲಿ 3,000 ಘಟಕಗಳು 7 ಲಕ್ಷ ಜನರಿಗೆ ಉದ್ಯೋಗ ನೀಡಿವೆ.